ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: 85 ಕುಟುಂಬಗಳಿಗೆ ನೆರವು,ಮಾಸಾಶನ ವಿತರಣೆ

Blue and Red Voter Education Banner 20260402 203436 0000 scaled ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: 85 ಕುಟುಂಬಗಳಿಗೆ ನೆರವು,ಮಾಸಾಶನ ವಿತರಣೆ
Spread the love

ಹೊಸನಗರ: ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಹೆಮ್ಮಾವತಿ ಅಮ್ಮನವರ ಸಹಕಾರದಿಂದ ಬಡವರ ನಿವೃತ್ತಿಕರ ಸೇವೆ ಮಾಡುವ ಭಾಗ್ಯ ನಮಗೆ ಲಭಿಸಿದೆ ಎಂದು ಯೋಜನಾಧಿಕಾರಿ ಪ್ರದೀಪ್ ಕೆ ತಿಳಿಸಿದ್ದಾರೆ.

img 20260402 wa01236436539915877746039 ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: 85 ಕುಟುಂಬಗಳಿಗೆ ನೆರವು,ಮಾಸಾಶನ ವಿತರಣೆ

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿ.ಸಿ. ಟ್ರಸ್ಟ್) ವತಿಯಿಂದ ಸುಮಾರು 85 ನಿವೃತ್ತಿಕರ ಕುಟುಂಬಗಳಿಗೆ ಮಾಸಾಶನ ನೀಡಲಾಗುತ್ತಿದೆ. ಇದರ ಅಂಗವಾಗಿ ಇಂದು ಹೆಮ್ಮಾವತಿ ಅಮ್ಮನವರ ಹುಟ್ಟುಹಬ್ಬದ ಪ್ರಯುಕ್ತ ಈ 85 ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಹಣ್ಣು ಹಂಪಲು ವಿತರಣೆ ಮಾಡಲಾಯಿತು.

“ಬಡವರ ಜೀವನಮಟ್ಟ ಸುಧಾರಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರಂತರವಾಗಿ ಕೆಲಸ ಮಾಡುತ್ತಿದೆ. ಹೆಮ್ಮಾವತಿ ಅಮ್ಮನವರ ಆಶೀರ್ವಾದದಿಂದ ಹೆಚ್ಚು ಕುಟುಂಬಗಳಿಗೆ ಸಹಾಯ ನೀಡುವ ಕಾರ್ಯವನ್ನು ಮುಂದುವರಿಸುತ್ತೇವೆ.”
- ಪ್ರದೀಪ್ ಕೆ,ಯೋಜನಾಧಿಕಾರಿ

ತಾಲೂಕಿನಲ್ಲಿ ಒಟ್ಟು 85 ನಿವೃತ್ತಿಕರ ಕುಟುಂಬಗಳು ಈ ಯೋಜನೆಯಿಂದ ಪ್ರಯೋಜನ ಪಡೆಯುತ್ತಿದ್ದು, ಪ್ರತೀ ತಿಂಗಳು ಅವರಿಗೆ ಮಾಸಾಶನ ನೀಡಲಾಗುತ್ತಿದೆ. ಬಡವರ ಕಲ್ಯಾಣಕ್ಕಾಗಿ ಹಾಗೂ ಅಂಗವಿಕಲರಿಗೆ ಅಗತ್ಯ ಸಾಧನ-ಸಹಾಯಗಳನ್ನು ನೀಡುವ ಕಾರ್ಯವನ್ನು ಸಂಸ್ಥೆ ನಿರಂತರವಾಗಿ ಮುಂದುವರಿಸುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವೆ ಮಾಡುವ ಆಶಯವಿದೆ ಎಂದು ಅವರು ತಿಳಿಸಿದರು.

img 20260110 wa00002770526989950972343 ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: 85 ಕುಟುಂಬಗಳಿಗೆ ನೆರವು,ಮಾಸಾಶನ ವಿತರಣೆ

ಹಣ್ಣು ಹಂಪಲು ವಿತರಣಾ ಕಾರ್ಯಕ್ರಮದಲ್ಲಿ ಮೇಲ್ವಿಚಾರಕರಾದ ಶ್ಯಾಮಲಾ ಹಾಗೂ ಸೇವಾ ಪ್ರತಿನಿಧಿಗಳಾದ ಆಶಾ, ಶಾಂತಕುಮಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

img 20260325 wa00236809403906676772099 ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: 85 ಕುಟುಂಬಗಳಿಗೆ ನೆರವು,ಮಾಸಾಶನ ವಿತರಣೆ

Leave a Reply

Your email address will not be published. Required fields are marked *