ಶಿವಪುರದಲ್ಲಿ ಅಪಾಯಕಾರಿ ಮರ ತೆರವು; ಕೆಲಕಾಲ ಟ್ರಾಫಿಕ್ ಜಾಮ್ | ಸಿಬ್ಬಂದಿ-ಸಾರ್ವಜನಿಕರ ನಡುವೆ ಮಾತಿನ ಚಕಮಕಿ!

3 20260710 202626 0002 ಶಿವಪುರದಲ್ಲಿ ಅಪಾಯಕಾರಿ ಮರ ತೆರವು; ಕೆಲಕಾಲ ಟ್ರಾಫಿಕ್ ಜಾಮ್ | ಸಿಬ್ಬಂದಿ-ಸಾರ್ವಜನಿಕರ ನಡುವೆ ಮಾತಿನ ಚಕಮಕಿ!
Spread the love
img 20260709 wa00513368985139124587470 ಶಿವಪುರದಲ್ಲಿ ಅಪಾಯಕಾರಿ ಮರ ತೆರವು; ಕೆಲಕಾಲ ಟ್ರಾಫಿಕ್ ಜಾಮ್ | ಸಿಬ್ಬಂದಿ-ಸಾರ್ವಜನಿಕರ ನಡುವೆ ಮಾತಿನ ಚಕಮಕಿ!

ರಿಪ್ಪನ್‌ಪೇಟೆ: ರಿಪ್ಪನ್‌ಪೇಟೆ -ತೀರ್ಥಹಳ್ಳಿಯನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಗರ್ತಿಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿವಪುರ ಸಮೀಪದ ರಸ್ತೆ ಬದಿಯಲ್ಲಿ  ಅಪಾಯಕಾರಿಯಾಗಿ ನಿಂತಿದ್ದ ಒಣಗಿದ ಬೃಹತ್ ಮರವನ್ನು ಅರಣ್ಯ ಇಲಾಖೆ ಶುಕ್ರವಾರ ಯಶಸ್ವಿಯಾಗಿ ತೆರವುಗೊಳಿಸಿತು.

ಸ್ಥಳೀಯರ ಮಾಹಿತಿ ಪ್ರಕಾರ, ರಸ್ತೆ ಬದಿಯಲ್ಲಿದ್ದ ಈ ಮರವು ಸಂಪೂರ್ಣವಾಗಿ ಒಣಗಿದ್ದು, ಯಾವುದೇ ಕ್ಷಣದಲ್ಲಿ ರಸ್ತೆಯ ಮೇಲೆ ಉರುಳಿ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಈ ಕುರಿತು ಸಾರ್ವಜನಿಕರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರು. ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ಮರ ತೆರವು ಕಾರ್ಯಾಚರಣೆ ನಡೆಸಿ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಿದೆ.

add a heading 20260710 202656 00007400286480399222557 ಶಿವಪುರದಲ್ಲಿ ಅಪಾಯಕಾರಿ ಮರ ತೆರವು; ಕೆಲಕಾಲ ಟ್ರಾಫಿಕ್ ಜಾಮ್ | ಸಿಬ್ಬಂದಿ-ಸಾರ್ವಜನಿಕರ ನಡುವೆ ಮಾತಿನ ಚಕಮಕಿ!

ಮರ ತೆರವು ಕಾರ್ಯಾಚರಣೆಯ ವೇಳೆ ಸುರಕ್ಷತಾ ದೃಷ್ಟಿಯಿಂದ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಕೆಲಕಾಲ ಸ್ಥಗಿತಗೊಳಿಸಲಾಗಿತ್ತು. ಇದರ ಪರಿಣಾಮ ಶಿವಪುರದಿಂದ ರಿಪ್ಪನ್‌ಪೇಟೆ ಕಡೆಗೆ ಹಾಗೂ ತೀರ್ಥಹಳ್ಳಿ ಕಡೆಗೆ ಸುಮಾರು 2 ಕಿ.ಮೀ.ವರೆಗೆ ವಾಹನಗಳ ಸಾಲು ನಿರ್ಮಾಣವಾಗಿ ಟ್ರಾಫಿಕ್ ಜಾಮ್ ಉಂಟಾಯಿತು. ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಸಂಚಾರವನ್ನು ಪುನಃ ಸುಗಮಗೊಳಿಸಲಾಯಿತು.

ಕಾರ್ಯಾಚರಣೆಯ ವೇಳೆ ಕೆಲ ಸಾರ್ವಜನಿಕರು ತಮಗೆ ತುರ್ತು ಪ್ರಯಾಣವಿರುವುದಾಗಿ ತಿಳಿಸಿ ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದರು. ಈ ವೇಳೆ ಸಾರ್ವಜನಿಕರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಯ ನಡುವೆ ಮಾತಿನ ಚಕಮಕಿ ನಡೆದಿರುವುದು ತಿಳಿದುಬಂದಿದೆ.

ಇದಕ್ಕೆ ಸಾರ್ವಜನಿಕರಿಗೆ ಪ್ರತಿಕ್ರಿಯಿಸಿದ ಸಿಬ್ಬಂದಿಯೊಬ್ಬರು , “ನಿಮ್ಮ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಮರ ತೆರವುಗೊಳಿಸುವ ಸಂದರ್ಭದಲ್ಲಿ ವಾಹನಗಳನ್ನು ಬಿಡುವುದು ಅಪಾಯಕಾರಿಯಾಗಿದೆ. ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿರುವುದರಿಂದ ಸ್ವಲ್ಪ ಸಮಯ ಸಹಕರಿಸಿ,” ಎಂದು ಜವಾಬ್ದಾರಿಯುತವಾಗಿ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿ  ಶೋಭಾ, ಮತ್ತು ಸಿಬ್ಬಂದಿ ವರ್ಗ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದರು.

img 20260710 wa00683664557243546197578 ಶಿವಪುರದಲ್ಲಿ ಅಪಾಯಕಾರಿ ಮರ ತೆರವು; ಕೆಲಕಾಲ ಟ್ರಾಫಿಕ್ ಜಾಮ್ | ಸಿಬ್ಬಂದಿ-ಸಾರ್ವಜನಿಕರ ನಡುವೆ ಮಾತಿನ ಚಕಮಕಿ!
img 01226854993967939221723 ಶಿವಪುರದಲ್ಲಿ ಅಪಾಯಕಾರಿ ಮರ ತೆರವು; ಕೆಲಕಾಲ ಟ್ರಾಫಿಕ್ ಜಾಮ್ | ಸಿಬ್ಬಂದಿ-ಸಾರ್ವಜನಿಕರ ನಡುವೆ ಮಾತಿನ ಚಕಮಕಿ!
ಜಾಹೀರಾತು

Leave a Reply

Your email address will not be published. Required fields are marked *