ರಿಪ್ಪನ್ ಪೇಟೆ: ಪಟ್ಟಣದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಾರ್ಷಿಕ ಶ್ರೀಮನ್ಮಹಾರಥೋತ್ಸವದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಮೂಲೆಗದ್ದೆ ಮಠದ ಮಹಂತರಾದ ಅಭಿನವ ಚೆನ್ನಬಸವ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, “ಧರ್ಮ ರಹಿತ ಸಮಾಜದ ಕಲ್ಯಾಣ ಅಸಾಧ್ಯ. ಧರ್ಮ ಪಾಲನೆ ಪ್ರತಿಯೊಬ್ಬರ ಕರ್ತವ್ಯ. ಭಾರತೀಯ ಧರ್ಮ ಸಂಸ್ಕೃತಿಯನ್ನು ವಿದೇಶಗಳೂ ಗೌರವದಿಂದ ಕಾಣುತ್ತಿವೆ. ನಮ್ಮ ಜೀವನದಲ್ಲಿ ಧರ್ಮ ಸಂಸ್ಕಾರಗಳನ್ನು ಅಳವಡಿಸಿಕೊಂಡರೆ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ” ಎಂದು ತಿಳಿಸಿದರು.
ದೇವಾಲಯಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಭಕ್ತರಲ್ಲಿ ಆತ್ಮೀಯತೆ ಹಾಗೂ ನೈತಿಕ ಮೌಲ್ಯಗಳನ್ನು ಹೆಚ್ಚಿಸುತ್ತವೆ. ಸಮಾಜದ ಉನ್ನತಿಗೆ ಧರ್ಮ ಮತ್ತು ಸಂಸ್ಕಾರದ ಪಾತ್ರ ಮಹತ್ವದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಸಿದ್ಧಿವಿನಾಯಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆರ್.ಈ. ಈಶ್ವರ ಶೆಟ್ಟಿ ವಹಿಸಿದ್ದರು.
ಈ ಸಂದರ್ಭದಲ್ಲಿ ಸಿದ್ಧಿವಿನಾಯಕ ಸೇವಾ ಸಮಿತಿ ಅಧ್ಯಕ್ಷ ಎನ್. ಸತೀಶ್, ಧರ್ಮದರ್ಶಿ ಸಮಿತಿ ನಿರ್ದೇಶಕಿ ಎಂ.ಡಿ. ಇಂದ್ರಮ್ಮ, ಭೀಮರಾಜ ಗೌಡ,ಗಣೇಶ್ ಕಾಮತ್,ಮಧುಸೂದನ್, ದೇವದಾಸ್ ಆಚಾರ್ ನಾಡಕಚೇರಿ ಉಪತಹಶೀಲ್ದಾರ್ ಗೌತಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.















Leave a Reply