ಯುವ ಪೀಳಿಗೆ ಕನ್ನಡದತ್ತ ಹೆಚ್ಚು ಒಲವು ತೋರಬೇಕು: ಕೃಷ್ಣೇಗೌಡ

Blue and Red Voter Education Banner 20260424 210504 0000 scaled ಯುವ ಪೀಳಿಗೆ ಕನ್ನಡದತ್ತ ಹೆಚ್ಚು ಒಲವು ತೋರಬೇಕು: ಕೃಷ್ಣೇಗೌಡ
Spread the love

ಹೊಸನಗರ: ತಾಲೂಕಿನ 11ನೇ ಕನ್ನಡ ಸಾಹಿತ್ಯ ಸಮ್ಮೇಳನವು ಪಟ್ಟಣದ ಸೀತಾರಾಮಚಂದ್ರ ಸಭಾಭವನದಲ್ಲಿ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರೊಫೆಸರ್ ಹಾಗೂ ಸಾಹಿತ್ಯಿಕ ಕೃಷ್ಣೇಗೌಡ ಅವರು ಕನ್ನಡ ಭಾಷೆಯ ಉಳಿವಿನ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿದರು.
ತಮ್ಮ ಭಾಷಣದಲ್ಲಿ ಅವರು, ರಾಜ್ಯದ ಯುವಕರು ಕೆಲಸದ ಕಡೆ ನಿರ್ಲಕ್ಷ್ಯ ತೋರಿಸುತ್ತಿರುವ ಕಾರಣದಿಂದ ಹೊರ ರಾಜ್ಯದವರು ಕರ್ನಾಟಕಕ್ಕೆ ಬಂದು ಉದ್ಯೋಗ ಪಡೆದುಕೊಳ್ಳುತ್ತಿದ್ದಾರೆ.ಇದರಿಂದ ಪಟ್ಟಣ ಪ್ರದೇಶಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಹಿನ್ನಡೆಯಾಗುತ್ತಿರುವುದು ಕಂಡು ಬರುತ್ತಿದೆ ಎಂದು ಹೇಳಿದರು.
ಯುವ ಪೀಳಿಗೆ ಕನ್ನಡದತ್ತ ಹೆಚ್ಚು ಒಲವು ತೋರಬೇಕು. ಕನ್ನಡ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪೋಷಕರು ಮಕ್ಕಳಿಗೆ ಕನ್ನಡ ಸಾಹಿತ್ಯದ ಮಹತ್ವವನ್ನು ತಿಳಿಸಬೇಕು. ಇವುಗಳ ಮೂಲಕವೇ ಕನ್ನಡ ಭಾಷೆ ಉಳಿಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

img 20260110 wa0000639266878129658019 ಯುವ ಪೀಳಿಗೆ ಕನ್ನಡದತ್ತ ಹೆಚ್ಚು ಒಲವು ತೋರಬೇಕು: ಕೃಷ್ಣೇಗೌಡ
24hnr1photo5475928770206732672 ಯುವ ಪೀಳಿಗೆ ಕನ್ನಡದತ್ತ ಹೆಚ್ಚು ಒಲವು ತೋರಬೇಕು: ಕೃಷ್ಣೇಗೌಡ

ಸಮ್ಮೇಳನದ ಅಧ್ಯಕ್ಷರಾದ ಎಂ.ಎಂ. ಪ್ರಭಾಕರ್ ಅವರು ಮಾತನಾಡಿ, ಸಮಾಜದಲ್ಲಿ ವ್ಯಕ್ತಿಗೆ ಸ್ಥಾನಮಾನ ದೊರಕುವುದು ಅವರ ಕೆಲಸದ ಆಧಾರದ ಮೇಲೆ ಎಂಬುದನ್ನು ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಬೆಳ್ಳೂರು ಗೋಪಾಲಕೃಷ್ಣ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಸರ್ಕಾರದಿಂದ ದೊರೆಯುವ ಅನುದಾನ ಕಡಿಮೆ ಇದೆ. ಈ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.ಜೊತೆಗೆ, ಯುವ ಬರಹಗಾರರಿಗೆ ಉತ್ತೇಜನ ನೀಡುವ ಸಲುವಾಗಿ ಪುಸ್ತಕ ಪ್ರಕಟಣೆಗಾಗಿ ನೆರವು ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮ ಉದ್ಘಾಟನೆ ಸಂದರ್ಭದಲ್ಲಿ ತಹಸೀಲ್ದಾರ್ ಭರತ್‌ರಾಜ್, ಜಿಲ್ಲಾಧ್ಯಕ್ಷರಾದ ಟಿ ಮಂಜುನಾಥ್, ನಿಕಟ ಸಮ್ಮೇಳನಾಧ್ಯಕ್ಷರ ನುಡಿ ಡಿ.ಎಸ್ ಶ್ರೀಧರ್, ಪ್ರಾಸ್ತವಿಕ ಮಾತನಾಡಿದ ನಾಗರಕೊಡಿಗೆ ಗಣೇಶ್‌ಮೂರ್ತಿ, ತ.ಮ. ನರಸಿಂಹ,  ನಗರ ರಾಘವೇಂದ್ರ,  ವಿಜೇಂದ್ರ ಶೇಟ್,  ಕೆ.ಜಿ. ನಾಗೇಶ್, ಮಾರ್ಷಲ್ ಶರಾಂ, ಎನ್ ಶ್ರೀಧರ ಉಡುಪ, ಶಾಂತರಾಮ್ ಪ್ರಭು, ಅಂಬ್ರಯ್ಯಮಠ, ಚಂದ್ರಶೇಖರ ಶೇಟ್, ಕೆ. ಇಲಿಯಾಸ್, ಇನ್ನೂ ಮುಂತಾದವರು ಉಪಸ್ಥಿತರಿದ್ದರು

img 20260423 wa00567483563917315369380 ಯುವ ಪೀಳಿಗೆ ಕನ್ನಡದತ್ತ ಹೆಚ್ಚು ಒಲವು ತೋರಬೇಕು: ಕೃಷ್ಣೇಗೌಡ

Leave a Reply

Your email address will not be published. Required fields are marked *