“ಜಾಗತಿಕ ಸಂಕಷ್ಟಗಳ ನಡುವೆಯೂ ಮೋದಿ ಸರ್ಕಾರದಿಂದ ರೈತರ ಹಿತರಕ್ಷಣೆ: ರಸಗೊಬ್ಬರದಲ್ಲಿ ಆತ್ಮನಿರ್ಭರದತ್ತ ಭಾರತ ಬಲಿಷ್ಠ ಹೆಜ್ಜೆ” – ಸಂಸದ ಬಿ.ವೈ.ರಾಘವೇಂದ್ರ

FB IMG 1774450490308 "ಜಾಗತಿಕ ಸಂಕಷ್ಟಗಳ ನಡುವೆಯೂ ಮೋದಿ ಸರ್ಕಾರದಿಂದ ರೈತರ ಹಿತರಕ್ಷಣೆ: ರಸಗೊಬ್ಬರದಲ್ಲಿ ಆತ್ಮನಿರ್ಭರದತ್ತ ಭಾರತ ಬಲಿಷ್ಠ ಹೆಜ್ಜೆ" - ಸಂಸದ ಬಿ.ವೈ.ರಾಘವೇಂದ್ರ
Spread the love

ಉತ್ಪಾದನೆ ಬಲವರ್ಧನೆ, ಬೆಲೆ ನಿಯಂತ್ರಣ, ಅಡೆತಡೆರಹಿತ ಸರಬರಾಜು; ಪ್ರಸಕ್ತ ಸಂಸತ್ ಅಧಿವೇಶನದಲ್ಲಿ ಬಿ.ವೈ.ರಾಘವೇಂದ್ರ ಅವರಿಗೆ ಕೇಂದ್ರ ಸರ್ಕಾರದಿಂದ ಮಾಹಿತಿ

ನವದೆಹಲಿ: ಕೋವಿಡ್ ಮಹಾಮಾರಿಯಿಂದ ಆರಂಭವಾಗಿ ಇಂದಿನ ಪಶ್ಚಿಮ ಏಷ್ಯಾ ಸಂಕಷ್ಟದವರೆಗೆ ಜಾಗತಿಕ ಸರಬರಾಜು ವ್ಯವಸ್ಥೆ ಗಂಭೀರವಾಗಿ ಅಸ್ತವ್ಯಸ್ತಗೊಂಡಿರುವ ಸಂದರ್ಭದಲ್ಲಿ, ಭಾರತದ ಕೃಷಿ ವಲಯ ಮತ್ತು ಅನ್ನದಾತ ರೈತರ ಹಿತ ರಕ್ಷಿಸುವಲ್ಲಿ ಕೇಂದ್ರದ ಪ್ರಧಾನಿ ಶ್ರೀ ನರೇಂದ್ರ ಮೋದಿ ಸರ್ಕಾರ ದೃಢವಾದ ಕ್ರಮಗಳನ್ನು ಕೈಗೊಂಡಿದೆ. ಈ ಕುರಿತು ಸಂಸತ್ತಿನಲ್ಲಿ ಪ್ರಸ್ತಾಪಿಸಿದ ಶಿವಮೊಗ್ಗ ಕ್ಷೇತ್ರದ ಸಂಸದ ಬಿ. ವೈ. ರಾಘವೇಂದ್ರ ಅವರಿಗೆ ಪ್ರತಿಕ್ರಿಯಿಸಿರುವ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ರಾಜ್ಯ ಸಚಿವರಾದ ಶ್ರೀಮತಿ ಅನುಪ್ರಿಯಾ ಪಟೇಲ್, ವಿಶೇಷವಾಗಿ ಖರೀಫ್ ಹಂಗಾಮಿನಲ್ಲಿ ರೈತರಿಗೆ ರಸಗೊಬ್ಬರಗಳ ಲಭ್ಯತೆ ಯಾವುದೇ ರೀತಿಯಲ್ಲಿ ಅಡಚಣೆಯಾಗದಂತೆ ನೋಡಿಕೊಳ್ಳುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.

img 20260110 wa00006548755848150162819 "ಜಾಗತಿಕ ಸಂಕಷ್ಟಗಳ ನಡುವೆಯೂ ಮೋದಿ ಸರ್ಕಾರದಿಂದ ರೈತರ ಹಿತರಕ್ಷಣೆ: ರಸಗೊಬ್ಬರದಲ್ಲಿ ಆತ್ಮನಿರ್ಭರದತ್ತ ಭಾರತ ಬಲಿಷ್ಠ ಹೆಜ್ಜೆ" - ಸಂಸದ ಬಿ.ವೈ.ರಾಘವೇಂದ್ರ

ರಸಗೊಬ್ಬರ ಕ್ಷೇತ್ರದಲ್ಲಿ “ಆತ್ಮನಿರ್ಭರ ಭಾರತ”ದತ್ತ ನಡೆದಿರುವ ಮಹತ್ವದ ಪರಿವರ್ತನೆಯನ್ನು ಸ್ಪಷ್ಟಪಡಿಸುವ ಜೊತೆಗೆ ದೇಶೀಯ ಉತ್ಪಾದನೆಗೆ ನೀಡಿರುವ ಉತ್ತೇಜನದಿಂದ, ಯೂರಿಯಾ ಉತ್ಪಾದನೆ 2014-15ರಲ್ಲಿ 225 ಲಕ್ಷ ಮೆಟ್ರಿಕ್ ಟನ್ನಿನಿಂದ 2023-24ರಲ್ಲಿ ದಾಖಲೆಯ 314.07 ಲಕ್ಷ ಮೆಟ್ರಿಕ್ ಟನ್ನಿಗೆ ಏರಿಕೆಯಾಗಿದೆ, 2024-25ರಲ್ಲಿ 306.67 ಲಕ್ಷ ಮೆಟ್ರಿಕ್ ಟನ್ನಿನ ಉತ್ಪಾದನೆ ಸಾಧಿಸಲಾಗಿದೆ. ಹೊಸದಾಗಿ ಆರು ಯೂರಿಯಾ ಕಾರ್ಖಾನೆಗಳನ್ನು ಪ್ರಾರಂಭಿಸುವ ಮೂಲಕ ಉತ್ಪಾದನಾ ಸಾಮರ್ಥ್ಯದಲ್ಲಿ ಗಣನೀಯ ಹೆಚ್ಚಳವಾಗಿದ್ದು, ಡಿಎಪಿ ಹಾಗೂ ಎನ್‌ಪಿಕೆ ರಸಗೊಬ್ಬರಗಳ ಉತ್ಪಾದನೆಯನ್ನೂ  ಬಲಪಡಿಸಲಾಗಿದೆ ಎಂದು ಕೇಂದ್ರ ಸಚಿವೆ ಮಾಹಿತಿ ನೀಡಿದ್ದಾರೆ. ಕೋವಿಡ್ ಅವಧಿಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಯೂರಿಯಾ ಬೆಲೆ ಒಂದು ಚೀಲಕ್ಕೆ ಸುಮಾರು 3000 ರೂ. ತಲುಪಿದ್ದರೂ, ಭಾರತದಲ್ಲಿ ರೈತರಿಗೆ ಅದೇ ಯೂರಿಯಾ ಸುಮಾರು 300 ರೂ.ಗಳಿಗೆ ಲಭ್ಯವಾಗುವಂತೆ ಕೇಂದ್ರ ಸರ್ಕಾರದ ಕ್ರಮವನ್ನು ಉಲ್ಲೇಖಿಸಿ, ಇದು ಸರ್ಕಾರದ ರೈತಪರ ನಿಲುವಿನ ಸ್ಪಷ್ಟ ಉದಾಹರಣೆಯಾಗಿದೆ. ಜಾಗತಿಕ ಬೆಲೆ ಏರಿಕೆಗಳ ನಡುವೆಯೂ ರೈತರ ಮೇಲೆ ಭಾರ ಬೀಳದಂತೆ ಕೇಂದ್ರ ಸರ್ಕಾರ ನಿರಂತರವಾಗಿ ಬೆಂಬಲ ನೀಡುತ್ತಲೇ ಬಂದಿದೆ ಎಂದಿದ್ದಾರೆ.

img 20260324 wa00577562075966563096040 "ಜಾಗತಿಕ ಸಂಕಷ್ಟಗಳ ನಡುವೆಯೂ ಮೋದಿ ಸರ್ಕಾರದಿಂದ ರೈತರ ಹಿತರಕ್ಷಣೆ: ರಸಗೊಬ್ಬರದಲ್ಲಿ ಆತ್ಮನಿರ್ಭರದತ್ತ ಭಾರತ ಬಲಿಷ್ಠ ಹೆಜ್ಜೆ" - ಸಂಸದ ಬಿ.ವೈ.ರಾಘವೇಂದ್ರ

ರಾಜ್ಯಗಳಿಗೆ ರಸಗೊಬ್ಬರಗಳ ಸರಬರಾಜು ಸುಗಮ: ರಸಗೊಬ್ಬರಗಳ ಸರಬರಾಜನ್ನು ಸುಗಮಗೊಳಿಸಲು ಕೇಂದ್ರ ಸರ್ಕಾರ ಬಹುಪದರ ವ್ಯವಸ್ಥೆಯನ್ನು ರೂಪಿಸಿದೆ. ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿ ಮುಂಗಡವಾಗಿ ಬೇಡಿಕೆಯನ್ನು ಅಂದಾಜು ಮಾಡುವುದು, ತಿಂಗಳವಾರು ಸರಬರಾಜು ಯೋಜನೆ ರೂಪಿಸುವುದು, ಮತ್ತು ಇಂಟಿಗ್ರೇಟೆಡ್ ಫರ್ಟಿಲೈಸರ್ ಮ್ಯಾನೇಜ್ಮೆಂಟ್ ಸಿಸ್ಟಮ್ ಮೂಲಕ ನೈಜ ಸಮಯದಲ್ಲಿ ಮೇಲ್ವಿಚಾರಣೆ ನಡೆಸುವುದರಿಂದ ದೇಶದಾದ್ಯಂತ, ಕರ್ನಾಟಕ ಸೇರಿದಂತೆ, ಅಗತ್ಯಕ್ಕಿಂತ ಹೆಚ್ಚು ಲಭ್ಯತೆ ಇರುವ ಸ್ಥಿತಿ ನಿರ್ಮಾಣವಾಗಿದೆ. ಡೈರೆಕ್ಟ್ ಬೆನೆಫಿಟ್ ಟ್ರಾನ್ಸ್‌ಫರ್ ವ್ಯವಸ್ಥೆಯ ಮೂಲಕ ಪಾರದರ್ಶಕತೆ ಹೆಚ್ಚಳವಾಗಿದ್ದು, ನಿಜವಾದ ರೈತರಿಗೆ ಮಾತ್ರ ರಸಗೊಬ್ಬರ ತಲುಪುವಂತೆ ವ್ಯವಸ್ಥೆ ರೂಪಿಸಲಾಗಿದೆ ಎಂದು ಕೇಂದ್ರ ಸಚಿವರು ಸಂಸದ ರಾಘವೇಂದ್ರ ಅವರಿಗೆ ತಿಳಿಸಿದ್ದಾರೆ. ಇದೇ ವೇಳೆ “ಮೇಡ್ ಇನ್ ಇಂಡಿಯಾ” ನ್ಯಾನೋ ಯೂರಿಯಾ ಉತ್ತೇಜನ, ಪೋಷಕಾಂಶ ಆಧಾರಿತ ಸಬ್ಸಿಡಿ (NBS) ಯೋಜನೆಯ ವಿಸ್ತರಣೆ, ಮತ್ತು ದೇಶೀಯ ಉತ್ಪಾದನೆಗೆ ನೀಡುತ್ತಿರುವ ಪ್ರೋತ್ಸಾಹವು ರಸಗೊಬ್ಬರ ಕ್ಷೇತ್ರದಲ್ಲಿ ದೀರ್ಘಕಾಲಿಕ ಸ್ವಾವಲಂಬನೆಯನ್ನು ಬಲಪಡಿಸುತ್ತಿವೆ. ಇದು ಕೃಷಿಯ ಸ್ಥಿರತೆ ಮತ್ತು ಉತ್ಪಾದಕತೆ ಹೆಚ್ಚಿಸಲು ಸಹಕಾರಿಯಾಗಿದೆ ಎಂದು ಸಚಿವರು ಹೇಳಿದ್ದಾರೆ.

img 20260111 wa00026517457082001570479 "ಜಾಗತಿಕ ಸಂಕಷ್ಟಗಳ ನಡುವೆಯೂ ಮೋದಿ ಸರ್ಕಾರದಿಂದ ರೈತರ ಹಿತರಕ್ಷಣೆ: ರಸಗೊಬ್ಬರದಲ್ಲಿ ಆತ್ಮನಿರ್ಭರದತ್ತ ಭಾರತ ಬಲಿಷ್ಠ ಹೆಜ್ಜೆ" - ಸಂಸದ ಬಿ.ವೈ.ರಾಘವೇಂದ್ರ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸದ ಬಿ. ವೈ. ರಾಘವೇಂದ್ರ, “ಜಾಗತಿಕ ಸಂಕಷ್ಟಗಳಿಂದ ಸರಬರಾಜು ವ್ಯವಸ್ಥೆಗಳು ಅಸ್ತವ್ಯಸ್ತವಾಗುತ್ತಿರುವ ಈ ಸಂದರ್ಭದಲ್ಲಿ, ಭಾರತ ಸರ್ಕಾರ ತನ್ನ ರೈತರನ್ನು ರಕ್ಷಿಸುವಲ್ಲಿ ದೃಢಸಂಕಲ್ಪದಿಂದ ಕಾರ್ಯನಿರ್ವಹಿಸುತ್ತಿದೆ. ಕೈಗೆಟುಕುವ ಬೆಲೆಯಲ್ಲಿ ರಸಗೊಬ್ಬರ ಒದಗಿಸುವುದು ಕೇವಲ ಆರ್ಥಿಕ ವಿಚಾರವಲ್ಲ, ಅದು ನಮ್ಮ ರೈತರ ಮತ್ತು ದೇಶದ ಆಹಾರ ಭದ್ರತೆಗೆ ನೀಡಿರುವ ಬದ್ಧತೆ, ಆತ್ಮನಿರ್ಭರ ಭಾರತದತ್ತ ದೃಢ ಹೆಜ್ಜೆಯಾಗಿದೆ”_ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ, ದಿಟ್ಟ ನಿರ್ಧಾರಗಳು, ನೀತಿ ಸುಧಾರಣೆಗಳು, ತಂತ್ರಜ್ಞಾನ ಬಳಕೆ ಮತ್ತು ದೇಶೀಯ ಉತ್ಪಾದನಾ ಸಾಮರ್ಥ್ಯದ ವೃದ್ಧಿಯಿಂದ ಭಾರತ ಇಂದು ಜಾಗತಿಕ ಅಸ್ಥಿರತೆಯನ್ನು ಎದುರಿಸುವ ಶಕ್ತಿಯನ್ನು ಹೊಂದಿದೆ. ರಸಗೊಬ್ಬರ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಸಾಧಿಸುವ ದಾರಿಯಲ್ಲಿ ದೇಶವು ದೃಢವಾಗಿ ಸಾಗುತ್ತಿದ್ದು, ಇದು ಭಾರತೀಯ ಕೃಷಿಯ ಭವಿಷ್ಯವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಸಂಸದರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *