ರಿಪ್ಪನ್ಪೇಟೆ: ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನೆಯ 59ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನ ಪೂಜೆ ಗುರುವಾರ ಮಧ್ಯಾಹ್ನ ಭಕ್ತಿಭಾವದಿಂದ ನೆರವೇರಿತು. ಇದರೊಂದಿಗೆ ರಾಜಬೀದಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.
ಪಟ್ಟಣದ ಭೂಪಾಳಂ ಚಂದ್ರಶೇಖರಯ್ಯ ಸಭಾಂಗಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಸಿದ್ಧಿವಿನಾಯಕಸ್ವಾಮಿಗೆ 11ನೇ ದಿನದ ಕೊನೆಯ ಆರಾಧನೆ ಹಾಗೂ ವಿಸರ್ಜನ ಪೂಜೆ ನೆರವೇರಿತು. ಪೂಜೆಯ ವೇಳೆಯಲ್ಲಿಯೇ ಪಟ್ಟಣದಲ್ಲಿ ಸುರಿದ ಪನ್ನೀರು ಮಳೆಯನ್ನು ಭಕ್ತರು ಶುಭಸೂಚಕವಾಗಿ ಸ್ವೀಕರಿಸಿ, ಗಣಪತಿಯ ಗ್ರೀನ್ ಸಿಗ್ನಲ್ ಎಂದು ಸಂಭ್ರಮಿಸಿದರು.

ವಿಸರ್ಜನ ಪೂಜೆಯಲ್ಲಿ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನೆಯ ಪದಾಧಿಕಾರಿಗಳು ನಾಡಿನ ಶ್ರೇಯೋಭಿವೃದ್ಧಿ, ಹಿಂದೂ ರಾಷ್ಟ್ರದ ಸುಭಿಕ್ಷೆ ಹಾಗೂ ವಿಶ್ವಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಮಧ್ಯಾಹ್ನ 3 ಗಂಟೆಗೆ ಭವ್ಯ ಬೈಕ್ ರ್ಯಾಲಿ ನಡೆಯಲಿದ್ದು, ಬಳಿಕ ರಾಜಬೀದಿ ಉತ್ಸವ ವಿಜೃಂಭಣೆಯಿಂದ ಸಾಗಲಿದೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಬಾಂಧವರು ಆಗಮಿಸಬೇಕಾಗಿ ಸಮಿತಿ ಮನವಿ ಮಾಡಿಕೊಂಡಿದೆ.
ಉತ್ಸವದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಿದೆ.
















Leave a Reply