ನಮ್ಮ ಮುಂದಿನ ಪೀಳಿಗೆಗೆ ಸನಾತನ ಪರಂಪರೆಯ ಕುರಿತು ಜಾಗೃತಿ ಮೂಡಿಸಿ :ಲೋಹಿತಾಶ್ವ ಕೇದಿಗ್ಗೆರೆ

NAADI NEWS 20260209 190108 0000 ನಮ್ಮ ಮುಂದಿನ ಪೀಳಿಗೆಗೆ ಸನಾತನ ಪರಂಪರೆಯ ಕುರಿತು ಜಾಗೃತಿ ಮೂಡಿಸಿ :ಲೋಹಿತಾಶ್ವ ಕೇದಿಗ್ಗೆರೆ
Spread the love

ಹೊಸನಗರ (ಜಯನಗರ): ಸಾವಿರಾರು ವರ್ಷಗಳಿಂದ   ಪರಕೀಯರು ನಮ್ಮ ಮೇಲೆ ದಾಳಿ ಮಾಡಿದರು ನಮ್ಮ ಸಂಸ್ಕೃತಿಯನ್ನು ನಾಶ ಮಾಡಲು ಅವರಿಂದ ಸಾಧ್ಯವಾಗಲಿಲ್ಲ ಏಕೆಂದರೆ ಇದೊಂದು ಪುರಾತನ ಹಿಂದೂ ಸಂಸ್ಕೃತಿ ದೇಶವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಶಿವಮೊಗ್ಗ ವಿಭಾಗ ವ್ಯವಸ್ಥಾ ಪ್ರಮುಖರಾದ ಶ್ರೀ ಲೋಹಿತಾಶ್ವ ಕೇದಿಗ್ಗೆರೆ ಹೇಳಿದರು.


ಹಿಂದೂ ಸಂಗಮ ಆಯೋಜನ ಸಮಿತಿ ಹೊಸನಗರ ತಾಲೂಕು ಜಯನಗರ, ಸೊನಲೆ, ತ್ರಿಣಿವೆ ಮತ್ತು ರಾಮಚಂದ್ರಪುರ ಮಂಡಲವನ್ನೂ ಸೇರಿಸಿ ಜಯನಗರದಲ್ಲಿ ಆಯೋಜಿಸಿದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದ ಅವರು ಭಾರತ ಒಂದು ಶ್ರೀಮಂತಿಕೆಯ ದೇಶ ಇಲ್ಲಿನ ಪುರಾತನ ಸಂಸ್ಕೃತಿಯನ್ನು ಉಳಿಸುವುದರೊಂದಿಗೆ ನಮ್ಮ ಮುಂದಿನ ಪೀಳಿಗೆಗೆ ಧರ್ಮದ ಬಗ್ಗೆ ಜಾಗೃತಿ ಮೂಡಿಸಿ ಅವರನ್ನ ಬೆಳಸಬೇಕಾಗಿದೆ ಎಂದರು.

ವಿದೇಶಿಗರು, ಮೊಘಲರು ನಮ್ಮ ಪ್ರಾಚೀನ ಕಲೆ ಸಂಸ್ಕೃತಿ ಮತ್ತು ದೇಶದ ಸಂಪತ್ತನ್ನು ನಾಶ ಪಡಿಸಲು ಎಷ್ಟೋ ಪ್ರಯತ್ನಪಟ್ಟರು ಕೂಡ ಅವರ ನಿರೀಕ್ಷೆಪಟ್ಟಷ್ಟು ಯಶಸನ್ನು ಪಡೆಯಲಾಗಲಿಲ್ಲ ಯಾಕೆಂದರೆ ಭಾರತ ಎನ್ನುವುದು ದೈವಿಸಂಭೂತ ಶಕ್ತಿಯುಳ್ಳ ದೇಶ ಇಂತಹ ದೇಶದಲ್ಲಿ ಜನ್ಮ ತಾಳಿದ ನಾವೇ ಧನ್ಯರು ಎಂದರು.

ಹಿಂದೂ ಸಂಗಮವು ಕೇವಲ ಧಾರ್ಮಿಕ ಉತ್ಸವ ಮಾತ್ರವಲ್ಲ, ಅದು ಸಮಾಜದ ಏಕತೆ ಸಂಸ್ಕೃತಿ ಯ ಉಳಿವು ಮತ್ತು ಧಾರ್ಮಿಕ ಜಾಗೃತಿಯ ಪ್ರತೀಕವಾಗಿದೆ ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಧರ್ಮಭಾವನೆ, ರಾಷ್ಟ್ರಭಕ್ತಿ ಶಾಂತಿ ಮತ್ತು ಸಾಮಾಜಿಕ ಸಹಕಾರದ ಜೊತೆಗೆ ಸಾಮಾಜಿಕ ಏಕತೆಗಾಗಿ ಎಲ್ಲಾ ವರ್ಗದ ಜನರನ್ನು ಒಂದು ಗೂಡಿಸಲು ಉತ್ತಮವಾದ ವೇದಿಕೆ ಯಾಗುತ್ತದೆ ಎಂದರಲ್ಲದೆ


ಪ್ರಾಸ್ತಾವಿಕ ಮಾತನಾಡಿದ ಹನಿಯ ರವಿ ಪಂಚಪರಿವರ್ತನೆಗಳಾದ ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನ, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನ ಶೈಲಿ ಹಾಗೂ ನಾಗರೀಕ ಶಿಷ್ಟಾಚಾರ ಇವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು
ವಸುದೈವ ಕುಟುಂಬಕಂ ಎಂಬ ಭಾವನೆಯೊಂದಿಗೆ ಪರಮವೈಭವದ ಭಾರತಕ್ಕಾಗಿ ಹಿಂದೂ ಸಮಾಜವನ್ನು ಸಂಘಟಿಸೋಣ ಎಂದು ಹೇಳಿದರು.

ಶ್ರೀಮತಿ ಸುಮತಿ ಅವರು ಮಾತನಾಡಿ ಹಿಂದೂ ಸಮಾಜ ಒಗ್ಗಟಿನಿಂದ ಏನೇ ಕೆಲಸ ಮಾಡಿದರು ಅದು ಯಶಸ್ಸಿನದಡ ಸೇರುತ್ತದೆ ಹಾಗೂ ನಾವೆಲ್ಲರೂ ಸಾಮರಸ್ಯದ ಜೀವನವನ್ನು ನಡೆಸೋಣ ಎಂದರು. ಕಾರ್ಯಕ್ರಮದಲ್ಲಿ ಧರ್ಮೇಗೌಡ್ರು ಉಪಸ್ಥಿತಿ ಇದ್ದರು.

  ಜಯನಗರದ ಶ್ರೀ ಆಂಜನೇಯ ದೇವಸ್ಥಾನ ದಿಂದ ಶೋಭಾಯಾತ್ರೆ ಆರಂಭಗೊಂಡು ಮುಖ್ಯ ವೇದಿಕೆಯ ಹತ್ತಿರ ಗೋ ಪೋಜೆಯೊಂದಿಗೆ ಕಾರ್ಯಕ್ರಮ ಆರಂಭ ಗೊಂಡಿತು ಶೋಭಾ ಯಾತ್ರೆಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಭಾರತ ತೀಯಾ ಸಾಂಸ್ಕೃತಿಕ ವೇಷ ಭೂಷಣಗನ್ನು ತೊಡಸಿದ್ದು ಎಲ್ಲರ ಗಮನ ಸೆಳೆಯಿತು.


ಸ್ವಾತಿ ನಿರೂಪಿಸಿ. ಸುರೇಶ್ ಬಿ. ಕೆ ಸ್ವಾಗತಿಸಿ ವಿನಾಯಕ ಪ್ರಭು ವಂದಿಸಿದರು. ಕಲಾಭಾರತಿ ತಂಡವರು ಪ್ರಾರ್ಥನೆ ಮಾಡಿದರು.


Spread the love

Leave a Reply

Your email address will not be published. Required fields are marked *