ರಿಪ್ಪನ್‌ಪೇಟೆ: ನಾವೆಲ್ಲ ಹಿಂದೂವಾಗಿ ಬದುಕಿದರೆ ಮಾತ್ರ ಭಾರತೀಯ ಸಂಸ್ಕೃತಿ ಪರಂಪರೆ ಉಳಿಯುತ್ತದೆ.ಹಿಂದೂ ಸಮಾಜವು ಸಾಮರಸ್ಯ ದಿಂದ ಬದುಕುವುದರೊಂದಿಗೆ ಸ್ವದೇಶಿ, ಕುಟುಂಬ ಪ್ರಬೋಧನ, ಪರಿಸರ ಸಂರಕ್ಷಣೆ, ನಾಗರಿಕ ಶಿಷ್ಟಾಚಾರ ಈ ಪಂಚ ವಿಚಾರವನ್ನು ಅಳವಡಿಸಿಕೊಳ್ಳೂಣ ಇದರಿಂದ ಸನಾತನ ಧರ್ಮ ಸಂಸ್ಕೃತಿಯನ್ನು ಉಳಿಸಿ ಬಲಿಷ್ಟ ಭಾರತವಾಗಿಸಲು ನಾವುಗಳು ಪಣತೊಡಬೇಕು ಎಂದು ಯುವ ವಾಗ್ಮಿ ಹಾರಿಕಾ ಮಂಜುನಾಥ ಕರೆ ನೀಡಿದರು.

ರಿಪ್ಪನ್‌ಪೇಟೆಯಲ್ಲಿ ಹೊಸನಗರ ತಾಲ್ಲೂಕು ಹಿಂದೂ ಸಂಗಮ ಆಯೋಜನಾ ಸಮಿತಿಯವರು ಬಾಳೂರು-ಚಿಕ್ಕಜೇನಿ-ರಿಪ್ಪನ್‌ಪೇಟೆ ಮಂಡಲ ಅಯೋಜಿಸಲಾದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಿದ ಅವರು.ಹಿಂದೂ ಸಂಸ್ಕೃತಿ ಸಾವಿರಾರು ವರ್ಷದ ಇತಿಹಾಸ ಹೊಂದಿದೆ. ವೇದ,ಯೋಗ,ಉಪನಿಷತ್ತು ರಾಮಾಯಣ ಮಹಾಭಾರತ ಈ ಎಲ್ಲ ಗ್ರಂಥ, ಕಥೆ,ಪುರಾಣಗಳು. ಧರ್ಮ ನಡೆದು ಬಂದ ಇತಿಹಾಸ ಸಾರುತ್ತವೆ.ಮಾನವ ಜೀವನಕ್ಕೆ ದಾರಿ ತೋರುವ ದೀಪಗಳಿದ್ದಂತೆ ಅವುಗಳ ಪಾಲನೆ ಎಲ್ಲರೂ ಮಾಡಬೇಕು ಎಂದು ತಿಳಿಸಿದ್ದರು.

ದೇಶ-ಧರ್ಮ ಉಳಿಕೆಗೆ ಸಂಘಟಿತರಾಗಲು ಸನ್ನದ್ದರಾಗಬೇಕು.ಹಿಂದೂ ಧರ್ಮ ಜಾತಿ ಹೆಸರಿನಲ್ಲಿ ಒಡಕು ತರುವವರ ಬಗ್ಗೆ ಜಾಗೃತರಾಗಬೇಕು.ಭಾರತದ ಪ್ರತಿ ಮನೆಗಳಲ್ಲಿ ಆಯೋಧ್ಯಯನ್ನಾಗಿ ಮೂಡಿಸುವುದು ಭಾರತ ಗುರಿಯಾಗಬೇಕು.ಮಕ್ಕಳಿಗೆ ಧರ್ಮಗ್ರಂಥ ಭೋದಿಸಿ ವಾರಕ್ಕೆ ಒಂದು ದಿನವಾದರೂ ದೇವಸ್ಥಾನದಲ್ಲಿ ಭಜನೆ ಮಾಡಿದರೆ ಸಾಕು ಹಿಂದೂ ಧರ್ಮ ಸಂಘಟನೆ ಸಾಧ್ಯ.ಧರ್ಮಸಂಸ್ಕಾರ ನಮ್ಮ ಮನೆಯಿಂದ ಆರಂಭವಾಗಬೇಕು ಎಂದು ಅವರು ಮಹಿಳೆಯರು ಹಣೆಗೆ ಕುಂಕುಮ ಇಡುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿ ಎಂದರು. ಆರ್ ಎಸ್ ಎಸ್ ಜಗತ್ತಿನ ಅತ್ಯಂತ ದೊಡ್ಡ ಸಂಘಟನೆಯಾಗಿದ್ದು ತನ್ನ ಅಂಗ ಸಂಸ್ಥೆಗಳಾಗಿ 54 ಸಂಸ್ಥೆಗಳು ಕೆಲಸ ಮಾಡುತ್ತದೆ ಆರ್ ಎಸ್ ಎಸ್ ಮುಟ್ಟದೆ ಇರುವಂತಹ ಕ್ಷೇತ್ರವೇ ಇಲ್ಲ,ಜಗತ್ತಿನ ಅತಿ ದೊಡ್ಡ ಮಾನವ ಶಕ್ತಿಯಾಗಿ ಆರ್ ಎಸ್ ಎಸ್ ಪ್ರಚಾರವಿಲ್ಲದೆ ಕೆಲಸ ಮಾಡುತ್ತಿದೆ.

ಹೊಸನಗರ ತಾಲ್ಲೂಕ್ ಹಿಂದೂ ಸಂಗಮ ಅಯೋಜನ ಸಮಿತಿ ಆಧ್ಯಕ್ಷ ವಿನಯ್ ಹೆಗ್ಗರೆ ಅಧ್ಯಕ್ಷತೆ ವಹಿಸಿದ್ದರು. ಸಸ್ಯ ಸಂಶೋಧನಾ ಕ್ಷೇತ್ರದಲ್ಲಿ ರಾಷ್ಟ್ರ ಪ್ರಶಸ್ತಿಗೆ ಭಾಜನರಾದ ರಿಪ್ಪನ್‌ಪೇಟೆಯ ಅನಂತಮೂರ್ತಿ ಜವಳಿಯವರು ತಮ್ಮ ಕೃಷಿ ಕ್ಷೇತ್ರದಲ್ಲಿನ ಸಾಧಕ ಬಾಧಕಗಳ ಕುರಿತು ಸವಿಸ್ತಾರವಾಗಿ ಮಾತನಾಡಿದರು.

ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರ ಪುರುಷರ ವೇಷಭೂಷಣ ಧರಿಸಿದ್ದ ಎಲ್ಲಾ ಪುಟಾಣಿ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.

ಸುಮಾ ಗಣೇಶ ಹತ್ವಾರ್ ಸ್ವಾಗತಿಸಿದರು,ರಂಜನ್ ಮತ್ತು ಭರತ್ ನಿರೂಪಿಸಿದರು,ಮಂಜುನಾಥ ವಂದಿಸಿದರು.

ಈ ಸಂದರ್ಭದಲ್ಲಿ ದೇವರಾಜ್ ಎಂ,ಮಂಜೋಜಿ ರಾವ್, ಹಿರಿಯ ಕಾರ್ಯಕರ್ತರಾದ ಆರ್.ರಾಘವೇಂದ್ರ(ಕೋಳಿ ಫಾರಂ),ಮಹಿಳಾ ಪ್ರಮುಖರಾದ ಪದ್ಮ ಸುರೇಶ, ನಾಗರತ್ನ ದೇವರಾಜ್, ರೇಖಾ ರವಿ ರಾವ್, ಮಂಜುಳಾ ಕೇತಾರ್ಜಿ ರಾವ್, ಧನಲಕ್ಷ್ಮೀ ಗಂಗಾಧರ್, ದೀಪ ಸುಧೀರ್, ಲಕ್ಷ್ಮಿ ಶ್ರೀನಿವಾಸ್ ಮತ್ತು ಆರ್ ಟಿ ಗೋಪಾಲ, ಎನ್. ಸತೀಶ್, ಮಾಮ್ಕೋಸ್ ಧರ್ಮಣ್ಣ, ಬೆಳ್ಳೂರು ತಿಮ್ಮಪ್ಪ, ಅಶ್ವಥ್ ಮುಗುಡ್ತಿ, ಸುರೇಶ,ಸುಧೀಂದ್ರ ಪೂಜಾರಿ, ಕುಷನ್ ದೇವರಾಜ್, ತುಳೋಜಿ ರಾವ್,ದೇವದಾಸ್ ಆಚಾರ್,ತ ಮ ನರಸಿಂಹ,ರತ್ನಾಕರ್ ರಾವ್,ಸುಂದರೇಶ್ ಕೆರೆಹಳ್ಳಿ, ವೈ ಜೆ ಕೃಷ್ಣ, ರಾಮು, ಬಾಳೂರು ಮಂಡಲದ ದೇವೇಂದ್ರಪ್ಪ ಗೌಡರು, ಜಗದೀಶ್ ಕುಕ್ಕಳಲೆ, ರಾಜೇಂದ್ರ ಗಂಟೆ, ರಾಮಚಂದ್ರ, ಚಿಕ್ಕಜೇನಿ ಶ್ರೀಕಾಂತ್ ಐತಾಳರು, ತಿಮ್ಮಪ್ಪ,ಓಮಿನಿ ಸುಧೀರ್, ಈಶ್ವರ್ ಮಳಕೊಪ್ಪ, ಗಣೇಶ್ ರಾವ್,

ಮುರುಳಿ, ಆಟೋ ರಾಘು,ಎಂ ಬಿ ಮಂಜುನಾಥ್, ಮಂಜು ಆಚಾರ್, ಶ್ರೀನಿವಾಸ್ ಆಚಾರ್, ಬಿ ರಾಘವೇಂದ್ರ, ಫ್ಯಾನ್ಸಿ ರಮೇಶ್,ಆನಂದ ಮೆಣಸೆ, ದೇವಸ್ಥಾನದ ಅಧ್ಯಕ್ಷ ಈಶ್ವರ ಶೆಟ್ಟಿ, ಗಣೇಶ್ ಕಾಮತ್,ಭಾಸ್ಕರ್ ಶೆಟ್ಟಿ , ಜಿ. ಡಿ ಮಲ್ಲಿಕಾರ್ಜುನ್, ಅಕ್ವೇರಿಯಂ ರಾಘು, ಹೊನ್ನಾಳಿ ರವಿ, ಬೇಕರಿ ನಾರಾಯಣ, ಕೃಷ್ಣೋಜಿ ರಾವ್, rmc ರಾಘು, ಹಿಂಜಾವೇ ಗಣೇಶ್,ಉದಯ್,ಲೋಹಿತ್, ಕಲಾವಿದ ಗಣೇಶ್,ಕಗ್ಗಲಿ ಲಿಂಗಪ್ಪ, ಸಂತೋಷ್,ಸಂದೀಪ್ ಶೆಟ್ಟಿ, ದೀಲಿಪ ಆಚಾರ್,ಅರ್ಜುನ,ಟೈಲರ್ ಗುರು, ಉಮೇಶ್ ಭಟ್, ನಿರೂಪ ಕುಮಾರ್, ಪ್ರವೀಣ್ ಆಚಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.















Leave a Reply