ರಿಪ್ಪನ್ ಪೇಟೆ : ಹಿಂದೂ ಸಂಗಮ ಕಾರ್ಯಕ್ರಮದ ಭರದ ಸಿದ್ಧತೆ ನಡೆಯುತ್ತಿದೆ. ರಿಪ್ಪನ್ ಪೇಟೆ,ಬಾಳೂರು,ಚಿಕ್ಕಜೇನಿ ಈ ಮೂರು ಪಂಚಾಯಿತಿಗಳು ಸೇರಿಸಿ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮವನ್ನು ಹಿಂದೂ ಆಯೋಜನ ಸಮಿತಿ ವತಿಯಿಂದ ಆಯೋಜಿಸಲಾಗಿದೆ.

ನಾಳೆ ಫೆಬ್ರವರಿ 2 ರಂದು ಸಂಜೆ 4:30 ರಿಂದ ಜಿ ಎಸ್ ಬಿ ಸಮಾಜದಿಂದ ಶೋಭಯಾತ್ರೆ ಪ್ರಾರಂಭವಾಗಿ ಪ್ರಮುಖ ನಾಲ್ಕು ರಸ್ತೆಗಳಲ್ಲಿ ಸಾಗಿ ಹಿಂದೂ ಮಹಾಸಭಾ ಮಂಟಪದಲ್ಲಿ ಸಭಾ ಕಾರ್ಯಕ್ರಮ ಪ್ರಾರಂಭವಾಗಲಿದೆ.
ಕಾರ್ಯಕ್ರಮದ ದಿಕ್ಸೂಚಿ ಭಾಷಣವನ್ನು ಕುಮಾರಿ ಹಾರಿಕ ಮಂಜುನಾಥ್ ಮಾಡಲಿದ್ದಾರೆ. ಮಕ್ಕಳಿಗೆ ಛದ್ಮವೇಷ ಕಾರ್ಯಕ್ರಮವನ್ನು ಆಯೋಜಿಸಿದ್ದು ಬಹುಮಾನ ವಿತರಣಾ ಕಾರ್ಯಕ್ರಮವು ಇರಲಿದೆ.
ಸದ್ಭಕ್ತ ಹಿಂದೂ ಕುಲಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಹಿಂದೂ ಸಂಗಮ ಆಯೋಜನ ಸಮಿತಿಯ ವತಿಯಿಂದ ಕೋರಲಾಗಿದೆ.
















Leave a Reply