ಸಮಾಜ ಒಗ್ಗಟ್ಟಾಗಿದ್ದರೆ ಮಾತ್ರ ಸಮಾಜಸೇವೆ ಮಾಡುವವರನ್ನು ಗುರುತಿಸುವುದು ಸಾಧ್ಯ -ಶಶಿಧರ್ ನಾಯ್ಕ್
ಹೊಸನಗರ: ಸಮಾಜದ ಜನರನ್ನು ಒಂದುಗೂಡಿಸಲು ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ಪರಿಣಾಮಕಾರಿ ಎಂದು ಕೋಟೆಗಾರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶಶಿಧರ್ ನಾಯ್ಕ್ ಅವರು ಹೇಳಿದರು.
ಕೋಟೆಗಾರ್ ಯುವಕ ಸಂಘ, ಕೋಟೆಗಾರ್ ವಿದ್ಯಾವರ್ಧಕ ಸಂಘ ಹಾಗೂ ಕೋಟೆಗಾರ್ ಮಹಿಳಾ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಸೀತಾರಾಮಚಂದ್ರ ಸಭಾಭವನದ ಆವರಣದಲ್ಲಿ ರಾಮನವಮಿ ಅಂಗವಾಗಿ ರಾಮ ವಸಂತ ಪೂಜೆ, ಸಾಮೂಹಿಕ ಸತ್ಯನಾರಾಯಣ ವ್ರತ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಸಂಜೆ ವೇದಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಸಮಾಜ ಒಗ್ಗಟ್ಟಾಗಿದ್ದರೆ ಮಾತ್ರ ಸಮಾಜಸೇವೆ ಮಾಡುವವರನ್ನು ಗುರುತಿಸುವುದು ಸಾಧ್ಯ. ಇಲ್ಲದಿದ್ದರೆ ಬಲಿಷ್ಠ ಸಮಾಜಗಳು ದುರ್ಬಲರನ್ನು ತುಳಿಯುವ ಸಾಧ್ಯತೆ ಇರುತ್ತದೆ. ಹೊಸನಗರದಲ್ಲಿ ಹೆಚ್ಚಿನ ಜನಸಂಖ್ಯೆ ಇದ್ದರೂ ವಿಭಜನೆಯಿಂದಾಗಿ ಹಿನ್ನಡೆಯಾಗುತ್ತಿದೆ. ಆದ್ದರಿಂದ ಎಲ್ಲರೂ ಧಾರ್ಮಿಕ ಮತ್ತು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಒಂದಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟೆಗಾರ್ ಯುವಕ ಸಂಘದ ಅಧ್ಯಕ್ಷ ಮಾವಿನಕೊಪ್ಪ ಸತೀಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೋಟೆಗಾರ್ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಪಿ.ಆರ್. ಸಂಜೀವ, ಯುವಕ ಸಂಘದ ಗೌರವಾಧ್ಯಕ್ಷ ಅರುಣ್ ಕುಮಾರ್, ಮಹಿಳಾ ಸಂಘದ ಅಧ್ಯಕ್ಷೆ ಶ್ರೀದೇವಿ ಹನುಮಂತ್, ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಮಂಜುನಾಥ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹೊಸನಗರದಲ್ಲಿ 35 ವರ್ಷಗಳ ಕಾಲ ಪತ್ರಿಕಾ ವಿತರಕರಾಗಿ ಹಾಗೂ ವರದಿಗಾರರಾಗಿ ಸೇವೆ ಸಲ್ಲಿಸಿರುವ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಎಸ್. ನಾಗರಾಜ್, ನಾಟಿ ವೈದ್ಯೆ ಪ್ರೇಮ ನಾರಾಯಣ, ಏರ್‌ಫೋರ್ಸ್ ಉದ್ಯೋಗಿ ಅಂಕುಶ್ ಅವರ ತಂದೆ ಪ್ರಕಾಶ್–ಕಾವೇರಿ ದಂಪತಿ ಹಾಗೂ ಸುಮಾರು 200ಕ್ಕೂ ಹೆಚ್ಚು ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಸ್ಥಳಾಂತರಿಸಿರುವ ಉರಗ ತಜ್ಞ ಗಣೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹೊಸನಗರ ಸಾರ್ವಜನಿಕ ಅಸ್ವತ್ರೆಯ ಪ್ರಧಾನ ಆಡಳಿತಾಧಿಕಾರಿಯಾಗಿ ಡಾ.ಹೇಮಂತ್ ನೇಮಕ

ಹೊಸನಗರ: ಹೊಸನಗರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಪ್ರಧಾನ ಆಡಳಿತಾಧಿಕಾರಿಯಾಗಿ ಸುಮಾರು ಐದು ವರ್ಷಗಳಿಂದ ಸರ್ಜನ್ ಹಾಗೂ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಎಸ್.ಎನ್ ಹೇಮಂತ್‌ರವರನ್ನು ನೇಮಕ ಮಾಡಲಾಗಿದೆ.
ಈ ಹಿಂದೆ ಪ್ರದಾನ ಆಡಳಿತಾಧಿಕಾರಿಯಾಗಿ ಡಾ. ಲಿಂಗರಾಜ್‌ರವರು ಕಾರ್ಯನಿರ್ವಹಿಸುತ್ತಿದ್ದರು.

















Leave a Reply