ಹೊಸನಗರ :ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಮನ್ವಿತ್ ಗೆ 97.12% ಫಲಿತಾಂಶ

Blue and Red Voter Education Banner 20260423 200725 0000 scaled ಹೊಸನಗರ :ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಮನ್ವಿತ್ ಗೆ 97.12% ಫಲಿತಾಂಶ
Spread the love

ಹೊಸನಗರ:ಪ್ರಿಲ್ 23ನೇ ಗುರುವಾರ ಕರ್ನಾಟಕ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಹೊಸನಗರದ ಹೋಲಿ ರಿಡೀಮರ್ ಶಾಲೆಯ ವಿದ್ಯಾರ್ಥಿ ಜೆ.ಸಿ.ಎಂ ರಸ್ತೆಯ ದಿ|| ಕೆ. ಶಂಕರರಾವ್–ರಾಜೀವಮ್ಮನವರ ಮೊಮ್ಮಗ ಹಾಗೂ ಹೊಸನಗರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಹೆಚ್.ಎಸ್. ನಾಗರಾಜ್–ಮಂಜುಳ ದಂಪತಿಯವರ ಪುತ್ರ ಮನ್ವಿತ್ ಅವರು 625ಕ್ಕೆ 607 ಅಂಕ ಪಡೆದು 97.12% ಪಡೆದಿರುತ್ತಾರೆ.

ಕನ್ನಡದಲ್ಲಿ 125ಕ್ಕೆ 124, ಇಂಗ್ಲಿಷ್‌ನಲ್ಲಿ 100ಕ್ಕೆ 95, ಹಿಂದಿ 100ಕ್ಕೆ 99, ಗಣಿತದಲ್ಲಿ 100ಕ್ಕೆ 93, ಸಮಾಜ ವಿಜ್ಞಾನದಲ್ಲಿ 100ಕ್ಕೆ 100 ಹಾಗೂ ವಿಜ್ಞಾನದಲ್ಲಿ 100ಕ್ಕೆ 96 ಅಂಕಗಳನ್ನು ಪಡೆದಿದ್ದಾರೆ.

img 20260110 wa00004621631989493342429 ಹೊಸನಗರ :ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಮನ್ವಿತ್ ಗೆ 97.12% ಫಲಿತಾಂಶ

ವಿದ್ಯಾರ್ಥಿಯ ಸಾಧನೆ:
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸಮಯದಲ್ಲಿ ಈ ವಿದ್ಯಾರ್ಥಿ ಕಳೆದ ಮೂರು ವರ್ಷಗಳಿಂದ ಬೆಳಿಗ್ಗೆ 5 ಗಂಟೆಯಿಂದ ಮನೆ ಮನೆಗೆ ಪತ್ರಿಕೆ ವಿತರಿಸಿ ನಂತರ ಶಾಲೆಗೆ ಹೋಗಿ ಈ ಸಾಧನೆ ಮಾಡಿರುವುದು ಹೆಮ್ಮೆ ವಿಷಯವಾಗಿದೆ.

ಅಭಿನಂದನೆ:
ಈ ವಿದ್ಯಾರ್ಥಿಯ ಸಾಧನೆಗೆ ಹೋಳಿ ರಿಡೀಮರ್ ಶಾಲೆಯ ಮುಖ್ಯ ಶಿಕ್ಷಕಿ ವಿಲ್ಮಾ ಪಿಂಟೋ ಹಾಗೂ ಸಹ ಶಿಕ್ಷಕರು, ಕೋಟೆಗಾರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶಶಿಧರ್ ನಾಯ್ಕ್, ಕೋಟೆಗಾರ್ ಯುವಕ ಸಂಘದ ಅಧ್ಯಕ್ಷ ಮಾವಿನಕೊಪ್ಪ ಸತೀಶ್, ಕುಟುಂಬದವರು ಅಭಿನಂದಿಸಿದ್ದಾರೆ.

ಇವರ ಈ ಸಾಧನೆಗೆ ನಾಡಿ ಮೀಡಿಯಾ ಹೌಸ್ ವತಿಯಿಂದ ಅಭಿನಂದನೆಗಳು.

17769547831463407538372817644522 ಹೊಸನಗರ :ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಮನ್ವಿತ್ ಗೆ 97.12% ಫಲಿತಾಂಶ
img 20260423 wa0056267001533798250359 ಹೊಸನಗರ :ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಮನ್ವಿತ್ ಗೆ 97.12% ಫಲಿತಾಂಶ

Leave a Reply

Your email address will not be published. Required fields are marked *