ರಿಪ್ಪನ್ ಪೇಟೆ:ಗೋವುಗಳ ನಡುವೆ ಕೃಷ್ಣನ ತುಂಟಾಟ; ಅರಸಾಳು ಬಾಲಗೋಕುಲದಲ್ಲಿ ಸಂಭ್ರಮದ ಕೃಷ್ಣವೇಷ ಪ್ರದರ್ಶನ

Addaheading 20260923 125621 0000 ರಿಪ್ಪನ್ ಪೇಟೆ:ಗೋವುಗಳ ನಡುವೆ ಕೃಷ್ಣನ ತುಂಟಾಟ; ಅರಸಾಳು ಬಾಲಗೋಕುಲದಲ್ಲಿ ಸಂಭ್ರಮದ ಕೃಷ್ಣವೇಷ ಪ್ರದರ್ಶನ
Spread the love

ರಿಪ್ಪನ್‌ಪೇಟೆ: ಅರಸಾಳು ಶ್ರೀರಾಮಮಂದಿರದಲ್ಲಿ ನಡೆದ ಬಾಲಗೋಕುಲದ ಕೃಷ್ಣವೇಷ ಪ್ರದರ್ಶನ ಸಂಭ್ರಮ, ಸಂಸ್ಕಾರ ಮತ್ತು ಸಾಂಸ್ಕೃತಿಕ ವೈಭವದ ಅಪೂರ್ವ ಸಂಗಮವಾಗಿ ಮೂಡಿಬಂದಿತು. ಗೋವುಗಳ ನಡುವೆ ಶ್ರೀಕೃಷ್ಣನ ಬಾಲಲೀಲೆಗಳನ್ನು ಪುಟಾಣಿ ಮಕ್ಕಳು ಮನಮೋಹಕವಾಗಿ ಅಭಿನಯಿಸಿ ಮೆಚ್ಚುಗೆಗೆ ಪಾತ್ರರಾದರು.

img 20260921 wa0020862298470799715322 ರಿಪ್ಪನ್ ಪೇಟೆ:ಗೋವುಗಳ ನಡುವೆ ಕೃಷ್ಣನ ತುಂಟಾಟ; ಅರಸಾಳು ಬಾಲಗೋಕುಲದಲ್ಲಿ ಸಂಭ್ರಮದ ಕೃಷ್ಣವೇಷ ಪ್ರದರ್ಶನ

   ಬಾಲಗೋಕುಲದಲ್ಲಿ ಸಂಸ್ಕಾರ ಶಿಕ್ಷಣದೊಂದಿಗೆ ಆಟ-ಪಾಠ, ನೈತಿಕ ಮೌಲ್ಯಗಳು ಹಾಗೂ ಭಾರತೀಯ ಸಂಸ್ಕೃತಿಯ ಅರಿವು ಮಕ್ಕಳಿಗೆ ನೀಡಲಾಗುತ್ತಿದೆ. ಇದರ ಅಂಗವಾಗಿ ಪುಟಾಣಿಗಳು ಶ್ರೀಕೃಷ್ಣನ ವೇಷಭೂಷಣ ಧರಿಸಿ ಕೃಷ್ಣನ ತುಂಟಾಟದ ನಾಟಕ ಪ್ರದರ್ಶನ ನೀಡಿದರು.ಕಾರ್ಯಕ್ರಮದಲ್ಲಿ ಮಕ್ಕಳು ಭಗವದ್ಗೀತೆ ಶ್ಲೋಕ ಪಠಣ, ಜಾನಪದ ಗೀತೆ ಹಾಗೂ ದೇಶಭಕ್ತಿ ಗೀತೆಗಳನ್ನು ಹಾಡಿ ದೇಶಪ್ರೇಮ ಮತ್ತು ಸಾಂಸ್ಕೃತಿಕ ಮೌಲ್ಯಗಳ ಸಂದೇಶ ಸಾರಿದರು.ಬಾಲ್ಯದಿಂದಲೇ ಶಿಕ್ಷಣದ ಜೊತೆಗೆ ಸಂಸ್ಕಾರ, ಶಿಸ್ತು ಮತ್ತು ದೇಶಭಕ್ತಿಯನ್ನು ಬೆಳೆಸುವ ಬಾಲಗೋಕುಲದಂತಹ ಚಟುವಟಿಕೆಗಳು ಸಮಾಜಕ್ಕೆ ಪ್ರೇರಣೆ.

   ಈ ಸಂದರ್ಭದಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥ ಸೇವಾಭಾವದಿಂದ ಬಾಲಗೋಕುಲ ನಡೆಸುತ್ತಿರುವ ಮಾತಾಜಿ ಗಾಯತ್ರಿ ಹಾಗೂ ಬಾಲಗೋಕುಲದ ಮುದ್ದು ಮಕ್ಕಳು ಉಪಸ್ಥಿತರಿದ್ದರು.


45552938999453401880837 ರಿಪ್ಪನ್ ಪೇಟೆ:ಗೋವುಗಳ ನಡುವೆ ಕೃಷ್ಣನ ತುಂಟಾಟ; ಅರಸಾಳು ಬಾಲಗೋಕುಲದಲ್ಲಿ ಸಂಭ್ರಮದ ಕೃಷ್ಣವೇಷ ಪ್ರದರ್ಶನ

ರಾಷ್ಟ್ರೋತ್ಥಾನ ಬಳಗದ ಕೃಷ್ಣ ವೇಷ ಪ್ರದರ್ಶನ

ರಿಪ್ಪನ್‌ಪೇಟೆ: ಸತ್ಯ, ಧರ್ಮ, ಕರ್ತವ್ಯ ಹಾಗೂ ಮಾನವೀಯ ಮೌಲ್ಯಗಳ ಪ್ರತೀಕವಾಗಿರುವ ಶ್ರೀಕೃಷ್ಣನ ಜೀವನ ಮತ್ತು ಭಗವದ್ಗೀತೆಯ ಸಂದೇಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ರವೀಂದ್ರ ಬಲ್ಲಾಳ್ ಹೇಳಿದರು.

ಪಟ್ಟಣದ ಜಿ.ಎಸ್.ಬಿ. ಕಲ್ಯಾಣ ಮಂದಿರದಲ್ಲಿ ರಾಷ್ಟ್ರೋತ್ಥಾನ ಶಿಶು ಮಂದಿರ ಹಾಗೂ ರೋಟರಿ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪುಟಾಣಿಗಳ ಕೃಷ್ಣ ವೇಷ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ್ಯ, ಯೌವನ ಮತ್ತು ವೃದ್ಧಾಪ್ಯ ಜೀವನದ ಸಹಜ ಘಟ್ಟಗಳಾಗಿದ್ದು, ಚಿಕ್ಕ ವಯಸ್ಸಿನಲ್ಲೇ ಮಕ್ಕಳ ಸಭಾ ಅಂಜಿಕೆ ಮತ್ತು ವೇದಿಕೆಯ ಭಯ ನಿವಾರಣೆಗೆ ರಾಧಾ-ಕೃಷ್ಣ ವೇಷ ಪ್ರದರ್ಶನಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ಹಾಗೂ ನಿವೃತ್ತ ಬ್ಯಾಂಕ್ ನೌಕರ ರತ್ನಾಕರ್ ಮಾತನಾಡಿ, ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮತ್ತು ಉತ್ತಮ ಸಂಸ್ಕಾರ ಬೆಳೆಸುವುದು ಇಂದಿನ ಅಗತ್ಯವಾಗಿದೆ. ರಾಧಾ–ಕೃಷ್ಣರ ಆದರ್ಶ ಕಥೆಗಳ ಮೂಲಕ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ರೂಢಿಸಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಹೆಚ್.ಎಸ್. ರಮೇಶ್ ಹೆಬ್ಬಾರ್, ಮಾತಾಜಿ ಗಾಯತ್ರಿ  ,ಮಾತಾಜಿ ಸುಮಾ ಗಣೇಶ್ ಹತ್ವಾರ್, ಆರ್. ಉಮೇಶ್ ಭಟ್, ಜೆ. ರಾಧಾಕೃಷ್ಣ, ರಾಮಚಂದ್ರಪ್ಪ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

file 000000003f5c8208a0b120fec3430d9d4019902933355409429 ರಿಪ್ಪನ್ ಪೇಟೆ:ಗೋವುಗಳ ನಡುವೆ ಕೃಷ್ಣನ ತುಂಟಾಟ; ಅರಸಾಳು ಬಾಲಗೋಕುಲದಲ್ಲಿ ಸಂಭ್ರಮದ ಕೃಷ್ಣವೇಷ ಪ್ರದರ್ಶನ

Leave a Reply

Your email address will not be published. Required fields are marked *

error: Content is protected !!