ಮಾರ್ಚ್ 21 ರಂದು ಕಣಬಂದೂರು ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನದ 17 ನೇ ವರ್ಷದ ವಾರ್ಷಿಕೋತ್ಸವ

Blue and Red Voter Education Banner 20260319 161605 0000 scaled ಮಾರ್ಚ್ 21 ರಂದು ಕಣಬಂದೂರು ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನದ 17 ನೇ ವರ್ಷದ ವಾರ್ಷಿಕೋತ್ಸವ
Spread the love

ರಿಪ್ಪನ್ ಪೇಟೆ: ಮೀಪದ ಕಣಬಂದೂರು ಗ್ರಾಮದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನ 17ನೇ ವರ್ಷದ ವಾರ್ಷಿಕೋತ್ಸವ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ನೇರವೇರಲಿದೆ.

ದಿನಾಂಕ 21-03-2026ನೇ ಶನಿವಾರ, ಬೆಳಿಗ್ಗೆ 10 ಗಂಟೆಗೆ ಕಣಬಂದೂರು ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ 17ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ನೆರವೇರಿಸಲು ನಿಶ್ಚಯಿಸಲಾಗಿದೆ.

ಕಾರ್ಯಕ್ರಮಗಳು :
ದಿನಾಂಕ 21-03-2026ನೇ ಶನಿವಾರ ಬೆಳಿಗ್ಗೆ 10-00 ಗಂಟೆಗೆ ಆಗಮಿಕ ಮತ್ತು ತಾಂತ್ರಿಕ ಶ್ರೀ ಶ್ರೀಧರಭಟ್, ಕೆಂಜಿಗಾಪುರ ಮತ್ತು ಶ್ರೀ ರಾಮಮೂರ್ತಿ ಉಡುಪ ಅರ್ಚಕರು, ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನ, ಕಣಬಂದೂರು ಇವರ ನೇತೃತ್ವದಲ್ಲಿ

ಗಣಪತಿ ಪೂಜೆ, ಪುಣ್ಯಾಹ, ಏಕೋತ್ಸವ ಹವನ, ಪೂರ್ಣಾಹುತಿ ಬಲಿ, ಮಹಾಮಂಗಳಾರತಿ

ಮತ್ತು

ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ನಂತರ ರಥೋತ್ಸವ

ಮಧ್ಯಾಹ್ನ 1-30ರಿಂದ ಸಾಮೂಹಿಕ ಅನ್ನ ಸಂತರ್ಪಣೆ

ಭಜನಾ ಕಾರ್ಯಕ್ರಮ :

ಇದೇ ದಿನ ಸಂಜೆ 7-00ರಿಂದ ದೀಪೋತ್ಸವ ಮುಗೂಡ್ತಿ ಶ್ರೀ ಸಿಧ್ಧಿವಿನಾಯಕ ಭಜನಾ ತಂಡ  ಹಾಗೂ ಕಾರಗೋಡು ಶ್ರೀ ಕಲಾನಾಥೇಶ್ವರ ಭಜನಾ ತಂಡ  ಹಾಗೂ ಕರಡಿಗ ಶಿವಶಕ್ತಿ ಭಜನಾ ತಂಡ  ಇವರಿಂದ ಭಜನಾ ಕಾರ್ಯಕ್ರಮ ನಂತರ ಪೂಜೆ ,ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ಇರಲಿದೆ.

ಭಕ್ತಾಧಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತನು-ಮನ ಧನ ಪೂರ್ವಕವಾಗಿ ಸಹಕರಿಸಿ, ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಅಧ್ಯಕ್ಷರು ಮತ್ತು ಸದಸ್ಯರು ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನ ಸೇವಾ ಸಮಿತಿ ಇವರಿಂದ ವಿನಂತಿಸಲಾಗಿದೆ.

fb img 1773917243898853637324198915457 ಮಾರ್ಚ್ 21 ರಂದು ಕಣಬಂದೂರು ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನದ 17 ನೇ ವರ್ಷದ ವಾರ್ಷಿಕೋತ್ಸವ
img 20260319 wa00154182107550440319144 ಮಾರ್ಚ್ 21 ರಂದು ಕಣಬಂದೂರು ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನದ 17 ನೇ ವರ್ಷದ ವಾರ್ಷಿಕೋತ್ಸವ

Leave a Reply

Your email address will not be published. Required fields are marked *