ಶಿವಮೊಗ್ಗದಲ್ಲೂ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಒತ್ತಾಯ | ಸಿಎಂ ಗೆ ಸಚಿವ ಮಧುಬಂಗಾರಪ್ಪ ನೇತೃತ್ವದಲ್ಲಿ ವಕೀಲರ ಸಂಘದ ಮನವಿ

IMG 20260520 WA0029 1 ಶಿವಮೊಗ್ಗದಲ್ಲೂ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಒತ್ತಾಯ | ಸಿಎಂ ಗೆ ಸಚಿವ ಮಧುಬಂಗಾರಪ್ಪ ನೇತೃತ್ವದಲ್ಲಿ ವಕೀಲರ ಸಂಘದ ಮನವಿ
Spread the love
img 20260110 wa00009177547694132443645 ಶಿವಮೊಗ್ಗದಲ್ಲೂ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಒತ್ತಾಯ | ಸಿಎಂ ಗೆ ಸಚಿವ ಮಧುಬಂಗಾರಪ್ಪ ನೇತೃತ್ವದಲ್ಲಿ ವಕೀಲರ ಸಂಘದ ಮನವಿ

ಬೆಂಗಳೂರು : ರಾಜ್ಯದ ಧಾರಾವಾಡ ಮತ್ತು ಕಲಬುರಗಿಗಳಲ್ಲಿ ಹೈಕೋರ್ಟ್ ಸಂಚಾರಿ ಪೀಠಗಳನ್ನು ಸ್ಥಾಪಿಸಿರುವ ಮಾದರಿಯಲ್ಲೇ ಶಿವಮೊಗ್ಗದಲ್ಲೂ ಸಂಚಾರಿ ಪೀಠವನ್ನು ಸ್ಥಾಪಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ಬುಧವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

img 20260427 wa00136921939687599179064 ಶಿವಮೊಗ್ಗದಲ್ಲೂ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಒತ್ತಾಯ | ಸಿಎಂ ಗೆ ಸಚಿವ ಮಧುಬಂಗಾರಪ್ಪ ನೇತೃತ್ವದಲ್ಲಿ ವಕೀಲರ ಸಂಘದ ಮನವಿ

ಬೆಂಗಳೂರಿನಿಂದ ಸುಮಾರು ಡಿದ್ದಾರೆ 300 ಕಿ.ಮೀ. ದೂರವಿರುವ ಶಿವಮೊಗ್ಗವು ದಾವಣಗೆರೆ, ಚಿಕ್ಕ ಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಜನರಿಗೂ ಸುಲಭವಾಗಿ, ಶೀಘ್ರವಾಗಿ ಮತ್ತು ಕೈಗೆಟಕುವ ವೆಚ್ಚದಲ್ಲಿ ನ್ಯಾಯಾಲಯದ ಸೌಲಭ್ಯವನ್ನು ತಲುಪಿಸಲು ಸಂಚಾರಿ ಪೀಠದ ಸ್ಥಾಪನೆ ಅತ್ಯಗತ್ಯವಾಗಿದೆ ಎಂದು ಸಚಿವ ಮಧುಬಂಗಾರಪ್ಪ ಈ ಸಂದರ್ಭದಲ್ಲಿ ತಿಳಿಸಿದರು.

ನ್ಯಾಯಮೂರ್ತಿ ಜಸ್ವಂತ್ ಸಿಂಗ್ ಸಮಿತಿಯ ಮಾರ್ಗ ಸೂಚಿಗಳ ಅನ್ವಯ ಸಂಚಾರಿ ಪೀಠದ ಸ್ಥಾಪನೆಗೆ ಅಗತ್ಯವಿರುವ ಎಲ್ಲಾ ಅರ್ಹತೆಗಳನ್ನು ಮಧ್ಯ ಕರ್ನಾಟಕ ಭಾಗದ ಶಿವಮೊಗ್ಗವು ಹೊಂದಿದೆ. ಈ ಭಾಗದಿಂದ ವಾರ್ಷಿಕವಾಗಿ ದಾಖಲಾಗುವ ಪ್ರಕರಣಗಳ ಸಂಖ್ಯೆ ಪೀಠಕ್ಕೆ ಪೂರಕವಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲೇ 18 ಹಿರಿಯ ವಕೀಲರುಗಳನ್ನು ಒಳಗೊಂಡ ಸಮರ್ತ ವಕೀಲರ ತಂಡ ಹಾಗೂ ಈ ಭಾಗದ ಎಲ್ಲಾ ಚುನಾಯಿತ ಜನಪ್ರತಿನಿಧಿಗಳುಮತ್ತು ಸಾರ್ವಜನಿಕ ಸಂಘ-ಸಂಸ್ಥೆಗಳ ಒಮ್ಮತದ ಬೆಂಬಲ ಮತ್ತು ಸಹಮತ ನೀಡಿರುತ್ತಾರೆ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಮಧ್ಯ ಕರ್ನಾಟಕ ಭಾಗದ ಕೇಂದ್ರ ಸ್ಥಾನವಾದ ಶಿವಮೊಗ್ಗದಲ್ಲೇ ಉಚ್ಚ ನ್ಯಾಯಾಲಯದ ಪೀಠವನ್ನು ಸಂಚಾರಿ ಸ್ಥಾಪಿಸುವಂತೆ ಮುಖ್ಯಮಂತ್ರಿ ಗಳನ್ನು ಕೋರಿದ್ದಾಗಿ ಸಚಿವರು ತಿಳಿಸಿದರು.

img 20260423 wa00562791575008883354977 ಶಿವಮೊಗ್ಗದಲ್ಲೂ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಒತ್ತಾಯ | ಸಿಎಂ ಗೆ ಸಚಿವ ಮಧುಬಂಗಾರಪ್ಪ ನೇತೃತ್ವದಲ್ಲಿ ವಕೀಲರ ಸಂಘದ ಮನವಿ

Leave a Reply

Your email address will not be published. Required fields are marked *