ಹೊಸನಗರದಲ್ಲಿ ಮೇ 7ರಿಂದ ಆರ್‌ಎಸ್‌ಎಸ್ ಪ್ರಾರಂಭಿಕ ಕ್ಯಾಂಪ್: ದೇಶಭಕ್ತಿ, ಶಿಸ್ತು ಮತ್ತು ಸಂಸ್ಕಾರದ ಪಾಠ

Blue and Red Voter Education Banner 20260505 085451 0000 scaled ಹೊಸನಗರದಲ್ಲಿ ಮೇ 7ರಿಂದ ಆರ್‌ಎಸ್‌ಎಸ್ ಪ್ರಾರಂಭಿಕ ಕ್ಯಾಂಪ್: ದೇಶಭಕ್ತಿ, ಶಿಸ್ತು ಮತ್ತು ಸಂಸ್ಕಾರದ ಪಾಠ
Spread the love

ಹೊಸನಗರ: ತಾಲೂಕಿನ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವತಿಯಿಂದ ಪ್ರಾರಂಭಿಕ ಕ್ಯಾಂಪ್ ಮೇ 7 ಸಂಜೆದಿಂದ ಮೇ 10ರ ಮಧ್ಯಾಹ್ನದವರೆಗೆ ಹೊಸನಗರ ಪಟ್ಟಣದಲ್ಲಿ ಆಯೋಜಿಸಲಾಗಿದೆ. ಪಟ್ಟಣದ ಶ್ರೀ ಗುರೂಜಿ ಇಂಟರ್ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್‌ನಲ್ಲಿ ನಡೆಯಲಿರುವ ಈ ಮೂರು ದಿನಗಳ ಕ್ಯಾಂಪಿಗೆ ತಾಲೂಕಿನ ವಿವಿಧ ಗ್ರಾಮಗಳಿಂದ ಶಿಕ್ಷಾರ್ಥಿಗಳು ಭಾಗವಹಿಸಲಿದ್ದಾರೆ.

ಕ್ಯಾಂಪ್‌ನಲ್ಲಿ ಆಟಗಳು, ಯೋಗಾಭ್ಯಾಸ, ದೇಶಭಕ್ತಿಯ ಕಥನಗಳು, ರಾಷ್ಟ್ರೀಯ ವಿಚಾರಗಳ ಮಂಥನ, ಬೌದ್ಧಿಕ ಕಾರ್ಯಕ್ರಮಗಳು, ಪ್ರಶ್ನೋತ್ತರಗಳು ಸೇರಿದಂತೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ವಿವಿಧ ಚಟುವಟಿಕೆಗಳು ನಡೆಯಲಿವೆ. ಮೇ 7ರಂದು ಸಂಜೆ 6 ಗಂಟೆಯೊಳಗೆ ಭಾಗವಹಿಸುವವರು ಶಿಬಿರ ಸ್ಥಳಕ್ಕೆ ತಲುಪಬೇಕು. ಕ್ಯಾಂಪ್ ಮೇ 10ರ ಮಧ್ಯಾಹ್ನದವರೆಗೆ ನಡೆಯಲಿದೆ.

img 20260502 wa00057766230947082949525 ಹೊಸನಗರದಲ್ಲಿ ಮೇ 7ರಿಂದ ಆರ್‌ಎಸ್‌ಎಸ್ ಪ್ರಾರಂಭಿಕ ಕ್ಯಾಂಪ್: ದೇಶಭಕ್ತಿ, ಶಿಸ್ತು ಮತ್ತು ಸಂಸ್ಕಾರದ ಪಾಠ
ಈ ಸೂಚನೆಗಳನ್ನು ಗಮನಿಸಿ.

👉 ಶಿಬಿರದಲ್ಲಿ ಏನು ಏನು ಇರಲಿದೆ?
* ಆಟಗಳು ಮತ್ತು ಗುಂಪು ಚಟುವಟಿಕೆಗಳು.
* ಯೋಗಾಭ್ಯಾಸ ಮತ್ತು ವ್ಯಾಯಾಮ.
* ದೇಶಭಕ್ತಿಯ ಕಥನಗಳು.
* ರಾಷ್ಟ್ರೀಯ ವಿಚಾರಗಳ ಮಂಥನ.
* ಬೌದ್ಧಿಕ ಕಾರ್ಯಕ್ರಮಗಳು,ಪ್ರಶ್ನೋತ್ತರ.
* ವ್ಯಕ್ತಿತ್ವ ವಿಕಸನ ತರಬೇತಿ


👉 ಯಾರೆಲ್ಲಾ ಭಾಗವಹಿಸಬಹುದು?
* 8ನೇ ತರಗತಿ ಪಾಸ್ ಆಗಿ 9ನೇ ತರಗತಿ ಓದುತ್ತಿರುವ.   *ವಿದ್ಯಾರ್ಥಿಗಳು ಮತ್ತು ಮೇಲ್ಪಟ್ಟವರು.
*ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳು
*ಕೃಷಿಕರು,ಉದ್ಯೋಗಿಗಳು,ವ್ಯಾಪಾರಸ್ಥರು
*14 ರಿಂದ 60 ವರ್ಷದೊಳಗಿನ ಆಸಕ್ತರು


👉 ಶಿಬಿರದ ವಿಶೇಷತೆ ಏನು?
* ದೇಶಭಕ್ತಿ ಮತ್ತು ರಾಷ್ಟ್ರೀಯ ಚಿಂತನೆಗೆ ಉತ್ತೇಜನ
* ಶಿಸ್ತು ಮತ್ತು ಸಂಘಟನಾ ಜೀವನದ ಅನುಭವ
* ಹಿಂದೂ ಸಂಸ್ಕಾರ ಮತ್ತು ಮೌಲ್ಯಗಳ ಪರಿಚಯ
* ಆತ್ಮರಕ್ಷಣಾ ಕೌಶಲ್ಯಗಳ ತರಬೇತಿ
* ಜೀವನ ಮೌಲ್ಯಗಳ ಬೋಧನೆ
*ದೈಹಿಕ ಮತ್ತು ಮಾನಸಿಕ ಅಭಿವೃದ್ಧಿಗೆ ಒತ್ತು
* ಒಗ್ಗಟ್ಟಿನ ಜೀವನ ಮತ್ತು ನಾಯಕತ್ವ ಗುಣಗಳ ಬೆಳವಣಿಗೆ

ಹೊಸನಗರ ತಾಲೂಕಿನ ಎಲ್ಲ ಗ್ರಾಮಗಳಿಂದ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಮುಂಚಿತವಾಗಿ ಹೆಸರು ನೊಂದಾಯಿಸಿಕೊಳ್ಳಲು ತಿಳಿಸಿದ್ದಾರೆ. 100.ರೂ ಶಿಬಿರ ಶುಲ್ಕವನ್ನು ನಿಗದಿಪಡಿಸಲಾಗಿದೆ .  ಹೆಚ್ಚಿನ ಮಾಹಿತಿಗಾಗಿ ಆರ್‌ಎಸ್‌ಎಸ್ ಸಂಪರ್ಕ ವಿಭಾಗವನ್ನು ಸಂಪರ್ಕಿಸಲು ಕೋರಲಾಗಿದೆ.

ಸಂಪರ್ಕಿಸಲು👇
ಕಸಬಾ ಹೋಬಳಿ
ನಾಗರಾಜ್- 9480358781
ರಮೇಶ್ - 9449943308

ನಗರ ಹೋಬಳಿ
ಮಣಿಕಂಠ- 7760407318
ಸಾಮ್ರಾಜ್ಯ-9483647578

ಕೆರೆಹಳ್ಳಿ ಹೋಬಳಿ
ದಾನೇಶ್ ಆಲುವಳ್ಳಿ -7349005670
ದೇವರಾಜ್ ಕೆರೆಹಳ್ಳಿ -9900973205

ಹುಂಚ ಹೋಬಳಿ
ಕಿರಣ್ ಕರಡಿಗ   -9448103279
ಆದರ್ಶ ಮೂಗುಡ್ತಿ -9632959020

Leave a Reply

Your email address will not be published. Required fields are marked *