ಮಳೆಗಾಲ ಪ್ರಾರಂಭ: ಅಧಿಕಾರಿಗಳಿಗೆ ಕೇಂದ್ರ ಸ್ಥಾನದಲ್ಲಿರಲು ತಹಶೀಲ್ದಾರ್ ಭರತ್‌ರಾಜ್ ಸೂಚನೆ!

Screenshot 20260609 203028 Canva scaled ಮಳೆಗಾಲ ಪ್ರಾರಂಭ: ಅಧಿಕಾರಿಗಳಿಗೆ ಕೇಂದ್ರ ಸ್ಥಾನದಲ್ಲಿರಲು ತಹಶೀಲ್ದಾರ್ ಭರತ್‌ರಾಜ್ ಸೂಚನೆ!
Spread the love
img 20260110 wa0000635673023767161810 ಮಳೆಗಾಲ ಪ್ರಾರಂಭ: ಅಧಿಕಾರಿಗಳಿಗೆ ಕೇಂದ್ರ ಸ್ಥಾನದಲ್ಲಿರಲು ತಹಶೀಲ್ದಾರ್ ಭರತ್‌ರಾಜ್ ಸೂಚನೆ!

ಹೊಸನಗರ: ಹೊಸನಗರ ತಾಲ್ಲೂಕಿನಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು, ಮುಂದಿನ ದಿನಗಳಲ್ಲಿ ಭಾರಿ ಮಳೆಯಿಂದ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿ ಪ್ರವಾಹದ ಭೀತಿ ಎದುರಾಗುವ ಸಾಧ್ಯತೆ ಇದೆ ಎಂದು ತಾಲ್ಲೂಕು ಕಂದಾಯ ಅಧಿಕಾರಿ ಭರತ್‌ರಾಜ್ ತಿಳಿಸಿದ್ದಾರೆ.

ಇದಲ್ಲದೆ, ಗ್ರಾಮಾಂತರ ಪ್ರದೇಶಗಳಿಂದ ಹಳ್ಳ-ಕೊಳ್ಳಗಳನ್ನು ದಾಟಿ ಶಾಲೆ ಮತ್ತು ಕಾಲೇಜುಗಳಿಗೆ ವಿದ್ಯಾರ್ಥಿಗಳು ಸಂಚರಿಸುವ ಹಿನ್ನೆಲೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯತಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಆನಂದಪುರ 20260608 153202 00008158211122890001144 ಮಳೆಗಾಲ ಪ್ರಾರಂಭ: ಅಧಿಕಾರಿಗಳಿಗೆ ಕೇಂದ್ರ ಸ್ಥಾನದಲ್ಲಿರಲು ತಹಶೀಲ್ದಾರ್ ಭರತ್‌ರಾಜ್ ಸೂಚನೆ!

ಸಾರ್ವಜನಿಕರು ಯಾವುದೇ ರೀತಿಯ ಅಪಾಯ ಅಥವಾ ಅನಾಹುತ ಸಂಭವಿಸಿದಲ್ಲಿ ತಾಲ್ಲೂಕು ಆಡಳಿತದ ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ 9741621135 ಗೆ ಸಂಪರ್ಕಿಸಬಹುದಾಗಿದೆ. ಜೊತೆಗೆ ಸಂಬಂಧಪಟ್ಟ ಪಿ.ಡಿ.ಓ ಹಾಗೂ ಗ್ರಾಮ ಆಡಳಿತಾಧಿಕಾರಿಗಳನ್ನು ಕೂಡ ತಕ್ಷಣ ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.

ಮುಂದಿನ ಮೂರು ತಿಂಗಳುಗಳ ಕಾಲ ಎಲ್ಲಾ ಅಧಿಕಾರಿಗಳು ಸ್ಥಳೀಯವಾಗಿ ವಾಸವಿದ್ದು, ತಮ್ಮ ವ್ಯಾಪ್ತಿಯಲ್ಲಿ ಸಂಭವಿಸಬಹುದಾದ ಅನಾಹುತಗಳ ಬಗ್ಗೆ ತಕ್ಷಣ ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಎಂದು ಭರತ್‌ರಾಜ್ ತಿಳಿಸಿದ್ದಾರೆ.

img 20260604 wa00391062937245559834880 ಮಳೆಗಾಲ ಪ್ರಾರಂಭ: ಅಧಿಕಾರಿಗಳಿಗೆ ಕೇಂದ್ರ ಸ್ಥಾನದಲ್ಲಿರಲು ತಹಶೀಲ್ದಾರ್ ಭರತ್‌ರಾಜ್ ಸೂಚನೆ!

Leave a Reply

Your email address will not be published. Required fields are marked *