ಜಗತ್ತು ಭಾರತಕ್ಕೆ ನಮಿಸುವುದು ಬಿಟ್ಟರೆ ಬೇರೆ ಯಾವ ಅವಕಾಶವಿಲ್ಲ | ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕುವುದೇ ನಾಗರಿಕ ಶಿಷ್ಟಾಚಾರ
ರಿಪ್ಪನ್ ಪೇಟೆ : ರಾಮಾಯಣ ಮತ್ತು ಮಹಾಭಾರತವು ನಮ್ಮ ಜೀವನಕ್ಕೆ ಸ್ಪೂರ್ತಿಯಾಗಲಿ. ಭಾರತ ಎಂಬ ಶಬ್ದದಲ್ಲಿ ಅಕ್ಷರ ಇರುವುದು ಮೂರೇ ಆದರೂ ಆ ಮೂರು ಅಕ್ಷರಗಳು ಅದ್ಭುತವೇ ಆಗಿದೆ. ಭಾ ಎಂದರೆ ಜ್ಞಾನದ ಬೆಳಕು, ಸರಿಯಾದ ದಾರಿಯಲ್ಲಿ ಕೊಂಡೊಯ್ಯುವುದಾಗಿದೆ. ಆ ಬೆಳಕಿನಲ್ಲಿ ರಥದಲ್ಲಿ ಮುಳಗಲ್ಪಟ್ಟವರು ಅಂಥಹವರೇ ಭಾರತೀಯರು. ಇದು ಇಂಗ್ಲೀಷಿನ ಇಂಡಿಯಾದಲ್ಲಿ ನಮಗೆ ಸಿಗುವುದಿಲ್ಲ. ಇಷ್ಟೆಲ್ಲ ವಿಚಾರಗಳು ನಮ್ಮಲ್ಲಿರುವಾಗ ಈಡೀ ಜಗತ್ತೇ ನಮ್ಮನ್ನು ನಮಸ್ಕರಿಸಬೇಕು ಅದನ್ನು ಬಿಟ್ಟರೆ ವಿದೇಶಿಗರಿಗೆ ಬೇರೆ ಅವಕಾಶಗಳೇ ಇಲ್ಲ ಅಂತಹ ಶ್ರೇಷ್ಠ ಪರಂಪರೆ ನಮ್ಮದು. ಭಾರತ ಜಗತ್ತಿಗೆ ಸೊನ್ನೆಯನ್ನು ಕೊಟ್ಟಿದ್ದಕ್ಕೆ ಒಂದು ಸಂಖ್ಯೆ ಹತ್ತಾಯಿತು, ಹತ್ತು ನೂರಾಯಿತು. ಜಗತ್ತಿಗೆ ಬಟ್ಟೆ ಧರಿಸುವುದನ್ನು ಹೇಳಿಕೊಟ್ಟಿದ್ದು ಭಾರತ. ಜಗತ್ತಿಗೆ ಭಾರತ ಕೊಟ್ಟಿದ್ದು ಕೊಡುಗೆ ಎಲ್ಲವೂ ಅದ್ಭುತಗಳೇ ಆಗಿದೆ ಎಂದು ಭಾರತೀಯ ಪರಂಪರೆಯ ಶ್ರೇಷ್ಠತೆಯನ್ನು ಎತ್ತಿ ಹಿಡಿದು ಇದು ನಮಗೆ ಪ್ರೇರಣೆಯಾಗಲಿ ಎಂದು ಅಖಿಲ ಭಾರತ ಪ್ರತಿನಿಧಿ ಸಭಾದ ಆಹ್ವಾನಿತ ಸದಸ್ಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಹೇಳಿದರು.

ಹಿಂದೂ ಸಂಗಮ ಆಯೋಜನ ಸಮಿತಿ ಹೆದ್ದಾರಿಪುರ ಮಂಡಲದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಶತಮಾನೋತ್ಸವವನ್ನು ಕಾರ್ಯಕ್ರಮವಾಗಿ ಮಾಡಲಿಲ್ಲ ಅದರ ಬದಲು ಹಿಂದೂ ಸಮಾಜವೇ ಚಿಕ್ಕದಾಗಿ ಮಾಡಬೇಕು. ಆ ಚಿಕ್ಕ ಕಾರ್ಯಕ್ರಮವೇ ದೊಡ್ಡದಾಗಿ ಮಾಡಬೇಕು ಎಂದು ದೇಶಾದ್ಯಂತ ಒಂದು ಲಕ್ಷಕ್ಕೂ ಅಧಿಕ ಹಿಂದೂ ಸಂಗಮ ಕಾರ್ಯಕ್ರಮವನ್ನು ಹಿಂದೂ ಸಮಾಜವೇ ಸಂಘಟಿಸಿ ಕಾರ್ಯಕ್ರಮವನ್ನು ಆಯೋಜಿಸಿದೆ.

ಹಿಂದೂ ಸಂಗಮದ ಮೂಲಕ ಪಂಚ ಪರಿವರ್ತನೆಯನ್ನು ಹೇಳಲಾಗುತ್ತಿದೆ. ಪರ ನಾವೆಲ್ಲರೂ ಪರಿಸರವನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗುವ ಮುನ್ನ ನಾವು ಅದನ್ನು ಪಾಲಿಸುವಂತಾಗಲಿ. ಪ್ರತಿ ವ್ಯಕ್ತಿಯ ನಿರ್ಮಾಣದೊಂದಿಗೆ ಪ್ರತಿ ಕುಟುಂಬವು ಸಮೃದ್ಧವಾಗಲಿ, ಹಿಂದೂ ಸಮಾಜದ ಎಲ್ಲಾ ಬಂಧುಗಳು ಒಂದೇ ಎನ್ನುವಂತಹ ಭಾವನೆ ಇನ್ನಷ್ಟು ಹೆಚ್ಚಾಗಿ ಸಾಮರಸ್ಯ ಕೂಡಿದ ಸದೃಢ ಸಮಾಜವಾಗಿ ನಿರ್ಮಾಣವಾಗಬೇಕು. ಪ್ರತಿಯೊಬ್ಬ ಭಾರತೀಯ ಸ್ವದೇಶಿ ಉತ್ಪನ್ನವನ್ನೇ ಬಳಸುವಂತಾದರೆ ಭಾರತ ಸಶಕ್ತವಾಗಲಿದೆ.

ನಾಗರಿಕ ಕರ್ತವ್ಯಗಳನ್ನು ಎಲ್ಲರೂ ಪಾಲಿಸಲೇಬೇಕು ಸ್ವಚ್ಛತೆಯನ್ನು ಕಾಪಾಡುವುದು ಸಂಚಾರಿ ನಿಯಮಗಳನ್ನು ಪಾಲಿಸುವುದು ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕುವುದು ಇವೆಲ್ಲವೂ ನಾಗರೀಕ ಶಿಷ್ಟಾಚಾರವೇ ಎಂದು ಹೇಳಿದರು.
ಆರ್.ಎಸ್.ಎಸ್ ತಾಲೂಕು ಕಾರ್ಯವಾಹ ಅಶ್ವಥ್ ಕುಮಾರ್ ಮಾತನಾಡಿ ಹಿಂದೂ ಎಂದರೆ ಹಿಂಸೆ ಯಿಂದ ದೂರ ಇರುವಂತವನು ಎಂದರ್ಥ ಅಂತಹ ಜಗತ್ತಿನ ಅತ್ಯಂತ ಸಜ್ಜನ ಹಿಂದೂ ಸಮಾಜದ ಬಂಧುಗಳು ನಾವು. ಎಲ್ಲರನ್ನೂ ಒಂದುಗೂಡಿಸಿ ಸಮರ್ಥ, ಸಶಕ್ತ ಭಾರತವನ್ನು ನಿರ್ಮಾಣ ಮಾಡೋಣ ಎಂದು ಹೇಳಿ ಪಂಚಪರಿವರ್ತನೆಯ ವಿಚಾರವನ್ನೂ ಪ್ರಸ್ತಾವನೆಯಲ್ಲಿ ಮಂಡಿಸಿದರು.

ದೇಶ ಸಂಸ್ಕೃತಿ ಸನಾತನ ಚಿಂತನೆಗಳು ಮುಂದಿನ ಪೀಳಿಗೆಗೆ ತಲುಪಬೇಕಾದರೆ ಮಹಿಳೆಯರ ಪಾತ್ರ ಬಹುಮುಖ್ಯವಾಗಿರುವಂತದ್ದು ಎಂದು ಸಾಮಾಜಿಕ ಕಾರ್ಯಕರ್ತೆ ಮಾನಸ ಸುನಿಲ್ ಅಭಿಪ್ರಾಯಸಿದರು.
ಹೆದ್ದಾರಿಪುರ ಮುಖ್ಯ ರಸ್ತೆಗಳಲ್ಲಿ ಶೋಭಾಯಾತ್ರೆಯು ಮಂಗಳವಾದ್ಯ, ಭಜನೆ ಸಂಕೀರ್ತನೆ ಮೂಲಕ ನಡೆದು ತದನಂತರ ಸಭಾ ಕಾರ್ಯಕ್ರಮ ಪ್ರಾರಂಭವಾಯಿತು.
ಮಕ್ಕಳು ರಾಷ್ಟ್ರ ಪುರುಷರ ವೇಷಭೂಷಣ ಧರಿಸಿ ಕಾರ್ಯಕ್ರಮ ಚೆಂದಗಾಣಿಸಿದರು. ವಿಶೇಷವಾಗಿ ಸ್ಥಳೀಯ ಯಕ್ಷಗಾನ ಕಲಾವಿದ ಸುನಿಲ್ ಪೌರಾಣಿಕ ವೇಷಧರಿಸಿ ಶೋಭಾಯಾತ್ರೆಯ ಮೆರೆಗು ಹೆಚ್ಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿನಯ್ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಆರ್.ಎಸ್.ಎಸ್ ತಾಲೂಕು ಸಂಘಚಾಲಕ ಶ್ಯಾಮ್ ಸುಂದರ್, ಮಹೇಶ್ ಹೆಚ್ ಪಿ, ನಾಗೇಂದ್ರಪ್ಪ ಗೌಡ, ಜಂಬಳ್ಳಿ ಗಿರೀಶ್, ವಿಶುಕುಮಾರ್, ಕಿರಣ್ ಕರಡಿಗ, ಅರುಣ್ ಕುಮಾರ್, ರಾಮಣ್ಣ,ವಿನಯ್ ಹೆಗ್ಗೆರೆ, ಆದರ್ಶ ಮೂಗುಡ್ತಿ, ಜನಾರ್ಧನ,ಅಭಿಷೇಕ್,ರಾಘವೇಂದ್ರ ಮುಗುಡ್ತಿ,ನವೀನ್ ಹೆದ್ದಾರಿಪುರ,ದಿನೇಶ್ ಕಲ್ಕೊಪ್ಪ, ಕಮಲಾಕ್ಷ ಜಂಬಳ್ಳಿ,ಆದರ್ಶ ಕಲ್ಲೂರು, ಅನ್ವೇಷ ಕಲ್ಲೂರು, ಮೇಘರಾಜ ಕಲ್ಲೂರು, ಮಹೇಶ್ ಹೆದ್ದಾರಿಪುರ, ಪ್ರವೀಣ್ ಹೆದ್ದಾರಿಪುರ, ಗುರುರಾಜ ಹೆದ್ದಾರಿಪುರ, ಪ್ರವೀಣ್ ವಿದ್ಯಾನಗರ, ಸತೀಶ ಕಗ್ಗಚಿ, ರಾಘು ಹೆಗ್ಗೆರೆ, ಮಂಜುನಾಥ್ ಗಾಜಿನಗೂಡು, ನಿತಿಲ್ ಗೋಣಿಕೆರೆ ಮತ್ತು ಅನೇಕರು ಉಪಸ್ಥಿತರಿದ್ದರು.















Leave a Reply