ಕೋಡೂರು|ಹೆಬ್ಬಂಡೆಗಳ ನಡುವೆ ನೆಲೆಸಿದ ಹಳೆ ಅಮ್ಮನಘಟ್ಟದ ಜೇನುಕಲ್ಲಮ್ಮ : ದಟ್ಟ ಕಾನನದ ದೈವಿಕ ತಾಣ,ವರ್ಷಕೊಮ್ಮೆ ವಿಶೇಷ ಪೂಜೆ

Addaheading 20260926 193537 0000 ಕೋಡೂರು|ಹೆಬ್ಬಂಡೆಗಳ ನಡುವೆ ನೆಲೆಸಿದ ಹಳೆ ಅಮ್ಮನಘಟ್ಟದ ಜೇನುಕಲ್ಲಮ್ಮ : ದಟ್ಟ ಕಾನನದ ದೈವಿಕ ತಾಣ,ವರ್ಷಕೊಮ್ಮೆ ವಿಶೇಷ ಪೂಜೆ
Spread the love

ರಿಪ್ಪನ್‌ಪೇಟೆ: ಕೋಡೂರು ಸಮೀಪದ ಅಮ್ಮನಘಟ್ಟ ಕ್ಷೇತ್ರದ ಎದುರಿನ ಬೆಟ್ಟದ ನಡುವೆ ನೆಲೆಸಿರುವ ಹಳೆ ಅಮ್ಮನಘಟ್ಟ ಇಂದಿಗೂ ಭಕ್ತರಲ್ಲಿ ಅಪಾರ ಭಕ್ತಿ ಮತ್ತು ಕುತೂಹಲ ಮೂಡಿಸುವ ಪುರಾತನ ದೈವಿಕ ತಾಣವಾಗಿದೆ. ದಟ್ಟ ಕಾನನ, ಬೃಹತ್ ಕಲ್ಲುಬಂಡೆಗಳು ಮತ್ತು ಜೇನುಗೂಡುಗಳಿಂದ ಆವರಿಸಿರುವ ಈ ಸ್ಥಳವನ್ನು ಶ್ರೀ ಜೇನುಕಲ್ಲಮ್ಮ ದೇವಿಯ ಮೂಲ ನೆಲೆ ಎಂದು ಸ್ಥಳೀಯರು ನಂಬುತ್ತಾರೆ.

ಸ್ಥಳ ಪುರಾಣ: ಅಮ್ಮನ ಘಟ್ಟದ ತುಂಬೆಲ್ಲ ಬೃಹದಾಕಾರದ ಕಲ್ಲುಬಂಡೆಗಳೆ ಕಾಣ ಸಿಗುತ್ತವೆ. ಬಂಡೆಗಳು ಜೇನುಗಳ ಆವಾಸ ಸ್ಥಾನವಾಗಿವೆ. ಜೇನುಗೂಡುಗಳ ಮತ್ತು ಕಲ್ಲು ಬಂಡೆಗಳ ಪೊಟರೆಯಲ್ಲಿ ನೆಲೆ ನಿಂತ ಕಾರಣ ಶ್ರೀ ದೇವಿಗೆ ಜೇನುಕಲ್ಲಮ್ಮ ಎಂದು ಹೆಸರು ಬಂದಿದೆ.
  ಈ ಹಿಂದೆ ಜಮದಗ್ನಿ ಮಹರ್ಷಿಯು ತನ್ನ ಮಡದಿ ರೇಣುಕಾದೇವಿಯಲ್ಲಿ ವಿರಸಗೊಂಡು ತನ್ನ ಮಗ ಪರಶುರಾಮನನ್ನು ಕರೆಸಿ ತಾಯಿಯ ಶಿರಛೇಧನಕ್ಕೆ ಆಜ್ಞಾಪಿಸುತ್ತಾರೆ. ಅಂತೆಯೇ ಮಗ ಪರಶುರಾಮ ಶಿರವನ್ನು ಕತ್ತರಿಸಿದಾಗ ದೇವಿಯ ಅಗೋಚರ ಶಕ್ತಿಯೊಂದು ಇಲ್ಲಿ ಘಟ್ಟದ ಕಲ್ಲು ಬಂಡೆಗಳ ಮಧ್ಯೆ ನೆಲೆಸಿತು. ಅಲ್ಲಿಂದ ಭಕ್ತರು ಈಕೆಯನ್ನು ಜೇನುಕಲ್ಲಮ್ಮ ಎಂದೆ ಪೂಜೆಸಿದರು ಎನ್ನುತ್ತದೆ ಸ್ಥಳಪುರಾಣ.

ಮೂಲ ನೆಲೆಯೇ ಹಳೆ ಅಮ್ಮನಘಟ್ಟ
  ಇಂದಿನ ಜೇನುಕಲ್ಲಮ್ಮ ದೇವಾಲಯ ನಿರ್ಮಾಣವಾಗುವ ಮೊದಲು ದೇವಿಯ ಆರಾಧನೆ ಹಳೆ ಅಮ್ಮನಘಟ್ಟದಲ್ಲೇ ನಡೆಯುತ್ತಿತ್ತೆಂದು ಸ್ಥಳಪುರಾಣ ಹೇಳುತ್ತದೆ. ಹೆಬ್ಬಂಡೆಗಳ ಪೊಟರೆಯಲ್ಲಿರುವ ನೈಸರ್ಗಿಕ ಶಿಲಾ ಸನ್ನಿಧಾನವೇ ಅಮ್ಮನ ಮೂಲಮೂರ್ತಿಯ ಸ್ಥಾನವಾಗಿತ್ತು ಎನ್ನುವುದು ಪೀಳಿಗೆಯಿಂದ ಬಂದಿರುವ ನಂಬಿಕೆ.

image editor output image1253514293 17904317699857468584343061282521 ಕೋಡೂರು|ಹೆಬ್ಬಂಡೆಗಳ ನಡುವೆ ನೆಲೆಸಿದ ಹಳೆ ಅಮ್ಮನಘಟ್ಟದ ಜೇನುಕಲ್ಲಮ್ಮ : ದಟ್ಟ ಕಾನನದ ದೈವಿಕ ತಾಣ,ವರ್ಷಕೊಮ್ಮೆ ವಿಶೇಷ ಪೂಜೆ
ಹಳೆ ಅಮ್ಮನ ಘಟ್ಟದ  ಬೆಟ್ಟದ ಮೇಲೆ ಇರುವ ಐತಿಹಾಸಿಕ ರುಬ್ಬುವ ಕಲ್ಲು ಗುಂಡಿ

ವರ್ಷಕ್ಕೊಮ್ಮೆ  ಪೂಜೆ ಸಲ್ಲಿಕೆ : ಕಳೆದು 25 ವರ್ಷಗಳ ಹಿಂದೆ ಅರೂಢ ಪ್ರಶ್ನೆಯಲ್ಲಿ ಮೂಲ ಸ್ಥಾನದ ಅಮ್ಮನವರಿಗೆ ಪೂಜೆ ಸಲ್ಲಿಸಬೇಕೆಂದು ಬಂದಾಗ ಅಂದಿನಿಂದ  ಜಾತ್ರೆಯ ಸಮಯದಲ್ಲಿ  ಮೂಲ ಸನ್ನಿದಿಯಲ್ಲಿ ದೇವಿಗೆ ವಿಶೇಷ ಪೂಜೆಯನ್ನು ಗ್ರಾಮಸ್ಥರು ಸಲ್ಲಿಸುತ್ತಾರೆ.

20260925 1428171321742885512774307 ಕೋಡೂರು|ಹೆಬ್ಬಂಡೆಗಳ ನಡುವೆ ನೆಲೆಸಿದ ಹಳೆ ಅಮ್ಮನಘಟ್ಟದ ಜೇನುಕಲ್ಲಮ್ಮ : ದಟ್ಟ ಕಾನನದ ದೈವಿಕ ತಾಣ,ವರ್ಷಕೊಮ್ಮೆ ವಿಶೇಷ ಪೂಜೆ
ಗ್ರಾಮಸ್ಥರಿಂದ ಧಾರ್ಮಿಕ ವಿಧಿ ವಿಧಾನಗಳಿಂದ  ವಿಶೇಷ ಪೂಜೆ ಸಲ್ಲಿಸಿದರು.

ದುರ್ಗಮ ಕಾಡಿನ ಮಧ್ಯೆ ದೈವಿಕ ಅನುಭವ
ಹಳೆ ಅಮ್ಮನಘಟ್ಟ ತಲುಪಲು ಕಾಡಿನ ದಾರಿಯಲ್ಲಿ ಕಾಲ್ನಡಿಗೆಯೇ ಪ್ರಮುಖ ಮಾರ್ಗ. ಎತ್ತರದ ಕಲ್ಲುಬಂಡೆಗಳು, ಹಸಿರು ವನಸಿರಿ ಹಾಗೂ ಜೇನುಗಳ ಝೇಂಕಾರ ಭಕ್ತರಿಗೆ ವಿಶಿಷ್ಟ ಆಧ್ಯಾತ್ಮಿಕ ಅನುಭವ ನೀಡುತ್ತವೆ.
ಏಕೆ ಎದುರಿನ ಘಟ್ಟಕ್ಕೆ ಬಂದಳು ಅಮ್ಮ?
ಸ್ಥಳೀಯ ವಾಡಿಕೆಯ ಪ್ರಕಾರ, ಜಾತ್ರೆಯ ಸಂದರ್ಭದಲ್ಲಿ ಮೈಲಿಗೆ ಸಂಭವಿಸಿ ಅಮ್ಮ ಕೋಪಗೊಂಡು ಹಳೆಯ ಘಟ್ಟದಿಂದ ಎದುರಿನ ಬೆಟ್ಟಕ್ಕೆ ಬಂದು ನೆಲೆಸಿದಳು ಎಂಬ ಪ್ರತೀತಿ ಇದೆ. ಆ ನಂತರವೇ ಈಗಿನ ಅಮ್ಮನಘಟ್ಟದಲ್ಲಿ ಪೂಜೆ ಪುನಸ್ಕಾರಗಳು ಆರಂಭಗೊಂಡವು ಎಂದು ಹಿರಿಯರು ಹೇಳುತ್ತಾರೆ.

ಪಿತೃಪಕ್ಷದಲ್ಲಿ ವಿಶೇಷ ಮಹತ್ವ
ಪಿತೃಮಾಸದ ಹುಣ್ಣಿಮೆಯಿಂದ ಅಮಾವಾಸ್ಯೆಯವರೆಗೆ ಬರುವ ಮಂಗಳವಾರ ಹಾಗೂ ಶುಕ್ರವಾರಗಳಲ್ಲಿ ಸಾವಿರಾರು ಭಕ್ತರು ಅಮ್ಮನಘಟ್ಟಕ್ಕೆ ಆಗಮಿಸಿ ಹರಕೆ ಸಲ್ಲಿಸುತ್ತಾರೆ. ಪ್ರತಿವರ್ಷ ಪಿತೃಪಕ್ಷದ ಹುಣ್ಣಿಮೆಯಿಂದ ಅಮಾವಾಸ್ಯೆವರೆಗೆ ಜಾತ್ರೆ ಇರಲಿದೆ.

ಜೇನುಗೂಡುಗಳ ಆವಾಸವಾದ ಹೆಬ್ಬಂಡೆಗಳಲ್ಲೇ ದೇವಿ ನೆಲೆಸಿದ ಕಾರಣವೇ “ಜೇನುಕಲ್ಲಮ್ಮ” ಎಂಬ ಹೆಸರು ಬಂದಿತು ಎಂದು ಸ್ಥಳಪುರಾಣ ವಿವರಿಸುತ್ತದೆ.

Leave a Reply

Your email address will not be published. Required fields are marked *

error: Content is protected !!