3ನೇ ಬಾರಿ ಭಾರತದ ಮುಡಿಗೆ ಟಿ20 ವಿಶ್ವಕಪ್ ಕಿರೀಟ

IMG 20260308 WA0033 3ನೇ ಬಾರಿ ಭಾರತದ ಮುಡಿಗೆ ಟಿ20 ವಿಶ್ವಕಪ್ ಕಿರೀಟ
Spread the love

ಹಾಲಿ ಚಾಂಪಿಯನ್ ಟೀಮ್ ಇಂಡಿಯಾ 2026ರ ಟಿ20 ವಿಶ್ವಕಪ್ ಫೈನಲ್ ನಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಮಣಿಸಿ ಟ್ರೋಫಿ ಗೆದ್ದುಕೊಂಡಿದೆ.

ನ್ಯೂಜಿಲೆಂಡ್ ತಂಡವನ್ನು 156 ರನ್ ಗೆ ಕಟ್ಟಿ ಹಾಕಿ 96 ರನ್ ಭರ್ಜರಿ ಗೆಲುವು ದಾಖಲಿಸಿದೆ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಆಥಿತ್ಯವಹಿಸಿದ್ದ ದೇಶ ಒಂದು ಟ್ರೋಫಿ ಗೆದ್ದುಕೊಂಡ ಸಾಧನೆ ಮಾಡಿದೆ.

img 20260308 wa00306306838582941123055 3ನೇ ಬಾರಿ ಭಾರತದ ಮುಡಿಗೆ ಟಿ20 ವಿಶ್ವಕಪ್ ಕಿರೀಟ

ನ್ಯೂಜಿಲೆಂಡ್ ಗೆಲುವಿಗೆ 256 ರನ್ ಬೃಹತ್ ಟಾರ್ಗೆಟ್ ನೀಡಲಾಗಿತ್ತು. ಆದರೆ ಯಾವ ಹಂತದಲ್ಲೂ ನ್ಯೂಜಿಲ್ಯಾಂಡ್ ತಂಡ ಸವಾಲು ಒಡ್ಡಲು ಟೀಮ್ ಇಂಡಿಯಾ ಬೌಲರ್ ಅವಕಾಶ ನೀಡಲೇ ಇಲ್ಲ ಆರಂಭದಲ್ಲಿ ಅಕ್ಸರ್ ಪಟೇಲ್ ಹಾಗೂ ಜಸ್ಪ್ರಿತ್ ಬಮ್ರಾ ಸವಾರಿ ಮಾಡಿದರು. ಇದರ ಪರಿಣಾಮ ನ್ಯೂಜಿಲ್ಯಾಂಡ್ ಸತತ ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತು. ಟಿಮ್ ಸೈಫರ್ಟ್ ಕೆಲ ಹೊತ್ತು  ಆಸರೆಯಾಗಿದ್ದರು. 52 ರನ್ ಸಿಡಿಸಿದ್ದರು. ಉಳಿದ ನ್ಯೂಜಿಲೆಂಡ್ ಘಟಾನುಘಟಿ ಬ್ಯಾಟರ್ ಗಳು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

ಭಾರತದ ಈ ಟ್ರೋಫಿ ಗೆದ್ದು ಸಾಧನೆ ಸವಾರಿಯನ್ನು ಮುಂದುವರೆಸಿದೆ. ದೇಶದೆಲ್ಲೆಡೆ ಸಂಭ್ರಮಾಚರಣೆ ನಡೆಯುತ್ತಿದೆ.

Leave a Reply

Your email address will not be published. Required fields are marked *