ರಿಪ್ಪನ್‌ಪೇಟೆ: ಅಕ್ರಮ ಇಸ್ಪೀಟ್ ಜೂಜಾಟದ ಮೇಲೆ ದಾಳಿ -9 ಮಂದಿ ವಶ, ನಗದು ಜಪ್ತಿ!

Screenshot 20260626 181554 Canva 1 ರಿಪ್ಪನ್‌ಪೇಟೆ: ಅಕ್ರಮ ಇಸ್ಪೀಟ್ ಜೂಜಾಟದ ಮೇಲೆ ದಾಳಿ -9 ಮಂದಿ ವಶ, ನಗದು ಜಪ್ತಿ!
Spread the love
img 20260110 wa00006202429694433311053 ರಿಪ್ಪನ್‌ಪೇಟೆ: ಅಕ್ರಮ ಇಸ್ಪೀಟ್ ಜೂಜಾಟದ ಮೇಲೆ ದಾಳಿ -9 ಮಂದಿ ವಶ, ನಗದು ಜಪ್ತಿ!

ರಿಪ್ಪನ್‌ಪೇಟೆ:ರಸಾಳು ಗ್ರಾಮದ ಮಾಣಿಕೆರೆ ಸಮೀಪದ ಖಾಸಗಿ ಗದ್ದೆಯ ಪಕ್ಕದ ನೀಲಗಿರಿ ತೋಪಿನಲ್ಲಿ ಅಕ್ರಮವಾಗಿ ಹಣ ಪಣಕ್ಕಿಟ್ಟು ಇಸ್ಪೀಟ್ ಜೂಜಾಟ ನಡೆಸುತ್ತಿದ್ದ 9 ಮಂದಿಯನ್ನು ರಿಪ್ಪನ್‌ಪೇಟೆ ಪೊಲೀಸರು ವಶಕ್ಕೆ ಪಡೆದು, ನಗದು ಸೇರಿದಂತೆ ಜೂಜಾಟಕ್ಕೆ ಬಳಸುತ್ತಿದ್ದ ವಿವಿಧ ಸಾಮಗ್ರಿಗಳನ್ನು ಜಪ್ತಿ ಮಾಡಿದ್ದಾರೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್ಐ ರಾಜುರೆಡ್ಡಿ ನೇತೃತ್ವದ ಪೊಲೀಸ್ ತಂಡವು ಠಾಣಾ ವ್ಯಾಪ್ತಿಯ ದೂನ, ಬೆನವಳ್ಳಿ ಹಾಗೂ ಅರಸಾಳು ಗ್ರಾಮಗಳಲ್ಲಿ ಗಸ್ತು ತಿರುಗುತ್ತಿದ್ದ ವೇಳೆ, ಮಾಣಿಕೆರೆ ಸಮೀಪದ ನೀಲಗಿರಿ ತೋಪಿನಲ್ಲಿ ಕೆಲವರು ಅಕ್ರಮವಾಗಿ ಜೂಜಾಟ ನಡೆಸುತ್ತಿರುವ ಕುರಿತು ಖಚಿತ ಮಾಹಿತಿ ಲಭಿಸಿತು.
ಮಾಹಿತಿಯ ಆಧಾರದಲ್ಲಿ ಸ್ಥಳಕ್ಕೆ ದಿಢೀರ್ ದಾಳಿ ನಡೆಸಿದ ಪೊಲೀಸರು, ಜೂಜಾಟದಲ್ಲಿ ತೊಡಗಿದ್ದ 9 ಮಂದಿಯನ್ನು ವಶಕ್ಕೆ ಪಡೆದು, ಅವರಿಂದ ₹3,150 ನಗದು, 52 ಇಸ್ಪೀಟ್ ಎಲೆಗಳು, ಜೂಜಾಟಕ್ಕೆ ಬಳಸಿದ್ದ ಪ್ಲಾಸ್ಟಿಕ್ ಟಾರ್ಪಲ್ ಹಾಗೂ ಬೆಡ್‌ಶೀಟ್ ಅನ್ನು ಜಪ್ತಿ ಮಾಡಿದರು.

ಈ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ಸಂಖ್ಯೆ 158/2026 ದಾಖಲಿಸಲಾಗಿದೆ. ಪ್ರಕರಣವು ಅಸಂಜ್ಞೇಯ ಸ್ವರೂಪದ್ದಾಗಿರುವುದರಿಂದ ನ್ಯಾಯಾಲಯದ ಅನುಮತಿ ಪಡೆದು ಆರೋಪಿಗಳ ವಿರುದ್ಧ ವಿಧಿವತ್ತಾಗಿ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

img 20260604 wa00392010532768048076228 ರಿಪ್ಪನ್‌ಪೇಟೆ: ಅಕ್ರಮ ಇಸ್ಪೀಟ್ ಜೂಜಾಟದ ಮೇಲೆ ದಾಳಿ -9 ಮಂದಿ ವಶ, ನಗದು ಜಪ್ತಿ!

Leave a Reply

Your email address will not be published. Required fields are marked *