ಯಕ್ಷ ಭೀಷ್ಮ  ಕೆ.ಗೋವಿಂದ ಭಟ್ ನಿಧನ; ಶಾಸಕ ಆರಗ  ಸಂತಾಪ

Blue and Red Voter Education Banner 20260321 123826 0000 scaled ಯಕ್ಷ ಭೀಷ್ಮ  ಕೆ.ಗೋವಿಂದ ಭಟ್ ನಿಧನ; ಶಾಸಕ ಆರಗ  ಸಂತಾಪ
Spread the love

ತೀರ್ಥಹಳ್ಳಿ:ಕ್ಷಗಾನ ಲೋಕದ ಮೇರು ಪರ್ವತ, ಧರ್ಮಸ್ಥಳ ಮೇಳದ ಅಭಿಜಾತ ಕಲಾವಿದ ಕೆ.ಗೋವಿಂದ ಭಟ್ಟರ ನಿಧನಕ್ಕೆ ಶಾಸಕ ಆರಗ ಜ್ಞಾನೇಂದ್ರ ಕಂಬನಿ ಮಿಡಿದಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ಹೆಮ್ಮೆಯ ಕಲಾವಿದ, ರಾಷ್ಟ್ರೀಯವಾದಿ ಚಿಂತಕ,ತಾಳ ಮದ್ದಳೆಯಲ್ಲಿ ಪ್ರಕರ ವಾಕ್ಪಟು ಗೋವಿಂದ ಭಟ್ಟರ ನಿಧನ ಯಕ್ಷರಂಗಕ್ಕೆ ಮಾತ್ರವಲ್ಲ ಸಮಾಜಕ್ಕೆ ಆದ ದೊಡ್ಡ ನಷ್ಟ ಎಂದಿರುವ ಶಾಸಕರು.

ನನ್ನ ಜೀವನದಲ್ಲಿ ನಾನೂ ಗೋವಿಂದ ಭಟ್ಟರು ಪಾತ್ರವಹಿಸಿದ ಹತ್ತಾರು ಯಕ್ಷಗಾನ ಮತ್ತು ತಾಳಮದ್ದಳೆ ನೋಡಿದ್ದೇನೆ ಆ ಎಲ್ಲಾ ಕ್ಷಣಗಳು ಕೂಡ ನನಗೆ ಅದ್ಭುತ ಎನಿಸಿವೆ,ಇಂತಹ ಮಹಾನ್ ಕಲಾವಿದ ನಮ್ಮ ತಾಲೂಕಿನವರು ಎನ್ನುವ ಹೆಮ್ಮೆಯ ಭಾವ ಎಲ್ಲರಿಗೂ ಆ ಕ್ಷಣಗಳಲ್ಲಿ ಅನಿಸಿದ್ದಿದೆ, ತಾಳಮದ್ದಳೆಯಲ್ಲ0ತು ಅವರ ಪಾಂಡಿತ್ಯಕ್ಕೆ ಅವರೇ ಸಾಟಿಯಾಗಿದ್ದರು.

ಕುಂಬ್ಳೆ ಸುಂದರ ರಾಯರು ಮತ್ತು ಭಟ್ಟರು ಎದುರು ಬದುರು ಇದ್ದಾಗ  ರಾಯರ ಪ್ರಾಸ ಬದ್ದ ಮಾತುಗಾರಿಕೆ, ಭಟ್ಟರ ನಿರರ್ಗಳವಾದ ಪಾಂಡಿತ್ಯ ಭರಿತ ಮಾತು  ನೋಡಿ ಕೇಳಿದವರಿಗೆ ಅಬ್ಬಾ ಎನಿಸದೇ ಇರದು, ಅಲ್ಲಿದ್ದವರು ಮಾತ್ರ ಆ ಆನಂದವನ್ನು ಅನುಭವಿಸಿರಲು ಸಾಧ್ಯ

 ಇಂತಹ ಶ್ರೇಷ್ಠ ಕಲಾವಿದ ನಮ್ಮನ್ನಗಲಿದ್ದಾರೆ. ಈ ಅಗಲಿಕೆಯಿಂದ ಯಕ್ಷ ರಂಗ ನಿಜವಾಗಿಯೂ ಬಡವಾಗಿದೆ, ಆ ರೀತಿಯ ಕಲಾವಿದರು ಮತ್ತೆ ಮತ್ತೆ ಹುಟ್ಟಿ ಬರಲಿ ಎಂದು ಆಶೀಸೋಣ. ಅವರ ಪಾಂಡಿತ್ಯಕ್ಕೆ ಪ್ರಶಸ್ತಿ ಸಮ್ಮಾನಗಳು ಕಡಿಮೆಯೇ ಆಗಿದ್ದರು ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಸೇರಿದಂತೆ ಹಲವು ಪ್ರಶಸ್ತಿಗಳ ಗೌರವ ಸನ್ಮಾನ ಪಡೆದಿದ್ದ ಭಟ್ಟರು ನನ್ನ ಸಾರ್ವಜನಿಕ ಬದುಕಿನ ಮಾರ್ಗದರ್ಶಕರಾಗಿದ್ದರು ಎನ್ನುವ ಹೆಮ್ಮೆ ನನಗಿದೆ, ಹತ್ತು ದಿನಗಳ ಹಿಂದೆ ನಾನು ಮತ್ತು ಹೆದ್ದೂರು ನವೀನ ಕಾನೂಕೊಪ್ಪ ಶಿವು ಭಟ್ಟರ ಮನೆಗೆ ಭೇಟಿ ನೀಡಿ ಅರೋಗ್ಯ ವಿಚಾರಿಸಿ ತುಂಬಾ ಹೊತ್ತು ಕುಳಿತು ಬಂದಿದ್ದೆವು, ಧ್ವನಿಯಲ್ಲೇ ಜ್ಞಾನೇಂದ್ರ ಎಂದು ಪರಿಚಯ ಹಿಡಿದಿದ್ದರು.

img 20260321 wa00087969712854405069255 ಯಕ್ಷ ಭೀಷ್ಮ  ಕೆ.ಗೋವಿಂದ ಭಟ್ ನಿಧನ; ಶಾಸಕ ಆರಗ  ಸಂತಾಪ

ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ,ಅವರಾತ್ಮಕ್ಕೆ ಶಾಂತಿ ದೊರೆಯಲಿ ಮತ್ತು  ಅವರಂತ ಮೇರು ಕಲಾವಿದ ಮತ್ತೆ ಹುಟ್ಟಿ  ಬರುವಂತಾಗಲಿ ಎಂದು ಶಾಸಕರು ತಮ್ಮ ಸಂತಾಪ ಸೂಚಿಸಿದ್ದಾರೆ..

Leave a Reply

Your email address will not be published. Required fields are marked *