ಸಾಗರದ ಯುವತಿ ಗಾಂಜಾ ಸಾಗಾಟದಲ್ಲಿ ಅರೆಸ್ಟ್ – ಮೂಲ್ಕಿಯಲ್ಲಿ 35 ಲಕ್ಷ ಮೌಲ್ಯದ ಹೈಡೋವಿಡ್ ಗಾಂಜಾ ಜಪ್ತಿ

Screenshot 20260513 200944 Canva ಸಾಗರದ ಯುವತಿ ಗಾಂಜಾ ಸಾಗಾಟದಲ್ಲಿ ಅರೆಸ್ಟ್ - ಮೂಲ್ಕಿಯಲ್ಲಿ 35 ಲಕ್ಷ ಮೌಲ್ಯದ ಹೈಡೋವಿಡ್ ಗಾಂಜಾ ಜಪ್ತಿ
Spread the love
img 20260110 wa00004474386621627707172 ಸಾಗರದ ಯುವತಿ ಗಾಂಜಾ ಸಾಗಾಟದಲ್ಲಿ ಅರೆಸ್ಟ್ - ಮೂಲ್ಕಿಯಲ್ಲಿ 35 ಲಕ್ಷ ಮೌಲ್ಯದ ಹೈಡೋವಿಡ್ ಗಾಂಜಾ ಜಪ್ತಿ

ಮಂಗಳೂರು : ಕ್ಷಾಂತರ ರೂಪಾಯಿ ಮೌಲ್ಯದ ಹೈಡೋವಿಡ್ ಗಾಂಜಾ ಸಾಗಾಟ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.
ಮೂಲ್ಕಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು 35 ಲಕ್ಷ ರೂ. ಮೌಲ್ಯದ 1 ಕೆಜಿ 42 ಗ್ರಾಂ ಹೈಡೋವಿಡ್ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

screenshot 20260513 201338 canva1991210180343652817 ಸಾಗರದ ಯುವತಿ ಗಾಂಜಾ ಸಾಗಾಟದಲ್ಲಿ ಅರೆಸ್ಟ್ - ಮೂಲ್ಕಿಯಲ್ಲಿ 35 ಲಕ್ಷ ಮೌಲ್ಯದ ಹೈಡೋವಿಡ್ ಗಾಂಜಾ ಜಪ್ತಿ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುಲಿದೇವರ ಬನ ನಿವಾಸಿ ಸುಹಾನ (21) ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ಈಕೆ ಕುಂದಾಪುರದ ಕಾಲೇಜೊಂದರಲ್ಲಿ ಅಂತಿಮ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದಳು ಎನ್ನಲಾಗಿದೆ.
ಮಂಗಳವಾರ (ಮೇ 12)ರಂದು ಮೂಲ್ಕಿ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವೇಳೆ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಹೈಡೋವಿಡ್ ಗಾಂಜಾ ಪತ್ತೆಯಾಗಿದೆ.


ಪೊಲೀಸರು ಆರೋಪಿಯಿಂದ:
1 ಕೆಜಿ 42 ಗ್ರಾಂ ಹೈಡೋವಿಡ್ ಗಾಂಜಾ
ಮೊಬೈಲ್ ಫೋನ್ ಇತರೆ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.


ಪ್ರಾಥಮಿಕ ತನಿಖೆಯಲ್ಲಿ ಚೆನ್ನೈಯಿಂದ ಮಾದಕ ವಸ್ತು ತರಿಸಿಕೊಂಡು ಮಾರಾಟ ಮಾಡಿ ಹಣ ಸಂಪಾದಿಸುವ ಉದ್ದೇಶ ಹೊಂದಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.
ಈ ಸಂಬಂಧ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಣಂಬೂರು ಎಸಿಪಿ ತಂಡ ಹಾಗೂ ಮೂಲ್ಕಿ ಠಾಣೆ ಪೊಲೀಸರು ಸಂಯುಕ್ತ ಕಾರ್ಯಾಚರಣೆ ನಡೆಸಿದ್ದಾರೆ.

ಇದಲ್ಲದೆ, ಆರೋಪಿತೆಯ ವಿರುದ್ಧ ಈ ಹಿಂದೆ ಕಾವೂರು ಪೊಲೀಸ್ ಠಾಣೆ ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಸ್ಟಮ್ಸ್ ವಿಭಾಗದಲ್ಲಿಯೂ ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ.

img 20260427 wa00134671930527792158614 ಸಾಗರದ ಯುವತಿ ಗಾಂಜಾ ಸಾಗಾಟದಲ್ಲಿ ಅರೆಸ್ಟ್ - ಮೂಲ್ಕಿಯಲ್ಲಿ 35 ಲಕ್ಷ ಮೌಲ್ಯದ ಹೈಡೋವಿಡ್ ಗಾಂಜಾ ಜಪ್ತಿ
img 20260509 wa00047419543554244785534 ಸಾಗರದ ಯುವತಿ ಗಾಂಜಾ ಸಾಗಾಟದಲ್ಲಿ ಅರೆಸ್ಟ್ - ಮೂಲ್ಕಿಯಲ್ಲಿ 35 ಲಕ್ಷ ಮೌಲ್ಯದ ಹೈಡೋವಿಡ್ ಗಾಂಜಾ ಜಪ್ತಿ

Leave a Reply

Your email address will not be published. Required fields are marked *