25 ಲಕ್ಷ ಸಾಲದ ಆಮಿಷ: ಹಿರಿಯ ಪೊಲೀಸ್ ಅಧಿಕಾರಿಗೇ ₹3.04 ಲಕ್ಷ ವಂಚನೆ!

Screenshot 20260624 182556 Canva 25 ಲಕ್ಷ ಸಾಲದ ಆಮಿಷ: ಹಿರಿಯ ಪೊಲೀಸ್ ಅಧಿಕಾರಿಗೇ ₹3.04 ಲಕ್ಷ ವಂಚನೆ!
Spread the love

ಮುದ್ರಾ ಲೋನ್ ಯೋಜನೆ ಮ್ಯಾನೇಜರ್ ಎಂದು ನಂಬಿಸಿ ಹಣ ವರ್ಗಾವಣೆ ಮಾಡಿಸಿಕೊಂಡ ಸೈಬರ್ ವಂಚಕರು!

img 20260110 wa00005680632520668452009 25 ಲಕ್ಷ ಸಾಲದ ಆಮಿಷ: ಹಿರಿಯ ಪೊಲೀಸ್ ಅಧಿಕಾರಿಗೇ ₹3.04 ಲಕ್ಷ ವಂಚನೆ!

ಶಿವಮೊಗ್ಗ :ಶಿವಮೊಗ್ಗದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ₹25 ಲಕ್ಷ ಸಾಲ ಹಾಗೂ ₹5 ಲಕ್ಷ ಸಬ್ಸಿಡಿ ಕೊಡಿಸುವುದಾಗಿ ನಂಬಿಸಿ ₹3.04 ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಅಪರಿಚಿತ ವ್ಯಕ್ತಿಯೊಬ್ಬ ದೂರುದಾರರ ಮೊಬೈಲ್‌ಗೆ ಕರೆ ಮಾಡಿ ತಾನು ಕೇಂದ್ರ ಸರ್ಕಾರದ ಮುದ್ರಾ ಲೋನ್ ಯೋಜನೆಯ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ಮುದ್ರಾ ಯೋಜನೆಯಡಿ ₹25 ಲಕ್ಷ ಸಾಲ ಮತ್ತು ₹5 ಲಕ್ಷ ಸಬ್ಸಿಡಿ ದೊರೆಯುವಂತೆ ಮಾಡಿಕೊಡುವುದಾಗಿ ನಂಬಿಸಿದ್ದಾನೆ.

ಲೋನ್ ಪ್ರಕ್ರಿಯೆಗಾಗಿ ವಿವಿಧ ದಾಖಲೆಗಳನ್ನು ಪಡೆದುಕೊಂಡ ವಂಚಕರು, ಶುಲ್ಕ ಹಾಗೂ ಇತರೆ ಪ್ರಕ್ರಿಯೆಗಳ ಹೆಸರಿನಲ್ಲಿ ಹಂತ ಹಂತವಾಗಿ ಒಟ್ಟು ₹3.04 ಲಕ್ಷವನ್ನು ಆನ್‌ಲೈನ್ ಮೂಲಕ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಹಣ ವರ್ಗಾವಣೆಗೊಂಡ ಬಳಿಕ ಯಾವುದೇ ಸಾಲ ಮಂಜೂರು ಮಾಡದೆ ಸಂಪರ್ಕ ಕಡಿತಗೊಳಿಸಿರುವುದು ತಿಳಿದುಬಂದಿದೆ.

ಈ ಕುರಿತು ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

img 20260604 wa0039393484177475318335 25 ಲಕ್ಷ ಸಾಲದ ಆಮಿಷ: ಹಿರಿಯ ಪೊಲೀಸ್ ಅಧಿಕಾರಿಗೇ ₹3.04 ಲಕ್ಷ ವಂಚನೆ!

Leave a Reply

Your email address will not be published. Required fields are marked *