ಶಿವಮೊಗ್ಗ: ಇಂದು(ಏ.16) ಸಂಜೆ ಸುರಿದ ಆಲಿಕಲ್ಲು ಸಹಿತ ಭಾರಿ ಮಳೆಯಿಂದ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ಬೃಹತ್ ಗಾತ್ರದ ಆಲಿಕಲ್ಲುಗಳು ಸುರಿದ ಪರಿಣಾಮ ವಾಹನಗಳು ಮುಂದುವರಿಯಲು ಕಷ್ಟವಾಗಿದ್ದು, ಚಾಲಕರು ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಲು ಅನಿವಾರ್ಯವಾಯಿತು. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ದೀರ್ಘ ಸಾಲು ಕಾಣಿಸಿಕೊಂಡಿತು.
ಇದಲ್ಲದೆ, ಜೋರಾದ ಗಾಳಿ ಮಳೆಯ ಪರಿಣಾಮ NH-69 ತ್ಯಾವರೆಕೊಪ್ಪದ ಬಳಿ ರಸ್ತೆ ಮಧ್ಯೆ ಮರ ಬಿದ್ದ ಕಾರಣ ಹೆದ್ದಾರಿ ಕೆಲಕಾಲ ಸಂಪೂರ್ಣವಾಗಿ ಬ್ಲಾಕ್ ಆಯಿತು ಎಂಬುದು ತಿಳಿದು ಬಂದಿದೆ. ಆ ವೇಳೆ ಪೊಲೀಸ್ ಇಲಾಖೆಯ ಯಾವುದೇ ಸಿಬ್ಬಂದಿ ಸ್ಥಳದಲ್ಲಿ ಕಾಣಿಸದ ಕಾರಣ ಟ್ರಾಫಿಕ್ ನಿಯಂತ್ರಣ ಮಾಡಲು ವಾಹನ ಸವಾರರು ಹರಸಾಹಸ ಪಡಬೇಕಾಯಿತು. ಈ ಬಗ್ಗೆ ಸಂಚರಿಸುತ್ತಿದ್ದವರು ಆಕ್ರೋಶವನ್ನೂ ಹೊರಕಿದರು.















Leave a Reply