ಹೊಸನಗರ: ಏಪ್ರಿಲ್ 23ನೇ ಗುರುವಾರ ಕರ್ನಾಟಕ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಹೊಸನಗರದ ಹೋಲಿ ರಿಡೀಮರ್ ಶಾಲೆಯ ವಿದ್ಯಾರ್ಥಿ ಜೆ.ಸಿ.ಎಂ ರಸ್ತೆಯ ದಿ|| ಕೆ. ಶಂಕರರಾವ್–ರಾಜೀವಮ್ಮನವರ ಮೊಮ್ಮಗ ಹಾಗೂ ಹೊಸನಗರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಹೆಚ್.ಎಸ್. ನಾಗರಾಜ್–ಮಂಜುಳ ದಂಪತಿಯವರ ಪುತ್ರ ಮನ್ವಿತ್ ಅವರು 625ಕ್ಕೆ 607 ಅಂಕ ಪಡೆದು 97.12% ಪಡೆದಿರುತ್ತಾರೆ.
ಕನ್ನಡದಲ್ಲಿ 125ಕ್ಕೆ 124, ಇಂಗ್ಲಿಷ್ನಲ್ಲಿ 100ಕ್ಕೆ 95, ಹಿಂದಿ 100ಕ್ಕೆ 99, ಗಣಿತದಲ್ಲಿ 100ಕ್ಕೆ 93, ಸಮಾಜ ವಿಜ್ಞಾನದಲ್ಲಿ 100ಕ್ಕೆ 100 ಹಾಗೂ ವಿಜ್ಞಾನದಲ್ಲಿ 100ಕ್ಕೆ 96 ಅಂಕಗಳನ್ನು ಪಡೆದಿದ್ದಾರೆ.

ವಿದ್ಯಾರ್ಥಿಯ ಸಾಧನೆ:
ಎಸ್ಎಸ್ಎಲ್ಸಿ ಪರೀಕ್ಷೆಯ ಸಮಯದಲ್ಲಿ ಈ ವಿದ್ಯಾರ್ಥಿ ಕಳೆದ ಮೂರು ವರ್ಷಗಳಿಂದ ಬೆಳಿಗ್ಗೆ 5 ಗಂಟೆಯಿಂದ ಮನೆ ಮನೆಗೆ ಪತ್ರಿಕೆ ವಿತರಿಸಿ ನಂತರ ಶಾಲೆಗೆ ಹೋಗಿ ಈ ಸಾಧನೆ ಮಾಡಿರುವುದು ಹೆಮ್ಮೆ ವಿಷಯವಾಗಿದೆ.
ಅಭಿನಂದನೆ:
ಈ ವಿದ್ಯಾರ್ಥಿಯ ಸಾಧನೆಗೆ ಹೋಳಿ ರಿಡೀಮರ್ ಶಾಲೆಯ ಮುಖ್ಯ ಶಿಕ್ಷಕಿ ವಿಲ್ಮಾ ಪಿಂಟೋ ಹಾಗೂ ಸಹ ಶಿಕ್ಷಕರು, ಕೋಟೆಗಾರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶಶಿಧರ್ ನಾಯ್ಕ್, ಕೋಟೆಗಾರ್ ಯುವಕ ಸಂಘದ ಅಧ್ಯಕ್ಷ ಮಾವಿನಕೊಪ್ಪ ಸತೀಶ್, ಕುಟುಂಬದವರು ಅಭಿನಂದಿಸಿದ್ದಾರೆ.
ಇವರ ಈ ಸಾಧನೆಗೆ ನಾಡಿ ಮೀಡಿಯಾ ಹೌಸ್ ವತಿಯಿಂದ ಅಭಿನಂದನೆಗಳು.


















Leave a Reply