ಅಂಕಪಟ್ಟಿ ಗೊಂದಲಕ್ಕೆ ತೆರೆ
ರಿಪ್ಪನ್ ಪೇಟೆ: 2024 -25 ನೇ ಸಾಲಿನ ಶ್ರೀ ರಾಮಕೃಷ್ಣ ವಿದ್ಯಾಲಯ ರಿಪ್ಪನ್ ಪೇಟೆಯ ೧೦ನೇ ತರಗತಿಯ ವಿದ್ಯಾರ್ಥಿಗಳ ಪರೀಕ್ಷಾ ನೊಂದಣಿ ಮತ್ತು ಶುಲ್ಕ ಪಾವತಿಯು ಶ್ರೀ ರಾಮಕೃಷ್ಣ ವಿದ್ಯಾಲಯದ ಹೆಸರಲ್ಲೆ ಆಗಿದ್ದು,ಪ್ರವೇಶ ಪತ್ರದಲ್ಲಿಯೂ ಶಾಲೆಯ ಹೆಸರೇ ಇರುತ್ತದೆ ಆದರೆ ಮೂಲ ಅಂಕಪಟ್ಟಿಯಲ್ಲಿ ಕೆಲವು ಕಾನೂನು ತೊಡಕುಗಳಿಂದ ಸರ್ಕಾರಿ ಪ್ರೌಢ ಶಾಲೆಯ ಹೆಸರು ನಮೂದಾಗಿದ್ದು ಇದನ್ನು ಸರಿಪಡಿಸಲು ಶಾಲಾ ಮಂಡಳಿಯೂ ಸತತ ಪರಿಶ್ರಮದಿಂದ ಸಾಧ್ಯವಾಗಿದೆ . ನಮ್ಮ ಶಾಲೆಯ ಪ್ರತಿಭೆಗಳ ಶೈಕ್ಷಣಿಕ ಸಾಧನೆಯು ಸರ್ಕಾರಿ ಶಾಲೆಗಳ ಪಾಲಾಗಿದ್ದು ಅದನ್ನು ಸರಿಪಡಿಸುವ ಹೋರಾಟದಲ್ಲಿ ಸತ್ಯದಪರವಾಗಿ ಗೆಲುವು ನಮ್ಮದಾಗಿದೆ , ಇನ್ನು ಪೋಷಕರು ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಶ್ರೀ ರಾಮಕೃಷ್ಣ ವಿದ್ಯಾಲಯದ ಸಂಸ್ಥಾಪಕ ದೇವರಾಜ್ ಹೇಳಿದರು.
ಪಟ್ಟಣದ ಶ್ರೀರಾಮಕೃಷ್ಣ ವಿದ್ಯಾಲಯದಲ್ಲಿ ಅಂಕಪಟ್ಟಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷರು ದೇವರಾಜ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಲಗೋಡು ರತ್ನಾಕರ್ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಲಗೋಡು ರತ್ನಾಕರ್ ನಿರಂತರವಾಗಿ ಶಿಕ್ಷಣ ಇಲಾಖೆಯವರೊಂದಿಗೆ ಹೋರಾಟ ನಡೆಸಿ ,ನ್ಯಾಯಾಲಯದ ಮೊರೆಯನ್ನಿಟ್ಟಿದ್ದ ಶಾಲಾ ಆಡಳಿತ ಮಂಡಳಿಯು ಸುಮಾರು 4 ತಿಂಗಳ ಹೋರಾಟದ ಮೂಲಕ ಅಂಕಪಟ್ಟಿಯನ್ನು ವಿತರಿಸಿದೆ.ಮಕ್ಕಳ ಭವಿಷ್ಯಕ್ಕೆ ಅತ್ಯಂತ ಪ್ರಮುಖವಾಗಿರುವ ಅಂಕ ಪಟ್ಟಿಯನ್ನು ದೊರಕಿಸುವಲ್ಲಿ ಶಾಲಾ ಆಡಳಿತ ಮಂಡಳಿಯೂ ಸಫಲವಾಗಿದೆ ಎಂದು ಹೇಳಿದರು
ಅನೇಕ ಪೋಷಕರು ಮಕ್ಕಳ ಭವಿಷ್ಯದ ಕುರಿತು ಆತಂಕಕೀಡಾಗಿದ್ದರು. ಅನೇಕ ಬಾರಿ ಶಾಲೆಗೆ ಇದನ್ನು ಸರಿಪಡಿಸುವಂತೆ ಮನವಿ ಮಾಡಿಕೊಂಡಿದ್ದರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ, ಸಚಿವರಿಗೆ , ಶಾಸಕರಿಗೆ ಪೋಷಕರು ಮನವಿಯನ್ನು ಕೂಡ ಮಾಡಿದ್ದರು. ಈಗ ಅಂಕಪಟ್ಟಿಯ ಕುರಿತಾದ ಗೊಂದಲಕ್ಕೆ ತೆರೆ ಬಿದ್ದಂತಾಗಿದೆ.
ಕಾರ್ಯಕ್ರಮದಲ್ಲಿ ರಿಪ್ಪನ್ ಪೇಟೆ ಶಾಲಾ ಆಡಳಿತ ಮಂಡಳಿಯ ಮತ್ತು ಪೋಷಕರ ವತಿಯಿಂದ ಶಾಲೆಯ ಪರವಾಗಿ ಸ್ಪಂದಿಸಿದ ಕಲಗೋಡು ರತ್ನಾಕರ್ ಮತ್ತು ದೇವರಾಜ್ ಅವರಿಗೆ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಗ್ರಾ.ಪಂ ಸದಸ್ಯ ಮಧುಸೂದನ್ , ಹಿರಿಯಣ್ಣ ಭಂಡಾರಿ, ಮತ್ತು ಪೋಷಕರು, ಶಾಲೆಯ ಶಿಕ್ಷಕ ವರ್ಗವು ಉಪಸ್ಥಿತರಿದ್ದರು.















Leave a Reply