ರಿಪ್ಪನ್ ಪೇಟೆ: ತಳಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ರೈತರ ಹಿತದೃಷ್ಟಿಯಿಂದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಹೆಚ್ಚಿನ ರೈತರಿಗೆ ಸಾಲ ಸೌಲಭ್ಯ ಒದಗಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಎನ್. ದಿನೇಶ್ ಗೌಡ ಹೇಳಿದರು.
ತಳಲೆಯಲ್ಲಿ ನಡೆದ 2025–26ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ಸಂಘ ಇನ್ನಷ್ಟು ಆರ್ಥಿಕವಾಗಿ ಸದೃಢಗೊಳ್ಳಬೇಕಾದರೆ ಸಹಕಾರಿಗಳು ಸಂಘದಲ್ಲಿಯೇ ನಿರಂತರ ಠೇವಣಿ ಇಟ್ಟು ಉತ್ತಮ ಬಡ್ಡಿ ಸೌಲಭ್ಯ ಪಡೆಯಬೇಕು ಎಂದು ಕರೆ ನೀಡಿದರು.

2025–26ನೇ ಸಾಲಿನಲ್ಲಿ ಸಂಘವು ₹3.2 ಕೋಟಿ ಠೇವಣಿ ಸಂಗ್ರಹಿಸಿದ್ದು,ಲಾಭವನ್ನು ವಿವಿಧ ಮೀಸಲು ನಿಧಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಮಾಪತಿ ಎನ್. ಅವರು ವಾರ್ಷಿಕ ಆಯ-ವ್ಯಯ ವರದಿ ಮಂಡಿಸಿ, ಕಳೆದ ಸಾಲಿನಲ್ಲಿ ಸಂಘದಲ್ಲಿ ₹27.9 ಕೋಟಿ ಆರ್ಥಿಕ ವಹಿವಾಟು ನಡೆದಿರುವ ಮಾಹಿತಿ ನೀಡಿದರು. ಸಭೆಯು ವರದಿಯನ್ನು ಸರ್ವಾನುಮತದಿಂದ ಅಂಗೀಕರಿಸಿತು.
ಸಭೆಯಲ್ಲಿ ಉಪಾಧ್ಯಕ್ಷ ಕೆ.ಆರ್. ಮಂಜುನಾಥ್, ನಿರ್ದೇಶಕರಾದ ಲೋಕಪ್ಪಗೌಡ, ಕೆ.ಜಿ. ಬಸಪ್ಪ, ಈ.ಡಿ. ಮಂಜುನಾಥ್, ಹೆಚ್.ಎನ್. ಅಭಿಷೇಕ್, ಹೆಚ್.ಎನ್. ಗಂಗಾಧರ, ಗೌರಮ್ಮ, ಶೇಷಮ್ಮ, ದೇವರಾಜ್, ಕೆ.ಬಿ. ಡಾಕಪ್ಪ, ಗಣೇಶ್, ಸಿಬ್ಬಂದಿಗಳಾದ ಹೆಚ್.ಕೆ. ಸುನೀಲ್ ಕುಮಾರ್, ಕೃತಿ ಹೆಚ್.ಕೆ., ಅಂಕಿತ, ಲೆಕ್ಕ ಪರಿಶೋಧಕ ಅರುಣ್ ಬಿ.ಎಸ್., ಪಿಗ್ಮಿ ಸಂಗ್ರಾಹಕರಾದ ಕೆ.ಟಿ. ಸೋಮಶೇಖರ್, ಕೃಷ್ಣಮೂರ್ತಿ ಭಂಡಾರಿ, ಈಶ್ವರಪ್ಪ ಸೇರಿದಂತೆ ನೂರಾರು ಸಹಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.
















Leave a Reply