ರಿಪ್ಪನ್‌ಪೇಟೆಯಲ್ಲಿ 59ನೇ ವರ್ಷದ ಗಣೇಶೋತ್ಸವ: ಸೆಪ್ಟೆಂಬರ್ 14 ರಿಂದ 11 ದಿನಗಳ ಕಾಲ ಸಾಂಸ್ಕೃತಿಕ ಕಲರವ, ಅದ್ದೂರಿ ಸಿದ್ಧತೆ|ಏನೆಲ್ಲ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ?

Addaheading 20260912 212658 0000 ರಿಪ್ಪನ್‌ಪೇಟೆಯಲ್ಲಿ 59ನೇ ವರ್ಷದ ಗಣೇಶೋತ್ಸವ: ಸೆಪ್ಟೆಂಬರ್ 14 ರಿಂದ 11 ದಿನಗಳ ಕಾಲ ಸಾಂಸ್ಕೃತಿಕ ಕಲರವ, ಅದ್ದೂರಿ ಸಿದ್ಧತೆ|ಏನೆಲ್ಲ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ?
Spread the love

ರಿಪ್ಪನ್‌ಪೇಟೆ: ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ ವತಿಯಿಂದ(Hindu Rashtra Sena Samiti) ಆಯೋಜಿಸಲಾಗುವ 59ನೇ ವರ್ಷದ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳಿಗೆ ಭರದ ಸಿದ್ಧತೆಗಳು ನಡೆಯುತ್ತಿವೆ ಎಂದು ಸಮಿತಿಯ ಅಧ್ಯಕ್ಷ ಸುಧೀಂದ್ರ ಪೂಜಾರಿ ಹಾಗೂ ಪ್ರಧಾನ ಕಾರ್ಯದರ್ಶಿ ನವೀನ್ ಎಂ. ತಿಳಿಸಿದ್ದಾರೆ.

ಸೆಪ್ಟೆಂಬರ್ 14 ರಿಂದ ಸೆಪ್ಟೆಂಬರ್ 24 ರವರೆಗೆ ಒಟ್ಟು 11 ದಿನಗಳ ಕಾಲ ಈ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ.

ಸೆಪ್ಟೆಂಬರ್ 14 ರ ಸೋಮವಾರ ಬೆಳಗ್ಗೆ ಶಿವಮೊಗ್ಗ ರಸ್ತೆಯ ವರಸಿದ್ಧಿವಿನಾಯಕ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿರುವ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಶ್ರೀ ಸ್ವಾಮಿ ಸಿದ್ಧಿ ವಿನಾಯಕನ ಪ್ರತಿಷ್ಠಾಪನಾ ಪೂಜೆ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನೆರವೇರಲಿದೆ.


ಪ್ರತಿದಿನ ಸಂಜೆ ಸಾಂಸ್ಕೃತಿಕ ವೈಭವ:
ಉತ್ಸವದ ಪ್ರಯುಕ್ತ ಪ್ರತಿದಿನ ರಾತ್ರಿ 8:30ಕ್ಕೆ ವೈವಿಧ್ಯಮಯ(Rippanpete cultural programs) ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು  ಆಯೋಜಿಸಲಾಗಿದೆ:
* ಸೆಪ್ಟೆಂಬರ್ 15 (ಮಂಗಳವಾರ): ರಿಪ್ಪನ್‌ಪೇಟೆ ಶಾರದಾ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ.
* ಸೆಪ್ಟೆಂಬರ್ 16 (ಬುಧವಾರ): ಅಲಸೆ ಚಂಡಿಕೇಶ್ವರಿ ಯಕ್ಷಗಾನ ಮೇಳದವರಿಂದ ‘ಶೂರ್ಪನಖಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ.
* ಸೆಪ್ಟೆಂಬರ್ 17 (ಗುರುವಾರ): ಗವಟೂರು ಸರ್ಕಾರಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ರಸಮಂಜರಿ.
* ಸೆಪ್ಟೆಂಬರ್ 18 (ಶುಕ್ರವಾರ): ತೀರ್ಥಕುಮಾರ್ ಶಿಕ್ಷಕರ ಸಾರಥ್ಯದಲ್ಲಿ ಹಂಸವೇಣಿ ಕಲಾ ತಂಡದಿಂದ ರಸಮಂಜರಿ.
* ಸೆಪ್ಟೆಂಬರ್ 19 (ಶನಿವಾರ): ರಿಪ್ಪನ್‌ಪೇಟೆ ಶಾರದಾಂಬ ಸಾಂಸ್ಕೃತಿಕ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಭರತನಾಟ್ಯ, ಕುಂದಾಪುರದ ಕು. ಕವಿತಾ ಆಚಾರ್ಯ ಮುದೂರು ಅವರಿಂದ ದಿಕ್ಸೂಚಿ ಭಾಷಣ.
* ಸೆಪ್ಟೆಂಬರ್ 20 (ಭಾನುವಾರ): ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ‘ಸಂಗೀತ ಗಾನ ಸಂಭ್ರಮ’.
* ಸೆಪ್ಟೆಂಬರ್ 21 (ಸೋಮವಾರ): ಉಪ್ಪಾಡಿಯ ತ್ರಿನೇತ್ರ ಕಲಾ ತಂಡದವರಿಂದ ‘ತಿರುಪತಿ ಎಕ್ಸ್‌ಪ್ರೆಸ್’ ಹಾಸ್ಯ ನಾಟಕ ಪ್ರದರ್ಶನ.
* ಸೆಪ್ಟೆಂಬರ್ 22 (ಮಂಗಳವಾರ): ಸುಧಾ ಗೌಡ ಮತ್ತು ತಂಡದವರಿಂದ ಸಂಗೀತ ರಸಮಂಜರಿ.
* ಸೆಪ್ಟೆಂಬರ್ 23 (ಬುಧವಾರ): ಮಂಗಳೂರಿನ ಅರೆಹೊಳೆ ಪ್ರತಿಷ್ಠಾನ ನಂದಗೋಕುಲ ಕಲಾವಿದರಿಂದ ‘ನೃತ್ಯ ವೈಭವ’.

ಸೆಪ್ಟೆಂಬರ್ 24 ರ ಗುರುವಾರ ಮಧ್ಯಾಹ್ನ 12:30ಕ್ಕೆ ಶ್ರೀ ಗಣೇಶನ ವಿಸರ್ಜನಾ ಪೂಜೆ ನೆರವೇರಲಿದ್ದು, ನಂತರ(Rippanpet Ganeshotsava) ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀ ಸ್ವಾಮಿಯ ಭವ್ಯ ರಾಜಬೀದಿ ಉತ್ಸವ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದರ ಜೊತೆಗೆ ಗಣಪತಿಯ ಕೃಪೆಗೆ ಪಾತ್ರರಾಗಬೇಕಾಗಿ ಸಮಿತಿಯ ಪದಾಧಿಕಾರಿಗಳು ಕೋರಿದ್ದಾರೆ.

file 000000003f5c8208a0b120fec3430d9d3560263767834548656 ರಿಪ್ಪನ್‌ಪೇಟೆಯಲ್ಲಿ 59ನೇ ವರ್ಷದ ಗಣೇಶೋತ್ಸವ: ಸೆಪ್ಟೆಂಬರ್ 14 ರಿಂದ 11 ದಿನಗಳ ಕಾಲ ಸಾಂಸ್ಕೃತಿಕ ಕಲರವ, ಅದ್ದೂರಿ ಸಿದ್ಧತೆ|ಏನೆಲ್ಲ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ?

Leave a Reply

Your email address will not be published. Required fields are marked *

error: Content is protected !!