ರಿಪ್ಪನ್ ಪೇಟೆ- ಗಾಳಿಬೈಲ್ ನಲ್ಲಿ ರಂಜಾನ್ ಸಂಭ್ರಮ

Blue and Red Voter Education Banner 20260321 200304 0000 scaled ರಿಪ್ಪನ್ ಪೇಟೆ- ಗಾಳಿಬೈಲ್ ನಲ್ಲಿ ರಂಜಾನ್ ಸಂಭ್ರಮ
Spread the love

ರಿಪ್ಪನ್ ಪೇಟೆ: ಟ್ಟಣದ ಜುಮ್ಮಾ ಮಸೀದಿ ಹಾಗೂ ಮೆಕ್ಕಾ ಮಸೀದಿಯಲ್ಲಿ ಈದ್-ಉಲ್-ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಒಂದು ತಿಂಗಳ ರಮ್ಜಾನ್ ಉಪವಾಸದ ನಂತರ ವಿಶೇಷ ನಮಾಜ್ ಸಲ್ಲಿಸಲಾಯಿತು. ಬಳಿಕ ಭಕ್ತರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.

ಮೆರವಣಿಗೆಯ ನಂತರ  ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಬಳಿಕ ಮಾತನಾಡಿದ ಧರ್ಮಗುರು ಮುನೀರ್ ಸಖಾಫಿ, ಪೈಗಂಬರ್ ಅವರ ಜೀವನ ಸಂದೇಶವನ್ನು ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು. ಭಾರತ ದೇಶವು ವಿವಿಧತೆಯಲ್ಲಿ ಏಕತೆಯ ಪ್ರತೀಕವಾಗಿದ್ದು, ಎಲ್ಲ ಧರ್ಮಗಳ ಸಾರ ಒಂದೇ ಆಗಿದೆ. ಯಾವುದೇ ಜಾತಿ-ಧರ್ಮ ಭೇದವಿಲ್ಲದೆ ಭಾವೈಕ್ಯತೆಯಿಂದ ಬದುಕುವುದು ಅತ್ಯಾವಶ್ಯಕ ಎಂದರು.


ಗಾಳಿಬೈಲು : ರಂಜಾನ್ ಹಬ್ಬದ ಸಂಭ್ರಮ

d 21 rpt 3p7588751769042299149 ರಿಪ್ಪನ್ ಪೇಟೆ- ಗಾಳಿಬೈಲ್ ನಲ್ಲಿ ರಂಜಾನ್ ಸಂಭ್ರಮ

ರಿಪ್ಪನ್ ಪೇಟೆ: ಸಮೀಪದ ಗಾಳಿಬೈಲು ಗ್ರಾಮದಲ್ಲಿ ರಂಜಾನ್ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ ಭಕ್ತರು ಮೆರವಣಿಗೆ ನಡೆಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಉತ್ಸಾಹಭರಿತ ವಾತಾವರಣ ಕಂಡುಬಂತು.

Leave a Reply

Your email address will not be published. Required fields are marked *