ರಿಪ್ಪನ್ ಪೇಟೆ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆಯು ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 98% ಫಲಿತಾಂಶ ದಾಖಲಿಸಿ ಗಮನಾರ್ಹ ಸಾಧನೆ ಮಾಡಿದೆ.
ಒಟ್ಟು 161 ವಿದ್ಯಾರ್ಥಿಗಳ ಪೈಕಿ 157 ಮಂದಿ ಉತ್ತೀರ್ಣರಾಗಿದ್ದು, ಇವರಲ್ಲಿ 18 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಕನ್ನಡ ಮಾಧ್ಯಮ ವಿಭಾಗ 98%, ಆಂಗ್ಲ ಮಾಧ್ಯಮ ಹಾಗೂ ಉರ್ದು ಮಾಧ್ಯಮ ಎರಡೂ 100% ಫಲಿತಾಂಶ ದಾಖಲಿಸಿದ್ದು ಶಾಲೆಯ ಸಾಧನೆಯನ್ನು ಮತ್ತಷ್ಟು ಎತ್ತಿ ಹಿಡಿದಿದೆ.

ಪ್ರಥಮ ಸ್ಥಾನ:
ವಿದ್ಯಾರ್ಥಿ ದೀಕ್ಷಿತ್ –
ಕನ್ನಡ: 122, ಇಂಗ್ಲಿಷ್: 95, ಹಿಂದಿ: 100, ಗಣಿತ: 99, ವಿಜ್ಞಾನ: 94, ಸಮಾಜ ವಿಜ್ಞಾನ: 98
ಒಟ್ಟು: 608/625 (97.28%)
ದ್ವಿತೀಯ ಸ್ಥಾನ:
ವೈಭವ್ ಎಸ್ –
ಕನ್ನಡ: 125, ಇಂಗ್ಲಿಷ್: 95, ಹಿಂದಿ: 95, ಗಣಿತ: 80, ವಿಜ್ಞಾನ: 91, ಸಮಾಜ ವಿಜ್ಞಾನ: 97
ಒಟ್ಟು: 583/625 (93.28%)
ತೃತೀಯ ಸ್ಥಾನ:
ಟೀನಾ ಎಸ್ –
ಕನ್ನಡ: 117, ಇಂಗ್ಲಿಷ್: 90, ಹಿಂದಿ: 96, ಗಣಿತ: 83, ವಿಜ್ಞಾನ: 85, ಸಮಾಜ ವಿಜ್ಞಾನ: 96
ಒಟ್ಟು: 568/625 (90.88%)
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಈ ಸಾಧನೆ, ಗುಣಮಟ್ಟದ ಶಿಕ್ಷಣಕ್ಕೆ ಶಾಲೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಈ ಸಾಧನೆಗೆ ಶಾಲೆಯ ಶಿಕ್ಷಕರು, ಪೋಷಕರು, ಎಸ್ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರ ಶ್ರಮ ಅಪಾರವಾಗಿದೆ. ಅಷ್ಟೇ ಅಲ್ಲದೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಯ ಮೇಲೆ ವಿಶೇಷ ಗಮನಹರಿಸಿ ಹೆಚ್ಚು ಒತ್ತು ನೀಡಿರುವುದು ಈ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ.
ಮಕ್ಕಳ ಈ ಅದ್ವಿತೀಯ ಸಾಧನೆಗೆ ನಾಡಿ ಮೀಡಿಯಾ ಹೌಸ್ ವತಿಯಿಂದ ಅಭಿನಂದನೆಗಳು
“ನಮ್ಮ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಈ ಬಾರಿ 98% ಫಲಿತಾಂಶ ಸಾಧಿಸಿರುವುದು ಅತ್ಯಂತ ಸಂತೋಷಕರ ಸಂಗತಿ. ಶಿಕ್ಷಕರ ಶ್ರಮ, ವಿದ್ಯಾರ್ಥಿಗಳ ಕಠಿಣ ಪರಿಶ್ರಮವೂ ಈ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ. ಪೋಷಕರ ಸಹಕಾರವೂ ಶ್ಲಾಘನೀಯ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೆಚ್ಚಿನ ಒತ್ತು ನೀಡಿ ಶ್ರಮಿಸಿದ್ದಾರೆ ಅವರ ಪಾತ್ರವೂ ಅಪಾರ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಫಲಿತಾಂಶ ಸಾಧಿಸಲು ಶಾಲೆ ಶ್ರಮಿಸುತ್ತದೆ.”
- ಚಂದ್ರು, ಅಧ್ಯಕ್ಷರು,SDMC

















Leave a Reply