ಸಚಿವ ಸ್ಥಾನಕ್ಕೆ ಮಾರಿಕಾಂಬೆ ಬಳಿ ಬೇಳೂರು ಪ್ರಾರ್ಥನೆ

ಗ್ರಾಮೀಣ ಯುವಕರಿಗಾಗಿ ಎರಡು ದಿನದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ 1200 x 800 ಸಚಿವ ಸ್ಥಾನಕ್ಕೆ ಮಾರಿಕಾಂಬೆ ಬಳಿ ಬೇಳೂರು ಪ್ರಾರ್ಥನೆ
Spread the love

ಸಾಗರ:  ಸಚಿವ ಸ್ಥಾನ ಕರುಣಿಸು ಎಂದು ಮಾರಿಕಾಂಬ ದೇವಿಯಲ್ಲಿ ಪ್ರಾರ್ಥಿಸಿದ್ದೇನೆ. ಮಾರಿಕಾಂಬ ದೇವಿ ಇಷ್ಟಾರ್ಥ ನೆರವೇರಿಸುತ್ತಾಳೆ ಎನ್ನುವ ನಂಬಿಕೆ ಇದೆ’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

   ನಗರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ‘ಸ್ವಂತ ಖರ್ಚಿನಲ್ಲಿ ಶಾಸಕರು ವಿದೇಶ ಪ್ರವಾಸ ಹೋದರೆ ತಪ್ಪೇನು? ಈಗ ಬರಗಾಲವೂ ಇಲ್ಲ, ನೆರೆಯೂ ಬಂದಿಲ್ಲ. ಶಾಸಕರು ವೈಯಕ್ತಿಕ ವಿದೇಶ ಪ್ರವಾಸ ಹೋಗಿ ಬರ ಲು ವಿರೋಧವೇಕೆ’ ಎಂದು ಪ್ರಶ್ನಿಸಿದರು.

‘ವಿದೇಶಕ್ಕೆ ಹೋಗುವ ಶಾಸಕರ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ಬಿಜೆಪಿಯವರಿಗೆ ಮಾತನಾಡುವ ನೈತಿಕತೆಯೆ ಇಲ್ಲ. ಅವರ ಅವಧಿಯಲ್ಲಿಯೇ ಸುಮಾರು 9 ಸಾವಿರ ಹೆಕ್ಟೇ‌ರ್ ಡಿನೋಟಿಫಿಕೇಶನ್ ಮಾಡಲಾಗಿದೆ ಎಂದು ಆರೋಪಿಸಿದರು.

ಎಡಮನೆ ಗ್ರಾಮದಲ್ಲಿ ಯಾರನ್ನೂ ಒಕ್ಕಲೆಬ್ಬಿಸುವ ಆಲೋಚನೆ ಸರಕಾರಕ್ಕೆ ಇಲ್ಲ. ಅಲ್ಲಿನ ಕೆಲವು ಸ್ಥಳೀಯರು ನನ್ನ ಹತ್ತಿರ ಬಂದು ನಮಗೆ ಪರ್ಯಾಯವ್ಯವಸ್ಥೆ ಕಲ್ಪಿಸಿದರೆ ಹೋಗಲು ಸಿದ್ಧ ಎನ್ನುತ್ತಿ ದ್ದಾರೆ. ನಾನೇ ಸ್ಥಳ ಬಿಟ್ಟು ಹೋಗಬೇಡಿ ಎಂದು ಹೇಳಿದ್ದೇನೆ ಎಂದರು.

  ಕೆಪಿಸಿ ಬಳಸದೆ ಬಿಟ್ಟ ಭೂಮಿಯನ್ನು ಸರಕಾರ ವಾಪಸ್ ಪಡೆಯುವ ಪ್ರಸ್ತಾಪ ಇಲ್ಲ. ಈಗಾಗಲೇ ಅರಣ್ಯ ಸಚಿವರಿಗೆ ಪತ್ರ ಬರೆದು ಆ ಭೂಮಿಯಲ್ಲಿ ವಾಸ ಇರುವ ವರಿಗೆ ತೊಂದರೆ ನೀಡದಂತೆ ಮನವಿ ಮಾಡಿದ್ದೇನೆ. ಸೋಮವಾರ ಬೆಂಗಳೂರಿ ನಲ್ಲಿ ಅರಣ್ಯ ಸಚಿವರನ್ನು ಭೇಟಿ ಮಾಡಿ ವಿಷಯ ಪ್ರಸ್ತಾಪಿಸಲಾಗುತ್ತದೆ ಎಂದು ತಿಳಿಸಿದರು.


Spread the love

Leave a Reply

Your email address will not be published. Required fields are marked *