ರಿಪ್ಪನ್ ಪೇಟೆ|ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಫಲಾನುಭವಿಗಳಿಗೆ ₹3.93 ಲಕ್ಷ ಚೆಕ್ ವಿತರಣೆ

Addaheading 20260811 091909 0000 ರಿಪ್ಪನ್ ಪೇಟೆ|ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಫಲಾನುಭವಿಗಳಿಗೆ ₹3.93 ಲಕ್ಷ ಚೆಕ್ ವಿತರಣೆ
Spread the love

ರಿಪ್ಪನ್‌ಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ವತಿಯಿಂದ ಹೊಸನಗರ ತಾಲೂಕಿನ ಹೆದ್ದಾರಿಪುರ ಮತ್ತು ಹುಂಚ ವಲಯದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರವನ್ನು ಮೂಗುಡ್ತಿಯ ಬಲಮುರಿ ಮಹಾಗಣಪತಿ ಸಭಾಭವನ ಆಯೋಜಿಸಲಾಗಿತ್ತು.
   ಕಾರ್ಯಾಗಾರದಲ್ಲಿ ತಾಲೂಕು ಯೋಜನಾಧಿಕಾರಿ ದಿನೇಶ್ ಅವರು ವಿವಿಧ ಯೋಜನೆಗಳ ಕುರಿತು ಪದಾಧಿಕಾರಿಗಳಿಗೆ ಸಮಗ್ರ ಮಾಹಿತಿ ನೀಡಿದರು.

20260810 1247073145432093021948441 ರಿಪ್ಪನ್ ಪೇಟೆ|ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಫಲಾನುಭವಿಗಳಿಗೆ ₹3.93 ಲಕ್ಷ ಚೆಕ್ ವಿತರಣೆ

  ಸಂಘದ ವಿಮಾ ಯೋಜನೆಯ ಮಹತ್ವವನ್ನು ವಿವರಿಸಿದ ಅವರು, ಪ್ರತಿಯೊಬ್ಬರೂ ಆರೋಗ್ಯ ಭದ್ರತೆ, ಜೀವ ಭದ್ರತೆ ಹಾಗೂ ಸ್ವತ್ತು ಭದ್ರತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸದಸ್ಯರ ಒಳಿತಿಗಾಗಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದರು.
   ಈ ಸಂದರ್ಭದಲ್ಲಿ ಹುಂಚ ವಿಭಾಗದ ಪಾರ್ವತಮ್ಮ ಅವರು ಮರಣ ಹೊಂದಿದ ಹಿನ್ನೆಲೆಯಲ್ಲಿ, ಪ್ರಗತಿ ರಕ್ಷಾ ಯೋಜನೆಯ ಸೌಲಭ್ಯದಿಂದ ಅವರ ಕುಟುಂಬದ ಇಬ್ಬರು ಸದಸ್ಯರ ಸಾಲದ ಮೊತ್ತಕ್ಕೆ ವಿನಿಯೋಗವಾಗುವಂತೆ ₹3,93,000 ಮಂಜೂರಾದ ಚೆಕ್‌ನ್ನು ವಿತರಿಸಲಾಯಿತು.

20260810 1247267505219475718759128 ರಿಪ್ಪನ್ ಪೇಟೆ|ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಫಲಾನುಭವಿಗಳಿಗೆ ₹3.93 ಲಕ್ಷ ಚೆಕ್ ವಿತರಣೆ

   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆದ್ದಾರಿಪುರ ಒಕ್ಕೂಟದ ಅಧ್ಯಕ್ಷ ರಾಮು ಕೆ.ಆರ್. ವಹಿಸಿದ್ದರು. ವಿಮಾ ಸಮನ್ವಯ ಅಧಿಕಾರಿ ಕೃಷ್ಣಮೂರ್ತಿ, ವಲಯ ಮೇಲ್ವಿಚಾರಕರಾದ ಸುಬ್ರಹ್ಮಣ್ಯ, ತಿಮ್ಮಪ್ಪ, ಮತ್ತು ಅಶ್ವಿನಿ ಹರೀಶ್ ಸೇರಿದಂತೆ ಸೇವಾ ಪ್ರತಿನಿಧಿಗಳು, ಸುವಿಧಾ ಸಹಾಯಕರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

file 000000003f5c8208a0b120fec3430d9d7382650545640865343 ರಿಪ್ಪನ್ ಪೇಟೆ|ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಫಲಾನುಭವಿಗಳಿಗೆ ₹3.93 ಲಕ್ಷ ಚೆಕ್ ವಿತರಣೆ

Leave a Reply

Your email address will not be published. Required fields are marked *