ಹೊಸನಗರ: ಮೈಸೂರಿನ ಅಮೃತ ವಿಶ್ವವಿದ್ಯಾಪೀಠದ ಕಂಪ್ಯೂಟರ್ ಸೈನ್ಸ್ ವಿಭಾಗದ ಉಪ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಅಕ್ಷಯ್ ಶಾಂತಾರಾಮ್ ಅವರಿಗೆ ಸಂಶೋಧನಾ ಪ್ರಬಂಧಕ್ಕಾಗಿ ಪಿಎಚ್‌ಡಿ ಪದವಿ ಲಭಿಸಿದೆ.
“A Machine Learning Framework to Identify the Effect of Parkinson’s Disease on Visual Cognition Abilities”(ಪಾರ್ಕಿನ್ಸನ್ಸ್ ಕಾಯಿಲೆಯು ದೃಷ್ಟಿ-ಗ್ರಹಿಕೆ ಮತ್ತು ಜ್ಞಾನ ಸಾಮರ್ಥ್ಯಗಳ ಮೇಲೆ ಬೀರುವ ಪರಿಣಾಮವನ್ನು ಪತ್ತೆಹಚ್ಚಲು ಯಂತ್ರ ಕಲಿಕೆ ಆಧಾರಿತ ವ್ಯವಸ್ಥೆ) ಎಂಬ ವಿಷಯದ ಕುರಿತು ಅವರು ಸಂಶೋಧನೆ ನಡೆಸಿದ್ದು, ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕರಾದ ಡಾ. ಜಿ. ಅಮುದ ಅವರ ಮಾರ್ಗದರ್ಶನದಲ್ಲಿ ಈ ಸಂಶೋಧನೆ ಪೂರ್ಣಗೊಂಡಿದೆ.
ಕೃತಕ ಬುದ್ಧಿಮತ್ತೆ (AI) ಹಾಗೂ ಯಂತ್ರ ಕಲಿಕೆ (Machine Learning) ತಂತ್ರಜ್ಞಾನಗಳ ನೆರವಿನಿಂದ ಪಾರ್ಕಿನ್ಸನ್ಸ್ ಕಾಯಿಲೆಯು ದೃಷ್ಟಿ-ಜ್ಞಾನ ಸಾಮರ್ಥ್ಯದ ಮೇಲೆ ಬೀರುವ ಪರಿಣಾಮವನ್ನು ಗುರುತಿಸಲು ನೂತನ ವಿಧಾನವನ್ನು ಈ ಸಂಶೋಧನೆ ಅಭಿವೃದ್ಧಿಪಡಿಸಿದೆ. ನರಸಂಬಂಧಿ ಕಾಯಿಲೆಗಳ ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಲು ಹಾಗೂ ವೈದ್ಯಕೀಯ ನಿರ್ಧಾರ ಪ್ರಕ್ರಿಯೆಗೆ ಈ ಸಂಶೋಧನೆ ಮಹತ್ವದ ಕೊಡುಗೆ ನೀಡುವ ನಿರೀಕ್ಷೆಯಿದೆ.
ಡಾ.ಅಕ್ಷಯ್ ಶಾಂತಾರಾಮ್ ಅವರು ಹೊಸನಗರ ಪಟ್ಟಣದ ಹಿರಿಯ ಪತ್ರಕರ್ತ ಶಾಂತಾರಾಮ್ ಹಾಗೂ ಅಮೃತ ದಂಪತಿಯ ಪುತ್ರರಾಗಿದ್ದಾರೆ. ಅವರ ಈ ಸಾಧನೆಗೆ ಕುಟುಂಬಸ್ಥರು, ಸಹೋದ್ಯೋಗಿಗಳು, ಶಿಕ್ಷಣ ಕ್ಷೇತ್ರದ ಗಣ್ಯರು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.
ಡಾ.ಅಕ್ಷಯ್ ಶಾಂತಾರಾಮ್ ಅವರಿಗೆ ನಮ್ಮ ನಾಡಿ ಮೀಡಿಯಾ ಹೌಸ್ ವತಿಯಿಂದ ಅಭಿನಂದನೆಗಳು.















Leave a Reply