ವರ್ಷದ ಗ್ಲೋಬಲ್ ಸಾರಸ್ವತ ಚೇಂಬರ್ ಅಪ್ರಿಶಿಯೇಷನ್ ಪ್ರಶಸ್ತಿ – ಶಿವಮೊಗ್ಗ  ಚಾಪ್ಟರ್‌ಗೆ

Screenshot 20260609 210029 Canva ವರ್ಷದ ಗ್ಲೋಬಲ್ ಸಾರಸ್ವತ ಚೇಂಬರ್ ಅಪ್ರಿಶಿಯೇಷನ್ ಪ್ರಶಸ್ತಿ - ಶಿವಮೊಗ್ಗ  ಚಾಪ್ಟರ್‌ಗೆ
Spread the love

ಯುವ ಉದ್ಯಮಿ ಹರ್ಷ ಭಾಸ್ಕರ್ ಕಾಮತ್ ನೇತೃತ್ವದ ತಂಡಕ್ಕೆ ರಾಷ್ಟ್ರೀಯ ಮಟ್ಟದ ಗೌರವ

img 20260110 wa00007826958388479709512 ವರ್ಷದ ಗ್ಲೋಬಲ್ ಸಾರಸ್ವತ ಚೇಂಬರ್ ಅಪ್ರಿಶಿಯೇಷನ್ ಪ್ರಶಸ್ತಿ - ಶಿವಮೊಗ್ಗ  ಚಾಪ್ಟರ್‌ಗೆ

ಶಿವಮೊಗ್ಗ : ಹುಬ್ಬಳ್ಳಿಯಲ್ಲಿ  ನಡೆದ ಗ್ಲೋಬಲ್ ಸಾರಸ್ವತ ಚೇಂಬರ್ (GSC) ಗ್ಲೋಬಲ್ ಮೀಟ್ ಮತ್ತು ಕಾನ್ಫರೆನ್ಸ್‌ನಲ್ಲಿ ಈ ಬಾರಿಯ ಪ್ರತಿಷ್ಠಿತ “ಅಪ್ರಿಶಿಯೇಷನ್ ಅವಾರ್ಡ್” ಅನ್ನು ಶಿವಮೊಗ್ಗ ಜಿ.ಎಸ್.ಬಿ ಚಾಪ್ಟರ್‌ಗೆ ಪ್ರದಾನ ಮಾಡಿ ಗೌರವಿಸಲಾಯಿತು.

ಯುವ ಉದ್ಯಮಿ ಹರ್ಷ ಭಾಸ್ಕರ್ ಕಾಮತ್ ಅವರ ನೇತೃತ್ವದಲ್ಲಿ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶಿವಮೊಗ್ಗ ಚಾಪ್ಟರ್, ಜಿಲ್ಲೆಯ ಗ್ರಾಮೀಣ ಭಾಗದಲ್ಲಿರುವ ಸಾರಸ್ವತ ಬ್ರಾಹ್ಮಣ ಸಮುದಾಯದ ಯುವಕರನ್ನು ಗುರುತಿಸಿ, ಅವರಿಗೆ ಸ್ವಯಂ ಉದ್ಯೋಗ ಹಾಗೂ ಸ್ಟಾರ್ಟ್‌ಅಪ್‌ಗಳಿಗಾಗಿ ಅಗತ್ಯವಾದ ಮಾರ್ಗದರ್ಶನ, ಬ್ಯಾಂಕ್ ಸಾಲ ಸೌಲಭ್ಯಗಳ ವ್ಯವಸ್ಥೆ ಮತ್ತು ವಿವಿಧ ರೀತಿಯ ಸಹಕಾರವನ್ನು ಒದಗಿಸುತ್ತಿದೆ. ಯುವಕರು ಆತ್ಮವಿಶ್ವಾಸದಿಂದ ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲುವಂತೆ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಸೇವಾ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.

ಯುವ ಸಮುದಾಯದ ಸಬಲೀಕರಣಕ್ಕಾಗಿ ಶಿವಮೊಗ್ಗ ಜಿ.ಎಸ್.ಸಿ ಚಾಪ್ಟರ್ ಕೈಗೊಂಡಿರುವ ಈ ಮಹತ್ವದ ಕಾರ್ಯವನ್ನು ಪರಿಗಣಿಸಿ, ಗ್ಲೋಬಲ್ ಸಾರಸ್ವತ ಚೇಂಬರ್ ವತಿಯಿಂದ ವಿಶೇಷ ಅಪ್ರಿಶಿಯೇಷನ್ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.

ಈ ಪ್ರಶಸ್ತಿಯನ್ನು ಹರ್ಷ ಭಾಸ್ಕರ್ ಕಾಮತ್ ಹಾಗೂ ಪವಿತ್ರಾ ಕಾಮತ್ ಅವರು ಸ್ವೀಕರಿಸಿದರು.

ಶಿವಮೊಗ್ಗ ಚಾಪ್ಟರ್‌ಗೆ ದೊರೆತಿರುವ ಈ ಗೌರವಕ್ಕಾಗಿ  ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಶಿವಮೊಗ್ಗದ ಅಧ್ಯಕ್ಷ ಭಾಸ್ಕರ್ ಜಿ. ಕಾಮತ್, ಸಮಾಜದ ಮುಖಂಡರಾದ ವೇದಮೂರ್ತಿ ನೃಸಿಂಹಮೂರ್ತಿ ಭಟ್, ರಮೇಶ್ ಶೆಣೈ, ನಾರಾಯಣ ಪ್ರಭು,ನೃಸಿಂಹ ಕಿಣಿ, ದೇವದಾಸ ನಾಯಕ, ಕಿರಣ್ ಪೈ, ಪ್ರಕಾಶ್ ಪ್ರಭು ಹಾಗೂ ಸಮಾಜದ ಹಿರಿಯರು ಮತ್ತು ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ಈ ಪ್ರಶಸ್ತಿ ಶಿವಮೊಗ್ಗ ಚಾಪ್ಟರ್‌ನ ಸಮಾಜಮುಖಿ ಕಾರ್ಯಗಳಿಗೆ ದೊರೆತಿರುವ ಮಹತ್ವದ ಮಾನ್ಯತೆಯಾಗಿದ್ದು, ಮುಂದಿನ ದಿನಗಳಲ್ಲಿ ಸಮಾಜದ ಯುವಕರ ಅಭಿವೃದ್ಧಿ, ಸ್ವಯಂ ಉದ್ಯೋಗ, ಉದ್ಯಮಶೀಲತೆ ಹಾಗೂ ಸ್ಟಾರ್ಟ್‌ಅಪ್ ಸಂಸ್ಕೃತಿಯ ಉತ್ತೇಜನಕ್ಕಾಗಿ ಇನ್ನಷ್ಟು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಕಲ್ಪವನ್ನು ಚಾಪ್ಟರ್ ವ್ಯಕ್ತಪಡಿಸಿದೆ.

ಆನಂದಪುರ 20260608 153202 0000634243529529327681 ವರ್ಷದ ಗ್ಲೋಬಲ್ ಸಾರಸ್ವತ ಚೇಂಬರ್ ಅಪ್ರಿಶಿಯೇಷನ್ ಪ್ರಶಸ್ತಿ - ಶಿವಮೊಗ್ಗ  ಚಾಪ್ಟರ್‌ಗೆ
img 20260604 wa00399074143904681917922 ವರ್ಷದ ಗ್ಲೋಬಲ್ ಸಾರಸ್ವತ ಚೇಂಬರ್ ಅಪ್ರಿಶಿಯೇಷನ್ ಪ್ರಶಸ್ತಿ - ಶಿವಮೊಗ್ಗ  ಚಾಪ್ಟರ್‌ಗೆ

Leave a Reply

Your email address will not be published. Required fields are marked *