“In the Sanatana Dharma tradition, agriculture and trade hold a unique place. We worship the land as Mother Earth, and it is only fair that farmers who sow and reap receive a well-organized market,” said Swastishri Dr. Devendrakirti Bhattaraka Pattacharya of Hombuja Jain Math, speaking at the children’s festival held at Paranjyothi English Medium School.
ಹುಂಚ (ಹೊಂಬುಜ) : “ಭಾರತೀಯ ಸನಾತನ ಧರ್ಮ ಪರಂಪರೆಯಂತೆ ಕೃಷಿ ಸಂಸ್ಕೃತಿ ಮತ್ತು ವ್ಯಾಪಾರ ವ್ಯವಹಾರವು ವಿಶ್ವದಲ್ಲಿ ವಿಶಿಷ್ಟವಾದುದು. ವ್ಯವಹಾರ ಭೂಮಿಯನ್ನು ಭೂತಾಯಿ ಎಂದು ಪೂಜಿಸುವ ನಾವು, ಬೀಜಬಿತ್ತಿ ಫಸಲು ಪಡೆಯುವ ಕೃಷಿಕ, ರೈತಾಪಿ ಜನಸಮುದಾಯ ವ್ಯವಸ್ಥಿತ, ಮಾರುಕಟ್ಟೆಯನ್ನು ಅಪೇಕ್ಷಿಸುವುದು ನ್ಯಾಯೋಚಿತವಾಗಿದೆ” ಎಂದು ಹೊಂಬುಜ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಪರಂಜ್ಯೋತಿ ಆಂಗ್ಲಮಾಧ್ಯಮ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಏರ್ಪಡಿಸಿದ ಮಕ್ಕಳ ಸಂತೆಯನ್ನು ಉದ್ದೇಶಿಸಿ ಭಾರತೀಯ ಕೃಷಿ ಪದ್ಧತಿಯ ಕುರಿತು ಅವಲೋಕಿಸಿದರು.

“ಇಂದಿನ ಮಕ್ಕಳು ತಮ್ಮ ತಂದೆ ತಾಯಿ, ಪೋಷಕರೊಂದಿಗೆ ಊರಿನ ಸಂತೆಗೆ ಹೋಗುವುದಿದೆ. ಹಳ್ಳಿಯಲ್ಲಿ ಬೆಳೆದ ತರಕಾರಿ, ಧಾನ್ಯಗಳನ್ನು ಖರೀದಿಸುವುದನ್ನು ಮರೆಯಬಾರದು. ಮಕ್ಕಳ ಸಂತೆ ಭವಿತವ್ಯ ವಿಕಸನಕ್ಕೆ ನಾಂದಿ” ಎಂದು ಅನುಗ್ರಹ ಪ್ರವಚನವನ್ನು ಸ್ವಸ್ತಿಶ್ರೀಗಳವರು ದಯಪಾಲಿಸಿದರು.

ವಿವಿಧ ಬಗೆಯ ತರಕಾರಿ, ಧಾನ್ಯ, ತಿಂಡಿ ತಿನಸು, ತೆಂಗಿನಕಾಯಿ, ಫಲಗಳನ್ನು ಮಾರಾಟ ಮಾಡುವ ಪ್ರಕ್ರಿಯೆ ಆಕರ್ಷಕವಾಗಿತ್ತು. ಪರಂಜ್ಯೋತಿ ಆಂಗ್ಲಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಶ್ರೀ ಜಿ. ಮಂಜಪ್ಪ, ಶ್ರೀಮಠದ ಆಡಳಿತಾಧಿಕಾರಿ ಶ್ರೀ ಸಿ.ಡಿ. ಅಶೋಕ ಕುಮಾರ್, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪದ್ಮಾವತಿ, ಶಿಕ್ಷಕವೃಂದ, ಸಿಬ್ಬಂದಿ ವರ್ಗದವರು ‘ಮಕ್ಕಳ ಸಂತೆ’ ಆಯೋಜಿಸಿದ್ದರು. ಮಕ್ಕಳ ಪೋಷಕರು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶ್ರೀಗಳವರು ಸಂತೆಯ ಸುತ್ತ ಸರ್ವರೊಂದಿಗೆ ಮಾತನಾಡುತ್ತಾ ಸ್ಪೂರ್ತಿ ತುಂಬಿದರು.
#SHIVAMOGGA #HOSANAGARA #RIPPANPETE
















Leave a Reply