ಮನೆ ಬಾಗಿಲು ಮುರಿದು ಕಳ್ಳತನ: ಗ್ರಾಮಸ್ಥರ ಚಾಣಾಕ್ಷತನದಿಂದ ಆರೋಪಿ ಬಂಧನ

Blue and Red Voter Education Banner 20260320 165117 0000 scaled ಮನೆ ಬಾಗಿಲು ಮುರಿದು ಕಳ್ಳತನ: ಗ್ರಾಮಸ್ಥರ ಚಾಣಾಕ್ಷತನದಿಂದ ಆರೋಪಿ ಬಂಧನ
Spread the love

70 ಸಾವಿರ ಮೌಲ್ಯದ ಚಿನ್ನಾಭರಣ ಕಳವು – 12.21 ಗ್ರಾಂ ಚಿನ್ನ ವಶ

ಆನಂದಪುರ:ನೆ ಬಾಗಿಲು ಮುರಿದು ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದ ಪ್ರಕರಣದಲ್ಲಿ ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಆರೋಪಿಯನ್ನು ಬಂಧಿಸಿದ ಘಟನೆ ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಉಳ್ಳೂರಿನ ಸಮೀಪದ ಬ್ರಾಹ್ಮಣ ಮಂಚಾಲೆ ಗ್ರಾಮದ ನಿವಾಸಿ ಶ್ರೀಮತಿ ನಾಗರತ್ನ ಅವರು ಫೆಬ್ರವರಿ 19 ರಂದು ಮಧ್ಯಾಹ್ನ ಮನೆಯಿಂದ ಹೊರಗೆ ಹೋದ ವೇಳೆ, ಅನಾಮಧೇಯ ಕಳ್ಳರು ಮನೆ ಬಾಗಿಲು ಮುರಿದು ಒಳನುಗ್ಗಿ ಸುಮಾರು ₹70,000 ಮೌಲ್ಯದ 8.5 ಗ್ರಾಂ ಚಿನ್ನಾಭರಣಗಳು ಹಾಗೂ ₹7,000 ನಗದು ಕಳವು ಮಾಡಿ ಪರಾರಿಯಾಗಿದ್ದರು. ಈ ಕುರಿತು ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಈ ನಡುವೆ, ಅದೇ ಗ್ರಾಮದಲ್ಲಿ ಮತ್ತೊಮ್ಮೆ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ಗಮನಿಸಿ, ಸಮಯಪ್ರಜ್ಞೆ ಮೆರೆದು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿಯನ್ನು ಹೊಸನಗರ ತಾಲೂಕಿನ ಸಂತೋಷ್ ಕುಮಾರ್ ಕೆ.ಆರ್ (43) ಎಂದು ಗುರುತಿಸಲಾಗಿದೆ.


ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿಯು ಕಳ್ಳತನವನ್ನು ಒಪ್ಪಿಕೊಂಡಿದ್ದು, ಆತನಿಂದ ಒಟ್ಟು 12.21 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ವಿರುದ್ಧ ಬಿ.ಎನ್.ಎಸ್ ಕಲಂ 333(1), 331(4) ಹಾಗೂ 305 ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

img 20260319 wa00157521974950078252480 ಮನೆ ಬಾಗಿಲು ಮುರಿದು ಕಳ್ಳತನ: ಗ್ರಾಮಸ್ಥರ ಚಾಣಾಕ್ಷತನದಿಂದ ಆರೋಪಿ ಬಂಧನ
img 20260319 wa00039148140770479347141 ಮನೆ ಬಾಗಿಲು ಮುರಿದು ಕಳ್ಳತನ: ಗ್ರಾಮಸ್ಥರ ಚಾಣಾಕ್ಷತನದಿಂದ ಆರೋಪಿ ಬಂಧನ

Leave a Reply

Your email address will not be published. Required fields are marked *