ಕೋಡೂರು : ವಿದ್ಯುತ್ ಶಾರ್ಟ್ ಸರ್ಕ್ಯೂಟ್ 250 ಕ್ಕೂ ಹೆಚ್ಚು ಅಡಿಕೆ ಮರಗಳು ಬೆಂಕಿಗಾಹುತಿ -ಸ್ಥಳಪರಿಶೀಲಿಸಿದ  ತಹಶೀಲ್ದಾರ್ ಭರತ್ ರಾಜ್

NAADI NEWS 20260306 214335 0000 ಕೋಡೂರು : ವಿದ್ಯುತ್ ಶಾರ್ಟ್ ಸರ್ಕ್ಯೂಟ್ 250 ಕ್ಕೂ ಹೆಚ್ಚು ಅಡಿಕೆ ಮರಗಳು ಬೆಂಕಿಗಾಹುತಿ -ಸ್ಥಳಪರಿಶೀಲಿಸಿದ  ತಹಶೀಲ್ದಾರ್ ಭರತ್ ರಾಜ್
Spread the love

ಸರ್ಕಾರ ದಿಂದ ಸೂಕ್ತ ಪರಿಹಾರದ ಭರವಸೆ

ಕೋಡೂರು (ರಿಪ್ಪನ್ ಪೇಟೆ) :  ಸುಮಾರು 250ಕ್ಕೂ ಹೆಚ್ಚು ಅಡಿಕೆ ಮರಗಳು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿಗೆ ಆಹುತಿಯಾಗಿದೆ. ವರ್ಷಗಳ ಕಾಲ ಶ್ರಮವಹಿಸಿ ಬೆಳಸಿದ ಬೆಳೆ ರೈತರ ಕೈ ತುಂಬುವ ಹೊತ್ತಿಗೆ ಇಂತಹ ದುರಂತದ ಘಟನೆ ಯಿಂದ ಬೆಳೆ ನಾಶವಾಗಿರುವುದು ಆ ಕುಟುಂಬಕ್ಕೆ ಭಾರಿ ಆಘಾತವನ್ನು ಉಂಟು ಮಾಡಿದ್ದು ಅವರ ಶ್ರಮವೆಲ್ಲವೂ ನೀರಿನಲ್ಲಿ ಕೊಚ್ಚಿ ಹೋದಂತಾಗಿದೆ.

ರಿಪ್ಪನ್ ಪೇಟೆ ಸಮೀಪದ ಕೋಡೂರು ಗ್ರಾಮ ಪಂಚಾಯಿತಿಯ ಕುಸುಗುಂಡಿ ಗ್ರಾಮದಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ನಿಂದ ಗ್ರಾಮದ ರೈತ ಚಂದ್ರಶೇಖರ್  ಬಿನ್ ಬಾಬುರಾಯ್ ಆಚಾರ್ ಅವರಿಗೆ ಸೇರಿದ ಅಡಿಕೆ ತೋಟ ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಆಗಿರುವ ಘಟನೆ ನಡೆದಿದೆ.


 ಆಗಿದ್ದೇನು?: ಸರ್ವೇ ನಂಬರ್ 26/1ರಲ್ಲಿ  ಕೃಷಿ ಭೂಮಿಯಲ್ಲಿ ಬೆಳೆದಿದ್ದ ಸುಮಾರು 250ಕ್ಕೂ ಹೆಚ್ಚು ಅಡಿಕೆ ಮರಗಳು ನಾಶವಾಗಿದೆ. ಮೆಸ್ಕಾಂನ ನಿರ್ಲಕ್ಷ್ಯ ದಿಂದ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ರೈತರ ತೋಟದಲ್ಲಿರುವ ವಿದ್ಯುತ್ ಕಂಬಕ್ಕೆ ಕೆಲವು ದಿನಗಳ ಹಿಂದೆ ಮರವೊಂದಕ್ಕೆ ಸ್ಪರ್ಶಗೊಂಡಿತು. ಈ ಬಗ್ಗೆ ಮೆಸ್ಕಾಂ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರು ಕೂಡ ಅಧಿಕಾರಿಗಳು ಅಥವಾ ಸಂಬಂಧ ಪಟ್ಟವರು ಕ್ರಮ ಕೈ ಕೈಗೊಂಡಿರುವುದಿಲ್ಲ ಆದ್ದರಿಂದ ಇಂತಹ ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಇದರಿಂದಾಗಿ ಅ ಮರ ವಿದ್ಯುತ್ ತಂತಿಗೆ ತಾಗಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ತೋಟದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು  ಕ್ಷಣಾರ್ಧದಲ್ಲಿ ಅಡಿಕೆ ಮರಗಳಿಗೆ ಬೆಂಕಿ ತಕ್ಷಣ ವ್ಯಾಪಿಸಿದೆ ಎಂದು ಹೇಳಲಾಗಿದೆ.  ಬಡ ರೈತನ ಅಡಿಕೆ ತೋಟ ಇದರಿಂದಾಗಿ ಸಂಪೂರ್ಣ ಹಾನಿಗೊಳಗಾಗಿದ್ದು ಈ ಘಟನೆ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ದೌಡಾಯಿಸಿದ್ದಾರೆ.

ಸ್ಥಳಕ್ಕೆ ತಹಶೀಲ್ದಾರ್ ಭೇಟಿ : ಈ ಘಟನೆ ನಡೆಯುತ್ತಿದ್ದಂತೆ ಮಾಹಿತಿ ಪಡೆದ ತಹಶೀಲ್ದಾರ್ ಭರತ್ ರಾಜ್ ಕೋಡೂರು ಗ್ರಾಮ ಪಂಚಾಯಿತಿಯ ಕುಸುಗುಂಡಿ ರೈತ ಚಂದ್ರಶೇಖರ್ ಅವರ ತೋಟಕ್ಕೆ ಭೇಟಿ ನೀಡಿ ಹಾನಿಗೊಳಗಾದ ಅಡಿಕೆ ಮರಗಳನ್ನು ವೀಕ್ಷಿಸಿ, ರೈತ ಕುಟುಂಬದಿಂದ ಮಾಹಿತಿಯನ್ನು ಪಡೆದರು ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಭರತ್ ರಾಜ್  ಹಾನಿಯ ಕುರಿತಂತೆ ಸಮಗ್ರ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗುವುದು ಸರ್ಕಾರದ ವತಿಯಿಂದ ರೈತರಿಗೆ ಸಿಗಬೇಕಾದ ಸೂಕ್ತ ಪರಿಹಾರವನ್ನು ಶೀಘ್ರವಾಗಿ ಕೊಡಿಸಲು ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕರ ಸೂಚನೆಯಂತೆ ಆಪ್ತ ಸಹಾಯಕ ಸಣ್ಣಕ್ಕಿ ಮಂಜು ಅವರು ತಹಶೀಲ್ದಾರ್ ಅವರ ಜೊತೆಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ರೈತರಿಗೆ ಶಾಸಕರ ಪರವಾಗಿ ಸಾಂತ್ವಾನವನ್ನು ಹೇಳಿದರು.

ಇಲಾಖೆ ಸಿಬ್ಬಂದಿಗಳು ಸ್ಥಳೀಯ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *