ರಿಪ್ಪನ್ ಪೇಟೆ: ಪಟ್ಟಣದ ಆರಾಧ್ಯ ದೇವರಾದ ಶ್ರೀ ಸಿದ್ದಿ ವಿನಾಯಕ ಮತ್ತು ಅನ್ನಪೂರ್ಣೇಶ್ವರಿ ದೇವರ ಮಹಾರಥೋತ್ಸವದ ಮೊದಲ ದಿನವು ಭಕ್ತಿಭಾವದಿಂದ ಆರಂಭವಾಗಿ ವೈಭವದಿಂದ ಸಂಪನ್ನಗೊಂಡಿತು.
ಮೊದಲ ದಿನ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಧ್ವಜಾರೋಹಣ ಹಾಗೂ ಬಲಿ ಮಹಾಸಂಕಲ್ಪ ಮೊದಲಾದ ಧಾರ್ಮಿಕ ವಿಧಿವಿಧಾನಗಳಿಂದ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಪೂಜಾರಿಗಳ ಮಾರ್ಗದರ್ಶನದಲ್ಲಿ ಸಂಪ್ರದಾಯಬದ್ಧವಾಗಿ ನಡೆದ ಈ ಕಾರ್ಯಕ್ರಮಗಳಲ್ಲಿ ಭಕ್ತರು ಭಕ್ತಿಪೂರ್ವಕವಾಗಿ ಪಾಲ್ಗೊಂಡರು.

ದಿನಪೂರ್ತಿ ನಡೆದ ವಿವಿಧ ಪೂಜೆಗಳ ನಂತರ ವಿಶೇಷ ರಂಗಪೂಜೆಯೊಂದಿಗೆ ಮೊದಲ ದಿನದ ಕಾರ್ಯಕ್ರಮಗಳು ಮುಕ್ತಾಯಗೊಂಡವು. ಈ ಸಂದರ್ಭದಲ್ಲಿ ನೂರಾರು ಭಕ್ತರು ಭಾಗವಹಿಸಿ ದೇವರ ಆಶೀರ್ವಾದ ಪಡೆದರು.

ಮಹೋತ್ಸವದ ಶನಿವಾರ ” ಮಹಾ ರಥೋತ್ಸವ ” ಮಧ್ಯಾಹ್ನ 12:33ಕ್ಕೆ ಸಲುವಾಗಿ ಶುಭ ಮುಹೂರ್ತದಲ್ಲಿ ಬೇಳೂರು ಗೋಪಾಲಕೃಷ್ಣ ಅವರಿಂದ ಚಾಲನೆ. (ದೇವಸ್ಥಾನದಿಂದ ಉತ್ತರ ದಿಕ್ಕಿಗೆ ಗಮಿಸಿ ಅಂತರ ವಿನಾಯಕ ವೃತ್ತದ ಕಡೆಗೆ ರಥೋತ್ಸವ ನಡೆಯಲಿದೆ )
ಸಂಜೆ 5:30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು. ಮೂಲೆಗದ್ದೆ ಮಠದ ಮ.ನಿ.ಪ್ರ ಅಭಿನವ ಚನ್ನಬಸವ ಮಹಾಸ್ವಾಮಿಗಳು ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್ ಈ ಈಶ್ವರ್ ಶೆಟ್ಟಿ ಇವರು ವಹಿಸಲಿದ್ದಾರೆ. ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.
ರಾತ್ರಿ 8-00ಕ್ಕೆ ರಥಾವರೋಹಣ, ಮಹಾಮಂಗಳಾರತಿ,ಭೂತ ಬಲಿ,ಶಯೋತ್ಸವ ಇರಲಿದೆ.
















Leave a Reply