ಶಿವರಾತ್ರಿ ಅಂಗವಾಗಿ ಎಲ್ಲೆಡೆ ವಿಶೇಷ ಪೂಜೆ

Spread the love

ಗ್ರಾಮೀಣ ಯುವಕರಿಗಾಗಿ ಎರಡು ದಿನದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ 1200 x 800 px 20260216 223123 00002814555998930730253 ಶಿವರಾತ್ರಿ ಅಂಗವಾಗಿ ಎಲ್ಲೆಡೆ ವಿಶೇಷ ಪೂಜೆ

ರಿಪ್ಪನ್‌ಪೇಟೆ:  ಸೋಮವಾರ ಮಹಾಶಿವರಾತ್ರಿ ಅಂಗವಾಗಿ ವಿವಿಧ ಶಿವಾಲಯಗಳಲ್ಲಿ ಮಹಾ ಶಿವರಾತ್ರಿ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಅರಸಾಳು ಗ್ರಾಮದ ಶ್ರೀ ಈಶ್ವರ ಬಸವಣ್ಣ ದೇವಸ್ಥಾನದಲ್ಲಿ ಪರಿವಾರ ದೇವತೆಗಳಿಗೆ ಮಹಾಶಿವರಾತ್ರಿ ಪೂಜಾ ಕಾರ್ಯಕ್ರಮದ ಅಂಗವಾಗಿ ಸಾಮೂಹಿಕ ರುದ್ರಾಭಿಷೇಕ ಹಾಗೂ ಅಷ್ಟೋತ್ತರ ಶತನಾವಳಿಗಳು ಹಾಗೂ ಅಲಂಕಾರ ಪೂಜೆ ಮಹಾಮಂಗಳಾರತಿ ತೀರ್ಥಪ್ರಸಾದ ವಿತರಣೆ ಆಲವಳ್ಳಿ ವೀರಕ್ತಮಠದ ವೇ.ಮಹೇಶ್ವರಯ್ಯ ನೇತೃತ್ವದಲ್ಲಿ ಜರುಗಿತು.

ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಮನಗದ್ದೆಯ ಉಮಾಮಹೇಶ್ವರ, ನಾಗಯಕ್ಷಿ, ಚೌಡೇಶ್ವರಿ ಪರಿವಾರ ದೇವತೆಗಳ ಪ್ರತಿಷ್ಠ ವರ್ಧಂತ್ಯೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು.

ರಿಪ್ಪನ್ ಪೇಟೆ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಜರುಗಿತು.

ಭೈರಾಪುರ ಈಶ್ವರ ದೇವಸ್ಥಾನದಲ್ಲೂ ವಿಶೇಷ ಪೂಜೆ ನೆರವೇರಿತು.

image editor output image 995372790 17712602025297665180296067728555 ಶಿವರಾತ್ರಿ ಅಂಗವಾಗಿ ಎಲ್ಲೆಡೆ ವಿಶೇಷ ಪೂಜೆ
ಗುಳುಗುಳಿ ಶಂಕರೇಶ್ವರ ದೇವಸ್ಥಾನದಲ್ಲಿ ಸೋಮವಾರ ಸಾಮೂಹಿಕ ಸತ್ಯನಾರಾಯಣ ಪೂಜೆ ರುದ್ರಾಭಿಷೇಕ, ಹೋಮ-ಹವನಗಳು ಜರುಗಿದವು.

ಸಿದ್ದಪ್ಪನಗುಡಿ ಕಂತೆ ಸಿದ್ದೇಶ್ವರ ಸ್ವಾಮಿಯ ಸನ್ನಿಧಾನದಲ್ಲಿಯೂ ಸಹ ಅತ್ಯಂತ ವಿಜೃಂಭಣೆಯಿಂದ ಪೂಜೆ ಪುನಸ್ಕಾರಗಳು ಜರುಗಿದವು.

img 20260216 wa00144307166155124360986 ಶಿವರಾತ್ರಿ ಅಂಗವಾಗಿ ಎಲ್ಲೆಡೆ ವಿಶೇಷ ಪೂಜೆ
ಶ್ರೀ ಕಲಾನಾಥೇಶ್ವರ ದೇವಸ್ಥಾನ ಕಾರಗೋಡು
img 20260216 wa0017627601500842928808 ಶಿವರಾತ್ರಿ ಅಂಗವಾಗಿ ಎಲ್ಲೆಡೆ ವಿಶೇಷ ಪೂಜೆ
ಶ್ರೀ ಕಲಾನಾಥೇಶ್ವರ ಮಹಿಳಾ ಭಜನಾ ಮಂಡಳಿ



ಎಲ್ಲೆಡೆ ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಸಾಮೂಹಿಕ ಅನ್ನಸಂತರ್ಪಣೆಗಳು ನೆರವೇರಿದವು.


Spread the love

Leave a Reply

Your email address will not be published. Required fields are marked *