ನವದೆಹಲಿ: ಲೋಕಸಭೆಯಲ್ಲಿ ಬಹುನಿರೀಕ್ಷಿತ ಮಹಿಳಾ ಮೀಸಲಾತಿ ಮಸೂದೆಯು ಸೋಲನ್ನನುಭವಿಸಿದ ಹಿನ್ನೆಲೆಯಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ದೇಶದ ತಾಯಂದಿರು ಮತ್ತು ಸಹೋದರಿಯರಲ್ಲಿ ಕೈಮುಗಿದು ಕ್ಷಮೆಯಾಚಿಸಿದರು. ಇದೇ ವೇಳೆ ಮಸೂದೆಯನ್ನು ಬೆಂಬಲಿಸದ ವಿರೋಧ ಪಕ್ಷಗಳ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದರು.
ಶನಿವಾರ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು ಸಾಂವಿಧಾನಿಕ ತಿದ್ದುಪಡಿ ಮಸೂದೆಯು ಅಂಗೀಕಾರವಾಗಲು ಅಗತ್ಯವಿದ್ದ ಮೂರನೇ ಎರಡರಷ್ಟು (2/3) ಬಹುಮತವನ್ನು ಪಡೆಯಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ವಿರೋಧ ಪಕ್ಷಗಳು ಮಸೂದೆಯ ವಿರುದ್ಧ ಮತ ಚಲಾಯಿಸಿದ್ದರಿಂದ ಈ ಮಹತ್ವದ ಮಸೂದೆಯು ವಿಫಲಗೊಂಡಿತು.
“ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳ ಸ್ವಾರ್ಥ ರಾಜಕಾರಣವು ಮಹಿಳೆಯರ ಹಕ್ಕುಗಳನ್ನು ಕಸಿದುಕೊಂಡಿದೆ,”.
“ಸಂಸತ್ತಿನಲ್ಲಿ ಮಸೂದೆಯನ್ನು ಸೋಲಿಸಿದಾಗ ಕಾಂಗ್ರೆಸ್, ಡಿಎಂಕೆ, ತೃಣಮೂಲ ಮತ್ತು ಸಮಾಜವಾದಿ ಪಕ್ಷದ ನಾಯಕರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ದೇಶದ ಮಹಿಳೆಯರಿಗೆ ಸಿಗಬೇಕಾದ ಹಕ್ಕನ್ನು ಕಿತ್ತುಕೊಂಡು ಅವರು ಸಂಭ್ರಮಿಸಿದ್ದಾರೆ. ಇದು ಮಹಿಳೆಯರ ಸ್ವಾಭಿಮಾನದ ಮೇಲಿನ ದಾಳಿ,” ಎಂದು ಅವರು ಕಿಡಿಕಾರಿದರು.
ಮಹಿಳೆ ಏನನ್ನಾದರೂ ಮರೆಯಬಹುದು, ಆದರೆ ತನಗೆ ಆದ ಅನ್ಯಾಯವನ್ನು ಅವಳು ಎಂದಿಗೂ ಮರೆಯುವುದಿಲ್ಲ,” ಸಂಸತ್ತಿನಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ರ್ತನೆಯು ಪ್ರತಿಯೊಬ್ಬ ಮಹಿಳೆಯ ಹೃದಯದಲ್ಲಿ ಶಾಶ್ವತವಾದ ನೋವಾಗಿ ಉಳಿಯುತ್ತದೆ’ ಎಂದು ಪ್ರತಿಪಕ್ಷಗಳಿಗೆ ಎಚ್ಚರಿಕೆ ನೀಡಿದರು.
ನಿನ್ನೆ ಸಂಸತ್ತಿನಲ್ಲಿ ನಾರಿ ಶಕ್ತಿ ವಂದನಾ ತಿದ್ದುಪಡಿಯನ್ನು ವಿರೋಧಿಸಿದ ಪಕ್ಷಗಳಿಗೆ ನಾನು ಸ್ಪಷ್ಟವಾಗಿ ಹೇಳುತ್ತೇನೆ: ಇವರು (ವಿರೋಧ ಪಕ್ಷಗಳು) ಮಹಿಳಾ ಶಕ್ತಿಯನ್ನು ಲಘುವಾಗಿ ಪರಿಗಣಿಸುತ್ತಿದ್ದಾರೆ. ಇಪ್ಪತ್ತೊಂದನೇ ಶತಮಾನದ ಮಹಿಳೆಯರು ದೇಶದ ಪ್ರತಿಯೊಂದು ವಿದ್ಯಮಾನವನ್ನು ಹತ್ತಿರದಿಂದ ಗಮನಿಸುತ್ತಿದ್ದಾರೆ ಎಂಬುದನ್ನು ಅವರು ಮರೆಯುತ್ತಿದ್ದಾರೆ. ಅವರು ಇವರ ಉದ್ದೇಶಗಳನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ ಮತ್ತು ಸತ್ಯದ ಬಗ್ಗೆ ಪೂರ್ಣವಾಗಿ ತಿಳಿದಿದ್ದಾರೆ. ಆದ್ದರಿಂದ, ಮಹಿಳಾ ಮೀಸಲಾತಿಯನ್ನು ವಿರೋಧಿಸುವ ಮೂಲಕ ತಾವು ಮಾಡಿದ ಪಾಪಕ್ಕೆ ವಿರೋಧ ಪಕ್ಷದವರು ಖಂಡಿತವಾಗಿಯೂ ಶಿಕ್ಷೆ ಅನುಭವಿಸುತ್ತಾರೆ” ಎಂದಿದ್ದಾರೆ.
“ಕಾಂಗ್ರೆಸ್, ಎಸ್ಪಿ, ಡಿಎಂಕೆ, ಟಿಎಂಸಿ ಮತ್ತು ಇತರ ಪಕ್ಷಗಳು ಇಷ್ಟು ವರ್ಷಗಳಿಂದ ಅದೇ ನೆಪವನ್ನು ಹೇಳುತ್ತಾ ಬಂದಿವೆ. ಕೆಲವು ತಾಂತ್ರಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು, ಅವರು ಮಹಿಳೆಯರ ಹಕ್ಕುಗಳನ್ನು ಲೂಟಿ ಮಾಡಿದ್ದಾರೆ. ದೇಶವು ಈ ಅಸಹ್ಯಕರ ರಾಜಕೀಯ ಮಾದರಿಯನ್ನು ಮತ್ತು ಇದರ ಹಿಂದಿನ ಕಾರಣವನ್ನು ಅರ್ಥಮಾಡಿಕೊಂಡಿದೆ,” ಎಂದು ಅವರು ಆರೋಪಿಸಿದರು.















Leave a Reply