ಉತ್ಸವದಿಂದ ವ್ಯಾಪಾರೋದ್ಯಮ ಚೇತರಿಕೆ : ಸಂಸದ ಬಿ.ವೈ.ರಾಘವೇಂದ್ರ

IMG 20260324 WA0054 ಉತ್ಸವದಿಂದ ವ್ಯಾಪಾರೋದ್ಯಮ ಚೇತರಿಕೆ : ಸಂಸದ ಬಿ.ವೈ.ರಾಘವೇಂದ್ರ
Spread the love

ಮಲೆನಾಡು ಉತ್ಸವಕ್ಕೆ ಚಾಲನೆ ನೀಡಿದ ಸಂಸದ ರಾಘವೇಂದ್ರ

ಶಿವಮೊಗ್ಗ : ಲೆನಾಡು ಉತ್ಸವದಿಂದ ನೂರಾರು ಕೈಗಳಿಗೆ ಕೆಲಸ ದೊರೆಯುವ ಜೊತೆಗೆ ವ್ಯಾಪಾರೋದ್ಯಮ ಚೇತರಿಕೆ ಉಂಟಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

img 20260110 wa00006157824094530904807 ಉತ್ಸವದಿಂದ ವ್ಯಾಪಾರೋದ್ಯಮ ಚೇತರಿಕೆ : ಸಂಸದ ಬಿ.ವೈ.ರಾಘವೇಂದ್ರ

ನಗರದ ಫ್ರೀಡಂ ಪಾರ್ಕ್ (ಅಲ್ಲಮ ಪ್ರಭು ಮೈದಾನ)ನಲ್ಲಿ ಇಂಡಿಯನ್ ಎಂಟರ್‌ಟೇನರ್‌ ಸಂಸ್ಥೆ ಆಯೋಜಿಸಿರುವ ಮಲೆನಾಡು ಉತ್ಸವ ಉದ್ಘಾಟಿಸಿ ಮಾತನಾಡಿ, ಸ್ಥಳೀಯ ವ್ಯಾಪಾರಿಗಳಿಗೆ ಹೊಸ ಅವಕಾಶಗಳು ದೊರೆಯಲಿವೆ. ಸಂಸ್ಥೆಯು ಕಳೆದ 45 ವರ್ಷಗಳಿಂದ ದೇಶದಾದ್ಯಂತ ಉತ್ಸವಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಭಾರತದಲ್ಲಿ ಮೊದಲ ಬಾರಿಗೆ ವಿಶ್ವದ ಅತಿದೊಡ್ಡ ಕಾಶ್ಮೀರಿ ಅರಣ್ಯದ ಪ್ರತಿಕೃತಿ ಮತ್ತು ಚಾಕೋಲೇಟ್ ಜಲಪಾತವನ್ನು ಸೃಷ್ಟಿಸಲಾಗಿದೆ. ಇದು ಮಲೆನಾಡು ಉತ್ಸವದ ಪ್ರಮುಖ ಆಕರ್ಷಣೆಯಾಗಿದೆ. ಇದೀಗ ಬೇಸಿಗೆ ರಜೆ ಆರಂಭವಾಗುತ್ತಿದ್ದು, ಪೋಷಕರು ಮಕ್ಕಳೊಂದಿಗೆ ಕುಂಟುಂಬ ಸಮೇತರಾಗಿ ಆಗಮಿಸಿ, ವೀಕ್ಷಿಸಿ ಮನರಂಜನೆ ಪಡೆಯಬಹುದು ಎಂದರು.

img 20260111 wa00025141124681173997204 ಉತ್ಸವದಿಂದ ವ್ಯಾಪಾರೋದ್ಯಮ ಚೇತರಿಕೆ : ಸಂಸದ ಬಿ.ವೈ.ರಾಘವೇಂದ್ರ

ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ಸುನಿಲ್ ನಾಯರ್, ಎಚ್ಚರಿಕೆ ಪತ್ರಿಕೆಯ ಸಂಪಾದಕ ವೈ.ಕೆ. ಸೂರ್ಯನಾರಾಯಣ ಯುವ ನಾಯಕ ಮಂಗೋಟೆ ರುದ್ರೇಶ್, ದಿವಾಕರ ಶೆಟ್ಟಿ, ರಾಜೇಶ್ ಕಾಮತ್ ಮತ್ತಿತರರು ಹಾಜರಿದ್ದರು.

ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಮುಗಿಯುವ ಕಾಲವಾಗಿದ್ದು, ಬೇಸಿಗೆ ರಜೆಯಲ್ಲಿ ಕುಟುಂಬ ಸಮೇತರಾಗಿ ಭೇಟಿ ನೀಡಲು ಉತ್ತಮ ಅವಕಾಶವಿದೆ. ಮಕ್ಕಳಿಗೆ ಮನರಂಜನೆ ದೊರೆಯಲಿದೆ. ಶಿವಮೊಗ್ಗ ಜಿಲ್ಲೆಯ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು.

- ಬಿ.ವೈ. ರಾಘವೇಂದ್ರ, ಸಂಸದ
ನಮ್ಮ ಸಂಸ್ಥೆಯು ಈಗಾಗಲೇ ದೇಶದ ವಿವಿಧೆಡೆ ಅತ್ಯಂತ ಯಶಸ್ವಿ ಪ್ರದರ್ಶನ, ಉತ್ಸವ ಹಾಗೂ ಎಕ್ಷದಹನ್‌ ಗಳನ್ನು ನೀಡಿದೆ. ಜಿಲ್ಲೆಯ ನಾಗಕರಿಕರು ಈ ಮಲೆನಾಡು ಉತ್ಸವದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂಬುದು ನನ್ನ ವಿನಂತಿ.
- ಮಾಸ್ತಿ ಚೈತನ್ಯ ಅಯ್ಯಂಗಾರ್, ನಿರ್ದೇಶಕ, ಇಂಡಿಯನ್, ಎಂಟರ್ ರ್ಟನರ್ ಸಂಸ್ಥೆ
img 20260324 wa0030881279057177941646 ಉತ್ಸವದಿಂದ ವ್ಯಾಪಾರೋದ್ಯಮ ಚೇತರಿಕೆ : ಸಂಸದ ಬಿ.ವೈ.ರಾಘವೇಂದ್ರ

Leave a Reply

Your email address will not be published. Required fields are marked *