ಶಿಕಾರಿಪುರದಲ್ಲಿ ಚೈನ್ ಸ್ನಾಚಿಂಗ್ ಪ್ರಕರಣ ಭೇದಿಸಿದ ಪೊಲೀಸರು!

Screenshot 20260609 195110 Canva ಶಿಕಾರಿಪುರದಲ್ಲಿ ಚೈನ್ ಸ್ನಾಚಿಂಗ್ ಪ್ರಕರಣ ಭೇದಿಸಿದ ಪೊಲೀಸರು!
Spread the love
img 20260110 wa0000249865035083717104 ಶಿಕಾರಿಪುರದಲ್ಲಿ ಚೈನ್ ಸ್ನಾಚಿಂಗ್ ಪ್ರಕರಣ ಭೇದಿಸಿದ ಪೊಲೀಸರು!

ಶಿವಮೊಗ್ಗ: ಶಿಕಾರಿಪುರ ತಾಲೂಕು ತಾಳಗುಂದ ಗ್ರಾಮದಲ್ಲಿ ದಂಪತಿ ಬೈಕಿನಲ್ಲಿ ಹೋಗುವಾಗ ಮಾಂಗಲ್ಯ ಸರ ದೋಚಿ ಪರಾರಿಯಾಗಿದ್ದ ಇಬ್ಬರನ್ನು ಬಂಧಿಸಲಾಗಿದೆ.

ಧಾರವಾಡ ತಾಲೂಕು ಗರಗ ಗ್ರಾಮದ ಮಹೇಶ್ ಸಂಗೊಳ್ಳಿ (32), ಧಾರವಾಡ ಪಟ್ಟಣದ ಕೆಲಗೇರಿಯ ಚಿದಾನಂದ ಬಿ.ಬೇವಿನಕೊಪ್ಪ (22) ಬಂಧಿತರು. ಆರೋಪಿತರಿಂದ ಅಂದಾಜು 2 ಲಕ್ಷ ರೂ. ಮೌಲ್ಯದ 15 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರ ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ಸೇರಿ ಒಟ್ಟು 4 ಲಕ್ಷ ರೂ. ಮೌಲ್ಯದ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.

ಆನಂದಪುರ 20260608 153202 00006846384090898505295 ಶಿಕಾರಿಪುರದಲ್ಲಿ ಚೈನ್ ಸ್ನಾಚಿಂಗ್ ಪ್ರಕರಣ ಭೇದಿಸಿದ ಪೊಲೀಸರು!



ಏಪ್ರಿಲ್ 30ರಂದು ದಂಪತಿ ಮಕ್ಕಳ ಸಮೇತ ಬೈಕ್‌ನಲ್ಲಿ ತೊಗರ್ಸಿ ಗ್ರಾಮ ದಾಟಿ ಹೋಗುವಾಗ ಬೈಕ್‌ನಲ್ಲಿ ಬಂದ ಇಬ್ಬರು ಮಾಂಗಲ್ಯ ಸರ ದೋಚಿ ಪರಾರಿಯಾಗಿದ್ದರು. ದೂರಿನ ಆಧಾರದ ಮೇಲೆ ಶಿರಾಳಕೊಪ್ಪ ಠಾಣೆಯ ಪಿಎಸ್‌ಐ ಪ್ರಶಾಂತ್ ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ಸಂತೋಷ್ ಕುಮಾರ್, ಸಲ್ಮಾನ್ ಖಾನ್ ಹಾಜಿ, ಜಿ.ರಾಕೇಶ್, ಆದರ್ಶ ಅವರ ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದೆ.

img 20260604 wa00397349534917894916570 ಶಿಕಾರಿಪುರದಲ್ಲಿ ಚೈನ್ ಸ್ನಾಚಿಂಗ್ ಪ್ರಕರಣ ಭೇದಿಸಿದ ಪೊಲೀಸರು!

Leave a Reply

Your email address will not be published. Required fields are marked *