ರಿಪ್ಪನ್ ಪೇಟೆ: ಬನ್ನಿ ಸಾರ್ ಬನ್ನಿ , ಬನ್ನಿ ಅಮ್ಮ ಹಣ್ಣು ಹಂಪಲುಗಳಿಗೆ, ತರಕಾರಿಗಳಿಗೆ ಬೆಲೆ ಕಡಿಮೆ ಇದೆ. ಯಾವುದು ಬೇಕು ನೀವು ಆರಿಸಿಕೊಳ್ಳಿ ಬನ್ನಿ ಬನ್ನಿ..’
ಇದು ಯಾವುದೋ ಮಾರುಕಟ್ಟೆ ಅಥವಾ ಜಾತ್ರೆಯಲ್ಲಿ ಕಂಡು ಬಂದ ದೃಶ್ಯವಲ್ಲ. ಇದು ರಿಪ್ಪನ್ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಸಂತೆಯ ನೋಟಗಳು.

ಮಕ್ಕಳ ಸಂತೆ ಆಯೋಜಿಸುವ ಮೂಲಕ ಮಕ್ಕಳಲ್ಲಿ ಸ್ವಾವಲಂಬಿಯಾಗಿ ಬದುಕಲು,ಭವಿಷ್ಯದಲ್ಲಿ ಅವರು ಉದ್ಯೋಗದಾತರಾಗಿ ನಿರ್ಮಾಣ ಆಗಬೇಕೆಂದು ನಮ್ಮ ಆಶಯ ಮಕ್ಕಳ ಸಂತೆಯ ಮೂಲಕ ಅವರಿಗೆ ಇನ್ನಷ್ಟು ಪ್ರೇರಣೆ ಸಿಗಬೇಕೆಂದು, ವಾಣಿಜ್ಯ ವ್ಯಾಪಾರ ವಹಿವಾಟುಗಳ ಅರಿವು ಅವರಿಗಾಗಬೇಕೆಂದು ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದು ಶಾಲೆಯ ಮುಖ್ಯ ಶಿಕ್ಷಕ ಅಶೋಕ ಹೇಳಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಮಕ್ಕಳ ಸಂತೆಯಲ್ಲಿ ಮಕ್ಕಳಿಗೆ ವ್ಯಾಪಾರ, ವಹಿವಾಟು ಜ್ಞಾನದ ಬಗ್ಗೆ ಅರಿವು ಮೂಡಿಸಲು ಶಿಕ್ಷಕರ ಮಾರ್ಗದರ್ಶನದಲ್ಲಿ ತರಕಾರಿ, ಹಣ್ಣು ಹಂಪಲುಗಳು, ಮನೆಯಿಂದ ತಯಾರಿಸಿದ ಖಾದ್ಯ ತಿನಿಸುಗಳನ್ನು ಗಳನ್ನು ಮಕ್ಕಳು ಮಾರಾಟ ಮಾಡಿದರು. ಶಿಕ್ಷಕರು, ಪೋಷಕರು, ಸಾರ್ವಜನಿಕರು ಮಕ್ಕಳ ವ್ಯಾಪಾರ ಶೈಲಿಗೆ ಮನಸೋತು ವಸ್ತುಗಳನ್ನು ಖರೀದಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಧನಲಕ್ಷ್ಮಿ ಗಂಗಾಧರ್ ನೆರವೇರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್ ಡಿಎಂಸಿ ಅಧ್ಯಕ್ಷ ಮಂಜಪ್ಪ,ಉಮೇಶ್, ಸುಧೀಂದ್ರ ಪೂಜಾರಿ ಶಿಕ್ಷಕ ಸುಧಾಕರ್ ಮತ್ತು ಶಿಕ್ಷಕ ವೃಂದ, ಪೋಷಕರು ಉಪಸ್ಥಿತರಿದ್ದರು.















Leave a Reply