ರಿಪ್ಪನ್ ಪೇಟೆಯಲ್ಲಿ ಹಿಂದೂ ಮಹಾಸಭಾ ಗಣಪತಿ ಅದ್ದೂರಿ ರಾಜಬೀದಿ ಉತ್ಸವ |ಜಾನಪದ ಕಲಾತಂಡಗಳ ಮೆರಗು

Addaheading 20260925 043635 0000 ರಿಪ್ಪನ್ ಪೇಟೆಯಲ್ಲಿ ಹಿಂದೂ ಮಹಾಸಭಾ ಗಣಪತಿ ಅದ್ದೂರಿ ರಾಜಬೀದಿ ಉತ್ಸವ |ಜಾನಪದ ಕಲಾತಂಡಗಳ ಮೆರಗು
Spread the love

ರಿಪ್ಪನ್‌ಪೇಟೆ: ಕರ್ನಾಟಕ ಪ್ರಾಂತೀಯ ಹಿಂದೂರಾಷ್ಟ್ರ ಸೇನಾ ಸಮಿತಿಯ ವತಿಯಿಂದ ಆಯೋಜಿಸಲಾದ 59ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಶ್ರೀ ವರಸಿದ್ದಿವಿನಾಯಕನ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಗುರುವಾರ ಭಕ್ತಜನಸಾಗರದ ಮಧ್ಯೆ ಅದ್ದೂರಿಯಾಗಿ ನಡೆಯಿತು. ತಳಿರು ತೋರಣ, ರಂಗೋಲಿ, ವಿದ್ಯುತ್ ದೀಪಾಲಂಕಾರ ಹಾಗೂ ನಾಡಿನ ಹೆಸರಾಂತ ಜಾನಪದ ಕಲಾತಂಡಗಳ ಪ್ರದರ್ಶನ ಉತ್ಸವಕ್ಕೆ ವಿಶೇಷ ಮೆರುಗು ನೀಡಿತು.

20260924 1759561865511507419097026 ರಿಪ್ಪನ್ ಪೇಟೆಯಲ್ಲಿ ಹಿಂದೂ ಮಹಾಸಭಾ ಗಣಪತಿ ಅದ್ದೂರಿ ರಾಜಬೀದಿ ಉತ್ಸವ |ಜಾನಪದ ಕಲಾತಂಡಗಳ ಮೆರಗು

  ಪಟ್ಟಣದ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದ ತಿಲಕ್ ಮಂಟಪದಲ್ಲಿ ಪ್ರತಿಷ್ಠಾಪಿಸಲಾದ ಶ್ರೀ ವರಸಿದ್ದಿವಿನಾಯಕ ಸ್ವಾಮಿಗೆ ಹತ್ತು ದಿನಗಳ ಕಾಲ ವಿಶೇಷ ಪೂಜೆ–ಆರಾಧನೆ ನಡೆದ ಬಳಿಕ ವಿಸರ್ಜನಾ ಪೂರ್ವ ಪೂಜೆ ನೆರವೇರಿಸಿ ರಾಜಬೀದಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

  ಉತ್ಸವಕ್ಕೂ ಮುನ್ನ ಮಧ್ಯಾಹ್ನ 3.30ಕ್ಕೆ ಹಿಂದೂ ಮಹಾಸಭಾ ಯುವಕರಿಂದ ಹಿಂದೂ ಜಾಗೃತಿ ಬೈಕ್ ರ‍್ಯಾಲಿ ನಡೆಯಿತು. ಶಿವಮೊಗ್ಗ ರಸ್ತೆಯ ವಿನಾಯಕ ದೇವಸ್ಥಾನದಿಂದ ಹೊರಟ ನೂರಾರು ಬೈಕ್‌ಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ವೇಳೆ ಭಾರತ್ ಮಾತಾ ಕೀ ಜಯ್, ಜೈ ಶ್ರೀರಾಮ್, ಗಣಪತಿ ಬಪ್ಪಾ ಮೊರೆಯಾ ಘೋಷಣೆಗಳು ಮೊಳಗಿದವು.

image editor output image 1238419070 17902912749058908982669975028508 ರಿಪ್ಪನ್ ಪೇಟೆಯಲ್ಲಿ ಹಿಂದೂ ಮಹಾಸಭಾ ಗಣಪತಿ ಅದ್ದೂರಿ ರಾಜಬೀದಿ ಉತ್ಸವ |ಜಾನಪದ ಕಲಾತಂಡಗಳ ಮೆರಗು

  ಸಂಜೆ ಆರಂಭವಾದ ರಾಜಬೀದಿ ಉತ್ಸವದಲ್ಲಿ ಪಾಂಡವಪುರದ ಅಜಯ್ ತಂಡದ ತಮಟೆ ವಾದ್ಯ, ಜಿಮ್ನಾಸ್ಟಿಕ್, ಕತ್ತಿ ವರಸೆ, ದೊಣ್ಣೆ ವರಸೆ, ಬೆಂಕಿ ಚೆಂಡಿನ ಆಟ, ಕಾರ್ಕಳದ ಕೀಲು ಕುದುರೆ, ನವಿಲು ಕುಣಿತ, ಗೊಂಬೆ ಕುಣಿತ, ನಗಾರಿ, ಡೊಳ್ಳು ಕುಣಿತ, ತಟ್ಟಿರಾಯ ವೀರಗಾಸೆ ಹಾಗೂ ಉಡುಪಿಯ ಮಹಿಳಾ ಭಜನೆ-ಕೋಲಾಟ ತಂಡಗಳ ವಿಶೇಷವಾಗಿ ಸ್ಥಳೀಯ ಕಲಾವಿದ ಮಂಜು ಗೊಂಬೆ ಬಳಗದ ಆಕರ್ಷಕ ಪ್ರದರ್ಶನ ಜನಮನ ಸೆಳೆಯಿತು. ಸ್ಪೀಕರ್ ಸಂಗೀತಕ್ಕೆ ಯುವಕರು, ಯುವತಿಯರು ಮತ್ತು ಪುಟಾಣಿ ಮಕ್ಕಳು ಹೆಜ್ಜೆ ಹಾಕಿ ಸಂಭ್ರಮಿಸಿದರು.

20260924 1818254920845808960268856 ರಿಪ್ಪನ್ ಪೇಟೆಯಲ್ಲಿ ಹಿಂದೂ ಮಹಾಸಭಾ ಗಣಪತಿ ಅದ್ದೂರಿ ರಾಜಬೀದಿ ಉತ್ಸವ |ಜಾನಪದ ಕಲಾತಂಡಗಳ ಮೆರಗು

  ಉತ್ಸವ ಸಾಗಿದ ಮಾರ್ಗದುದ್ದಕ್ಕೂ ಮನೆಗಳ ಮುಂದೆ ಮಹಿಳೆಯರು ರಂಗೋಲಿ ಬಿಡಿಸಿ ಶ್ರೀ ಗಣಪತಿಯನ್ನು ಸ್ವಾಗತಿಸಿದರು.

image editor output image540148328 17902913623394683890508578396092 ರಿಪ್ಪನ್ ಪೇಟೆಯಲ್ಲಿ ಹಿಂದೂ ಮಹಾಸಭಾ ಗಣಪತಿ ಅದ್ದೂರಿ ರಾಜಬೀದಿ ಉತ್ಸವ |ಜಾನಪದ ಕಲಾತಂಡಗಳ ಮೆರಗು

  ಉತ್ಸವದ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಡಿವೈಎಸ್ಪಿ ನೇತೃತ್ವದಲ್ಲಿ ಕೆಎಸ್‌ಆರ್‌ಪಿ, ಡಿಎಆರ್, ಗೃಹರಕ್ಷಕ ದಳ ಸೇರಿದಂತೆ ಸುಮಾರು 250ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.

ಕರ್ನಾಟಕ ಪ್ರಾಂತೀಯ ಹಿಂದೂರಾಷ್ಟ್ರ ಸೇನಾ ಸಮಿತಿಯ ಅಧ್ಯಕ್ಷ ಸುದೀಂದ್ರ ಪೂಜಾರಿ, ಕಾರ್ಯದರ್ಶಿ ಆರ್.ಎಂ. ನವೀನ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಸಾವಿರಾರು ಭಕ್ತರು ಉತ್ಸವದಲ್ಲಿ ಭಾಗವಹಿಸಿದ್ದರು.

image editor output image 368070313 1790292881672322516961678089157 ರಿಪ್ಪನ್ ಪೇಟೆಯಲ್ಲಿ ಹಿಂದೂ ಮಹಾಸಭಾ ಗಣಪತಿ ಅದ್ದೂರಿ ರಾಜಬೀದಿ ಉತ್ಸವ |ಜಾನಪದ ಕಲಾತಂಡಗಳ ಮೆರಗು
ಮಂಜು ಗೊಂಬೆ ಬಳಗ
img 20260924 wa00554989060638467818179 ರಿಪ್ಪನ್ ಪೇಟೆಯಲ್ಲಿ ಹಿಂದೂ ಮಹಾಸಭಾ ಗಣಪತಿ ಅದ್ದೂರಿ ರಾಜಬೀದಿ ಉತ್ಸವ |ಜಾನಪದ ಕಲಾತಂಡಗಳ ಮೆರಗು
ಸನ್ಮಾನ್ಯ ಶಾಸಕ ಗೋಪಾಲ್ ಕೃಷ್ಣ ಬೇಳೂರು ಶ್ರೀಸ್ವಾಮಿಗೆ ಮಾಲಾರ್ಪಣೆ ಮಾಡಿ. ಯುವಕರೊಂದಿಗೆ ಹೆಜ್ಜೆ ಹಾಕಿದರು.
img 20260924 wa00497085325265152065283 ರಿಪ್ಪನ್ ಪೇಟೆಯಲ್ಲಿ ಹಿಂದೂ ಮಹಾಸಭಾ ಗಣಪತಿ ಅದ್ದೂರಿ ರಾಜಬೀದಿ ಉತ್ಸವ |ಜಾನಪದ ಕಲಾತಂಡಗಳ ಮೆರಗು
ಡಿವೈಎಸ್ಪಿ ಭಾನುಪ್ರಕಾಶ್ ನೇತೃತ್ವದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಗಣಪತಿಗೆ ಮಾಲಾರ್ಪಣೆ ಮಾಡಲಾಯಿತು.
img 20260924 wa00542961529641211529749 ರಿಪ್ಪನ್ ಪೇಟೆಯಲ್ಲಿ ಹಿಂದೂ ಮಹಾಸಭಾ ಗಣಪತಿ ಅದ್ದೂರಿ ರಾಜಬೀದಿ ಉತ್ಸವ |ಜಾನಪದ ಕಲಾತಂಡಗಳ ಮೆರಗು
ತಹಸೀಲ್ದಾರ್ ಭರತ್ ರಾಜ್ ಅವರ ನೇತೃತ್ವದಲ್ಲಿ ತಾಲೂಕು ಆಡಳಿತ, ಕಂದಾಯ ಇಲಾಖೆ ವತಿಯಿಂದ ನಾಡಕಛೇರಿ ಎದುರು ಮಾಲಾರ್ಪಣೆ ಮಾಡಲಾಯಿತು.
20260925 001619472962407274398571 ರಿಪ್ಪನ್ ಪೇಟೆಯಲ್ಲಿ ಹಿಂದೂ ಮಹಾಸಭಾ ಗಣಪತಿ ಅದ್ದೂರಿ ರಾಜಬೀದಿ ಉತ್ಸವ |ಜಾನಪದ ಕಲಾತಂಡಗಳ ಮೆರಗು

ವಿನಾಯಕ ವೃತ್ತ ತಲುಪುತ್ತಿದ್ದಂತೆ ವಿವಿಧ ಸಂಘ ಸಂಸ್ಥೆಯವರು ಮಾಲಾರ್ಪಣೆ ಮಾಡಿದರು.

20260924 1532526079643407891875137 ರಿಪ್ಪನ್ ಪೇಟೆಯಲ್ಲಿ ಹಿಂದೂ ಮಹಾಸಭಾ ಗಣಪತಿ ಅದ್ದೂರಿ ರಾಜಬೀದಿ ಉತ್ಸವ |ಜಾನಪದ ಕಲಾತಂಡಗಳ ಮೆರಗು
file 000000003f5c8208a0b120fec3430d9d93738350430803188 ರಿಪ್ಪನ್ ಪೇಟೆಯಲ್ಲಿ ಹಿಂದೂ ಮಹಾಸಭಾ ಗಣಪತಿ ಅದ್ದೂರಿ ರಾಜಬೀದಿ ಉತ್ಸವ |ಜಾನಪದ ಕಲಾತಂಡಗಳ ಮೆರಗು

Leave a Reply

Your email address will not be published. Required fields are marked *

error: Content is protected !!