
ಶಿವಮೊಗ್ಗ: ಸಂಚಾರ ನಿಯಮ ಉಲ್ಲಂಘನೆಯ ದಂಡ ಪಾವತಿಸುವ ಆರ್‌ಟಿಒ ಇ-ಚಲನ್ ಹೆಸರಿನಲ್ಲಿ ಬಂದ ನಕಲಿ ಎಪಿಕೆ ಫೈಲ್ ಲಿಂಕ್ ಕ್ಲಿಕ್ ಮಾಡಿದ ಪೊಲೀಸ್ ಸಿಬ್ಬಂದಿಯೇ ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿರುವ ಘಟನೆ ವರದಿಯಾಗಿದೆ.

ಪೊಲೀಸ್ ಸಿಬಂದಿ ವಾಟ್ಸಾಪ್‌ಗೆ ಆರ್‌ಟಿಒ ಇ-ಚಲನ್ ಎಪಿಕೆ ಎಂಬ ಫೈಲ್ ಬಂದಿತ್ತು. ಅದನ್ನು ಆರ್‌ಟಿಒ ಇಲಾಖೆಯಿಂದ ಬಂದಿರಬಹುದೆಂದು ನಂಬಿದ ಅವರು, ಫೈಲ್ ಓಪನ್ ಮಾಡಿದ್ದಾರೆ. ಆದರೆ ಅದರಲ್ಲಿ ಯಾವುದೇ ಮಾಹಿತಿ ಕಾಣಿಸದ ಕಾರಣ ಅವರು ಆಪ್‌ನಿಂದ ಹೊರಬಂದಿದ್ದರು. ಮರುದಿನ ತಮ್ಮ ಮೊಬೈಲ್ ಗಮನಿಸಿದಾಗ, ಕೆನರಾ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 6,78,759 ರೂ. ಹಣ ಕಡಿತವಾಗಿರುವ ಮೆಸೇಜ್‌ಗಳು ಬಂದಿದ್ದವು. ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಪರಿಚಿತರು ನಕಲಿ ಫೈಲ್ ಕಳುಹಿಸಿ, ಪೊಲೀಸ್ ಸಿಬ್ಬಂದಿಯ ವೈಯಕ್ತಿಕ ಮಾಹಿತಿ ಕದ್ದು ಆನ್‌ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.














Leave a Reply