
ಹೊಸನಗರ: ಹೊಸನಗರ ತಾಲ್ಲೂಕು ಕೋಟೆಗಾರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಶಶಿಧರ್ ನಾಯ್ಕ್ ಅವರನ್ನು 2026ರಿಂದ 2029ರವರೆಗಿನ ಮುಂದಿನ ಮೂರು ವರ್ಷಗಳ ಅವಧಿಗೆ ಅವಿರೋಧವಾಗಿ ಪುನರಾಯ್ಕೆ ಮಾಡಲಾಗಿದೆ.
ಸಂಘದ ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಗಿದ್ದು, ಕಳೆದ ಅವಧಿಯಲ್ಲಿ ಸಂಘದ ಅಭಿವೃದ್ಧಿ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ಶಶಿಧರ್ ನಾಯ್ಕ್ ಅವರು ತೊಡಗಿಸಿಕೊಂಡಿದ್ದನ್ನು ಸದಸ್ಯರು ಪ್ರಶಂಸಿಸಿದರು. ಬಡವರ ಕಲ್ಯಾಣಕ್ಕಾಗಿ ಮಾಸಾಶನ, ವಿಧವಾ ವೇತನ, ವೃದ್ಧಾಪ್ಯ ವೇತನ ಸೇರಿದಂತೆ ಹಲವು ನೆರವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದರ ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ಹಾಗೂ ಬೆಳ್ಳಿ ಪದಕ ನೀಡಿ ಗೌರವಿಸುತ್ತಿರುವ ಕಾರ್ಯಕ್ಕೂ ಮೆಚ್ಚುಗೆ ವ್ಯಕ್ತವಾಯಿತು.

ಇದೇ ವೇಳೆ ಸ್ವಜಾತಿಯ ಕುಟುಂಬಗಳಲ್ಲಿ ಮರಣ ಸಂಭವಿಸಿದ ಸಂದರ್ಭದಲ್ಲಿ ಅಂತ್ಯಸಂಸ್ಕಾರ ನೆರವಿಗಾಗಿ ಆರ್ಥಿಕ ಸಹಾಯ ನೀಡುತ್ತಿರುವುದರ ಜೊತೆಗೆ ಗಣಪತಿ ಉತ್ಸವ, ದಸರಾ, ಚಂಡಿಕಾ ಹೋಮ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜದ ಒಗ್ಗಟ್ಟಿಗೆ ಶ್ರಮಿಸುತ್ತಿರುವುದನ್ನು ಸಭೆಯಲ್ಲಿ ಸ್ಮರಿಸಲಾಯಿತು.
2026-2029ರ ಅವಧಿಗೆ ರಚಿಸಲಾದ ಸಮಿತಿಯಲ್ಲಿ ಗೌರವಾಧ್ಯಕ್ಷರಾಗಿ ಪಿ.ಆರ್. ಸಂಜೀವ, ಉಪಾಧ್ಯಕ್ಷರಾಗಿ ಡಾ. ದಿನಮಣಿ, ಕೋಡಿ ಚಂದ್ರಶೇಖರ ಹಾಗೂ ಹೆಚ್.ವಿ. ಮಹಾಬಲ, ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಆರ್. ಸುರೇಶ್, ಸಹ ಕಾರ್ಯದರ್ಶಿಯಾಗಿ ಕಟ್ಟೆ ಸುರೇಶ್, ಲೆಕ್ಕ ಪರಿಶೋಧಕರಾಗಿ ಗೋವಿಂದರಾಯ ಹಾಗೂ ಧಾರ್ಮಿಕ ಕಾರ್ಯದರ್ಶಿಗಳಾಗಿ ದ್ಯಾವರ್ಸ ಸುಬ್ರಹ್ಮಣ್ಯ ಮತ್ತು ವಿಠೋಬಾ ನಾಯ್ಕ್ ಅವರನ್ನು ಆಯ್ಕೆ ಮಾಡಲಾಗಿದೆ.
ಇನ್ನು ನಿರ್ದೇಶಕರಾಗಿ ಎಂ.ಪಿ.ಎನ್. ನಾರಾಯಣ, ಸುಬ್ಬಾರಾವ್, ಮಾವಿನಕೊಪ್ಪ ಸತೀಶ್, ಶ್ರೀದೇವಿ ಹನುಮಂತ್, ಪಿ. ಮನೋಹರ, ಮಾವಿನಕೊಪ್ಪ ಗಣೇಶ್ ಸೇರಿದಂತೆ ಹಲವರನ್ನು ಸಮಿತಿಗೆ ಸೇರಿಸಿಕೊಳ್ಳಲಾಗಿದೆ.
ಸಭೆಯಲ್ಲಿ ನೂತನ ಅಧ್ಯಕ್ಷ ಶಶಿಧರ್ ನಾಯ್ಕ್ ಅವರನ್ನು ಸದಸ್ಯರು ಅಭಿನಂದಿಸಿದರು.

















Leave a Reply