ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ಪಕ್ಷಾತೀತ ಹೋರಾಟ

NAADI NEWS 20260307 174348 0000 ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ಪಕ್ಷಾತೀತ ಹೋರಾಟ
Spread the love

ರಿಪ್ಪನ್‌ಪೇಟೆ : ಹಿಂದೆ ಇದ್ದ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರುಸ್ಥಾಪನೆ ಮಾಡುವುದರೊಂದಿಗೆ ಹಿಂದೂಳಿದಿರುವ ಈ ತಾಲ್ಲೂಕ್ ಆಭಿವೃದ್ದಿ ಪಡಿಸುವುದು ಸೇರಿದಂತೆ ಹೊಸನಗರ ಕೊಡಚಾದ್ರಿ ರಾಮಚಂದ್ರಪುರ ನಗರ ಕೋಟೆ ಹೀಗೆ ಹಲವು ಪ್ರವಾಸಿ ಪ್ರೇಕ್ಷಣಿಯ ಸ್ಥಳಗಳಿರುವ ಕ್ಷೇತ್ರದ ಸರ್ವಾಂಗೀಣಾಭಿವೃದ್ದಿಯೊಂದಿಗೆ ಹೆಚ್ಚು ಸಹಕಾರಿಯಾಗುವುದು ಆ ನಿಟ್ಟಿನಲ್ಲಿ ಸರ್ಕಾರದ ಗಮನಸೆಳೆಯಲು ಏಪ್ರಿಲ್ ೬ ರಂದು ನಗರದಿಂದ ಬೃಹತ್ ಪ್ರಮಾಣದಲ್ಲಿ ಪಾದಯಾತ್ರೆಯನ್ನು   ಹಮ್ಮಿಕೊಳ್ಳಲಾಗಿದೆ ಎಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಮ.ನಿ.ಪ್ರ.ಆಭಿನವ ಚನ್ನಬಸವ ಮಹಾಸ್ವಾಮಿಜಿ ಕರೆ ನೀಡಿದರು. ಅವರು ರಿಪ್ಪನ್‌ಪೇಟೆಯ ಶ್ರೀರಾಮ ಮಂದಿರದಲ್ಲಿ ಅಯೋಜಿಸಲಾದ ಹೋರಾಟದ ಪೂರ್ವಭಾವಿ ಸಭೆಯ ದಿವ್ಯಸಾನಿದ್ಯವನ್ನು ವಹಿಸಿ ಆಶೀರ್ವಚನ ನೀಡಿ ಈ ಹಿಂದೆ ಹೊಸನಗರ ವಿಧಾನಸಭಾ  ಕ್ಷೇತ್ರವನ್ನು ವಿಗಂಡಿಸಿ ಸಾಗರ- ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಗಳಿಗೆ ಹರಿದು ಹಂಚಲಾಗಿದ್ದು ಆ ಕಾರಣ ಕ್ಷೇತ್ರ ಜನನಾಯಕನಿಲ್ಲದೆ ಬಡವಾಗುವಂತಾಗಿದೆ ಎಂದು ಹೇಳಿ ಈಗಾಗಲೇ ಮೂರು ನಾಲ್ಕು ಸಭೆಗಳನ್ನು ಮಾಜಿ ಶಾಸಕ ಬಿ.ಸ್ವಾಮಿರಾವ್, ಡಾ.ನಾರಾಯಣಪ್ಪ,ಕಿಮ್ಮನೆ ರತ್ನಾಕರ,ಹರತಾಳು ಹಾಲಪ್ಪ, ಕಲಗೋಡು ರತ್ನಾಕರ್ ಬಂಡಿ ರಾಮಚಂದ್ರ, ಪಕ್ಷಾತೀತವಾಗಿ ಸರ್ವರ ನೇತೃತ್ವದಲ್ಲಿ ಸಭೆಗಳು ನಡೆದು ಕ್ಷೇತ್ರದ ಉಳಿವಿಕೆಗೆ ಸಂಪೂರ್ಣ ಬೆಂಬಲ ವ್ಯಕ್ತಗೊಂಡಿದ್ದು ಹಾಲಿ ಶಾಸಕರುಗಳಾದ ಗೋಪಾಲಕೃಷ್ಣ ಬೇಳೂರು ಮತ್ತು ಆರಗ ಜ್ಞಾನೇಂದ್ರ ಸಹ ಹೋರಾಟಕ್ಕೆ ಸಹಕಾರ ನೀಡುತ್ತಿದ್ದು ಹೋರಾಟದ ಸ್ವರೂಪದ ಕುರಿತು ಸಾರ್ವಜನಿಕರ ಸಲಹೆ ಸೂಚನೆಗಳ ಕುರಿತು ಬಹಿರಂಗವಾಗಿ ಚರ್ಚಿಸಲಾಯಿತು.ಚರ್ಚೆಯಲ್ಲಿ ಹಲವರು ತಮ್ಮ ಅಭಿಪ್ರಾಯಗಳನ್ನು ಈ ರೀತಿಯಲ್ಲಿ ವ್ಯಕ್ತಪಡಿಸಿ ಕನ್ನಡಕ್ಕಾಗಿ ಡಾ.ರಾಜ್‌ಕುಮಾರ್ ನೇತೃತ್ವದಲ್ಲಿ ನಡೆದಂತಹ ಗೋಕಾಕ್ ಚಳುವಳಿ ಮಾದರಿಯಲ್ಲಿ ಹೊಸನಗರ ಕ್ಷೇತ್ರದ ಉಳಿವಿಕೆಗೆ ಚಳುವಳಿಯ ರೂಪರೇಷವನ್ನು ಮಾಡಬೇಕು ಕ್ರಾಂತಿಯ ಕಹಳೆ ಮೊಳಗಿಸುವ ಮೂಲಕ ಹೋರಾಟದ ಕಿಚ್ಚು ಹೆಚ್ಚಿಸಬೇಕು ಎಂದರು.  


ಮಾಜಿ ಶಾಸಕ ಬಿ.ಸ್ವಾಮಿರಾವ್ ಮಾತನಾಡಿ ನಾನು ಎಂ.ಎಲ್.ಎ ಸ್ಪರ್ಧೆಗಾಗಿ ಈ ಹೋರಾಟ ಮಾಡುತ್ತಿಲ್ಲ ನನ್ನ ಹೋರಾಟ ನಮ್ಮ ಮುಂದಿನ ಯುವಜನಾಂಗಕ್ಕೆ ಮತ್ತು ಕ್ಷೇತ್ರದ ಆಭಿವೃದ್ಧಿಯ ದೃಷ್ಟಿಯಿಂದಾಗಿ ನೇತೃತ್ವ ವಹಿಸಿರುತ್ತೇನೆಂದು ಹೇಳಿ ಈ ಪಾದಯಾತ್ರೆಗೆ ಗಂಟೆ ಜಾಗಟೆ ಶಂಕ ಕಹಳೆ ಭಜನೆ ಡೋಳ್ಳು ವೀರಗಾಸೆ ಮಹಿಳೆಯರು ಮಕ್ಕಳು ಹೀಗೆ ಎಲ್ಲರೂ ಸಕ್ರೀಯರಾಗಿ ಭಾಗವಹಿಸಿ ಸರ್ಕಾರದ ಗಮನಸೆಳೆಯುವ ಪ್ರಯತ್ನವನ್ನು ಮಾಡಲು ತಾಲ್ಲೂಕಿನ ಪ್ರತಿಯೊಂದು ಮನೆಯವರು ಪಾದಯಾತ್ರೆಯಲ್ಲಿ ಭಾಗವಹಿಸಿ ಸಂಘಟನೆಯನ್ನು ಬಲಗೊಳಿಸುವ ಮೂಲಕ ಕಿಚ್ಚಿನ ಕ್ರಾಂತಿಯನ್ನು ಮಾಡೋಣವೆಂದರು.


ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಬಿಜೆಪಿಯ ಮುಖಂಡ ಎನ್.ಆರ್.ದೇವಾನಂದ,ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಸಾಮಾಜಿಕ ಕಾರ್ಯಕರ್ತ ಟಿ.ಆರ್.ಕೃಷ್ಣಪ್ಪ,ತಾಲ್ಲೂಕ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರುಮೌಳಿಗೌಡರು,ತಾಲ್ಲೂಕ್ ಬಿಜೆಪಿ ಮಂಡಲ ಅಧ್ಯಕ್ಷ ಎನ್.ಸತೀಶ್,ಜೆಡಿಎಸ್ ತಾಲ್ಲೂಕ್ ಅಧ್ಯಕ್ಷ ಎನ್.ವರ್ತೇಶ್, ಆನಂದ ಮೆಣಸೆ,ವೀರೇಶ್ ಅಲುವಳ್ಳಿ, ಆರ್. ಎ ಚಾಬುಸಾಬ್, ದೇವೇಂದ್ರಪ್ಪ ಗೌಡ,ಎಂ ರಾಮಚಂದ್ರ,ಮಹೇಶ್, ಮಧುಸೂದನ್,ಗಣಪತಿ,ಪರಮೇಶ್,ಸುರೇಶ ಭಟ್,ಆರ್ ರಾಘವೇಂದ್ರ,ಶುಂಠಿ ಮಂಜುನಾಥ್, ಗಣೇಶ್ ಕಾಮತ್, ಶ್ರೀಧರ್, ಮುರುಳಿ, ರಾಮು,ಶೀಲಾ ಆರ್.ಡಿ ,ಸುರೇಶ, ಸುಧೀಂದ್ರ ಪಂಡಿತ್, ಮಂಜುನಾಥ್ ಇನ್ನಿತರ ಹಲವು ಮುಖಂಡರು ಪಾಲ್ಗೊಂಡು ಪಾದೆಯಾತ್ರೆಗೆ ಬೆಂಬಲ ವ್ಯಕ್ತಪಡಿಸುವ ಭರವಸೆ ನೀಡಿದರು.

Leave a Reply

Your email address will not be published. Required fields are marked *