ಶಿವಮೊಗ್ಗ :ಹೊಸನಗರ ತಾಲ್ಲೂಕಿನ ಹೋಂ ಗಾರ್ಡ್ ಮಹೇಶ್ ಅವರ ಮೇಲೆ ಶಿವಮೊಗ್ಗ ಜಿಲ್ಲಾ ಹೋಂ ಗಾರ್ಡ್ ಕಮಾಂಡೆಂಟ್ ಚೇತನ್ ಕುಮಾರ್ ಅವರು ಏಕಾಏಕಿ ಹಲ್ಲೆ ನಡೆಸಿ ಕಬ್ಬಾಳ ಮೋಕ್ಷ ಮಾಡಿದ್ದಾರೆ ಎಂದು ಮಹೇಶ್ ಆರೋಪಿಸಿದ್ದಾರೆ.
ಶುಕ್ರವಾರ ಶಿವಮೊಗ್ಗದಲ್ಲಿರುವ ಜಿಲ್ಲಾ ಕಮಾಂಡೆಂಟ್ ಕಚೇರಿಯಲ್ಲಿ ಸಾರ್ವಜನಿಕರ ಎದುರೇ ಕಪಾಳಮೋಕ್ಷ ಮಾಡಲಾಗಿದೆ ಎಂದು ಅವರು ಆರೋಪಿಸುತ್ತಿದ್ದಾರೆ.
ಘಟನೆಯಿಂದ ನೋವನ್ನು ಅನುಭವಿಸಿದ ಮಹೇಶ್ ಅವರನ್ನು ಹೊಸನಗರದ ಸರ್ಕಾರಿ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ನಂತರ ತಾನು ಮಾನಸಿಕವಾಗಿ ಜರ್ಜರಿತನಾಗಿದ್ದೇನೆ ಎಂದು ಮಹೇಶ್ ತಮ್ಮ ಅಳಲನ್ನು ಮಾಧ್ಯಮದವರೆಗೆ ಹಂಚಿಕೊಂಡಿದ್ದಾರೆ.
ತನ್ನ ಸಾವಿಗೆ ಜಿಲ್ಲಾ ಕಮಾಂಡೆಂಟ್ ಚೇತನ್ ಕುಮಾರ್ ಅವರೇ ಕಾರಣರಾಗುತ್ತಾರೆ ಎಂದು ಕೂಡ ಮಹೇಶ್ ಆರೋಪಿಸಿದ್ದಾರೆ. ಕಳೆದ 15 ವರ್ಷಗಳಿಂದ ಹೆಂಡತಿ ಮಕ್ಕಳನ್ನು ಬಿಟ್ಟು ಹೋಂ ಗಾರ್ಡ್ ಸೇವೆ ಮಾಡುತ್ತಿದ್ದರೂ ಸಾರ್ವಜನಿಕವಾಗಿ ಅವಮಾನ ಮಾಡಿ ಕಪಾಳಮೋಕ್ಷ ಮಾಡುವ ಜೊತೆಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಅವರು ದೂರಿದ್ದಾರೆ.!!
ಹಲ್ಲೆಗೊಳಗಾದ ಮಹೇಶ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು ಹೆಚ್ ಆರ್ ಎಂ ಮೂಲಕ ಮಾಹಿತಿ ಕಳಿಸಿದ್ದರು ಕೂಡ 48 ಗಂಟೆಯ ಬಳಿಕ ದೊಡ್ಡಪೇಟೆ ಠಾಣೆಯಿಂದ ನಿನ್ನೆ ರಾತ್ರಿ ಬಂದು ಹೇಳಿಕೆ ಪಡೆದಿರುತ್ತಾರೆ. ಆದರೆ ಇನ್ನೂ FIR ಆಗಿರುವುದಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ.?
ನಾವು ಬಡವರು ನಾವು ಕೂಲಿ ಕೆಲಸ ಮಾಡುವವರು ಕಾಡಿನಲ್ಲಿ ವಾಸಿಸುವಂಥವರು, ನಮ್ಮ ಮಕ್ಕಳು ಮನೆಯಲ್ಲೇ ಇದ್ದಾರೆ ನಾವು ಆಸ್ಪತ್ರೆಯಲ್ಲಿದ್ದೇವೆ. ಮಕ್ಕಳನ್ನು ನೋಡಿಕೊಳ್ಳುವವರು ಯಾರು? ನನ್ನ ಯಜಮಾನರು ಕೂಲಿ ಕೆಲಸಕ್ಕೆ ಹೋಗುವವರು ನಮ್ಮ ಇಂದು ರಕ್ಷಣೆಗೆ ಯಾರು ಇಲ್ಲ. ನಮ್ಮ ಸಮಾಜದ ಮುಖಂಡರು ನಮಗೆ ಧೈರ್ಯ ಹೇಳುತ್ತಿದ್ದಾರೆ.
ಹಣ ಮತ್ತು ಅಧಿಕಾರ ಇರುವವರು ನಮ್ಮ ಮೇಲೆ ದೌರ್ಜನ್ಯವನ್ನು ಎಸಗುತ್ತಿದ್ದಾರೆ ನಮ್ಮ ಕಷ್ಟವನ್ನು ಯಾರ ಬಳಿ ಹೇಳುವುದು ಎಂದು ಮಹೇಶವರ ಪತ್ನಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ಘಟನೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸೂಕ್ತ ತನಿಖೆ ನಡೆಸಿ ನನಗೆ ನ್ಯಾಯ ಒದಗಿಸಿಕೊಡಬೇಕೆಂದು ಮಹೇಶ್ ಮತ್ತು ಕುಟುಂಬಸ್ಥರು ಆಗ್ರಹಿಸುತ್ತಿದ್ದಾರೆ.
















Leave a Reply