ಟ್ರಾಫಿಕ್ ಪೊಲೀಸರ ತಪಾಸಣೆಯಲ್ಲಿ ಬಯಲಾಯ್ತು ಆರ್‌ಎಕ್ಸ್‌ ಬೈಕ್‌ನ ಅಸಲಿ ಕಥೆ! |ಇಂಜಿನ್ ಒಂದು, ಚಾಸಿಸ್ ಮತ್ತೊಂದು;ಬೈಕ್‌ನೊಳಗಿನ ರಹಸ್ಯವೇನು?

Screenshot 20260624 161306 Canva ಟ್ರಾಫಿಕ್ ಪೊಲೀಸರ ತಪಾಸಣೆಯಲ್ಲಿ ಬಯಲಾಯ್ತು ಆರ್‌ಎಕ್ಸ್‌ ಬೈಕ್‌ನ ಅಸಲಿ ಕಥೆ! |ಇಂಜಿನ್ ಒಂದು, ಚಾಸಿಸ್ ಮತ್ತೊಂದು;ಬೈಕ್‌ನೊಳಗಿನ ರಹಸ್ಯವೇನು?
Spread the love
img 20260110 wa00005161624299369770369 ಟ್ರಾಫಿಕ್ ಪೊಲೀಸರ ತಪಾಸಣೆಯಲ್ಲಿ ಬಯಲಾಯ್ತು ಆರ್‌ಎಕ್ಸ್‌ ಬೈಕ್‌ನ ಅಸಲಿ ಕಥೆ! |ಇಂಜಿನ್ ಒಂದು, ಚಾಸಿಸ್ ಮತ್ತೊಂದು;ಬೈಕ್‌ನೊಳಗಿನ ರಹಸ್ಯವೇನು?

ಶಿವಮೊಗ್ಗ: ಸೆಕೆಂಡ್ ಹ್ಯಾಂಡ್ ಯಮಹಾ ಆರ್‌ಎಕ್ಸ್‌ ಬೈಕ್ ಖರೀದಿಸಿದ ಯುವಕನೊಬ್ಬ ನಕಲಿ ದಾಖಲೆಗಳು ಹಾಗೂ ನಕಲಿ ಗುರುತು ಸಂಖ್ಯೆಗಳಿಂದ ವಂಚನೆಗೆ ಒಳಗಾದ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ.

ಶಿವಮೊಗ್ಗ ಮೂಲದ ಯುವಕನೊಬ್ಬ ಕಳೆದ ನಾಲ್ಕು ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದು, ಇತ್ತೀಚೆಗೆ ಆನ್‌ಲೈನ್ ಮೂಲಕ ಯಮಹಾ ಆರ್‌ಎಕ್ಸ್‌ ಬೈಕ್ ಖರೀದಿಸಲು ಹುಡುಕಾಟ ನಡೆಸಿದ್ದ. ಈ ವೇಳೆ ಗದಗ್‌ನ ವ್ಯಕ್ತಿಯೊಬ್ಬ ತನ್ನ ಬಳಿ ಬೈಕ್ ಇದ್ದು, ಹಣದ ತುರ್ತು ಕಾರಣದಿಂದ ₹55 ಸಾವಿರಕ್ಕೆ ಮಾರಾಟ ಮಾಡುವುದಾಗಿ ತಿಳಿಸಿದ್ದಾನೆ. ಇದನ್ನು ನಂಬಿದ ಯುವಕ ಆನ್‌ಲೈನ್ ಮೂಲಕ ಹಣ ಪಾವತಿಸಿ, ಸಂಬಂಧಿಕರ ಮೂಲಕ ಬೈಕ್ ಹಾಗೂ ದಾಖಲೆಗಳನ್ನು ಪಡೆದುಕೊಂಡಿದ್ದ.

ಜೂನ್ 17ರಂದು ರಜೆಯ ಮೇಲೆ ಶಿವಮೊಗ್ಗಕ್ಕೆ ಬಂದಿದ್ದ ಯುವಕ ಸಂಜೆ ಗೋಪಾಳದ ವಿನಾಯಕ ಸರ್ಕಲ್ ಬಳಿ ಬೈಕ್ ಚಲಾಯಿಸುತ್ತಿದ್ದ ವೇಳೆ ಹೆಡ್‌ಲೈಟ್ ಬಳಸದೇ ಸಂಚರಿಸಿದ್ದ ಕಾರಣ ಟ್ರಾಫಿಕ್ ಪೊಲೀಸರು ವಾಹನ ತಪಾಸಣೆಗೆ ನಿಲ್ಲಿಸಿದ್ದಾರೆ. ದಾಖಲೆಗಳ ಪರಿಶೀಲನೆ ವೇಳೆ ಬೈಕ್‌ಗೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು.

ಪರಿಶೀಲನೆಯಲ್ಲಿ ಬೈಕ್‌ನ ನಂಬರ್‌ಪ್ಲೇಟ್ 2019ರಲ್ಲಿ ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಯಮಹಾ ಆರ್‌ಎಕ್ಸ್‌ ಬೈಕ್‌ಗೆ ಸೇರಿದ್ದದ್ದು ಎಂದು ಪತ್ತೆಯಾಗಿದೆ. ಬಳಿಕ ಬೈಕ್‌ನ ಇಂಜಿನ್ ಹಾಗೂ ಚಾಸಿಸ್ ಸಂಖ್ಯೆಗಳ ಪರಿಶೀಲನೆ ನಡೆಸಿದಾಗ, ದಾಖಲೆಗಳಲ್ಲಿರುವ ಸಂಖ್ಯೆಗಳಿಗೂ ಬೈಕ್‌ನ ಮೇಲಿರುವ ಸಂಖ್ಯೆಗಳಿಗೂ ಯಾವುದೇ ಹೊಂದಾಣಿಕೆ ಇಲ್ಲದಿರುವುದು ಬೆಳಕಿಗೆ ಬಂದಿದೆ.ಆರೋಪಿಗಳು ಕಳ್ಳತನವಾದ ಬೈಕ್‌ನ ನೋಂದಣಿ ಸಂಖ್ಯೆಯನ್ನು ಬಳಸಿ ಮತ್ತೊಂದು ಬೈಕ್‌ಗೆ ನಕಲಿ ಆರ್‌ಸಿ ಕಾರ್ಡ್ ಸೃಷ್ಟಿಸಿ, ನಕಲಿ ಇಂಜಿನ್ ಹಾಗೂ ಚಾಸಿಸ್ ಸಂಖ್ಯೆಗಳನ್ನು ಅಳವಡಿಸಿ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಈ ಕುರಿತು ಯುವಕ ನೀಡಿದ ದೂರಿನ ಮೇರೆಗೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ

img 20260604 wa00394937960382974892117 ಟ್ರಾಫಿಕ್ ಪೊಲೀಸರ ತಪಾಸಣೆಯಲ್ಲಿ ಬಯಲಾಯ್ತು ಆರ್‌ಎಕ್ಸ್‌ ಬೈಕ್‌ನ ಅಸಲಿ ಕಥೆ! |ಇಂಜಿನ್ ಒಂದು, ಚಾಸಿಸ್ ಮತ್ತೊಂದು;ಬೈಕ್‌ನೊಳಗಿನ ರಹಸ್ಯವೇನು?

Leave a Reply

Your email address will not be published. Required fields are marked *