ರಿಪ್ಪನ್ ಪೇಟೆ : ಪಟ್ಟಣದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀರಾಮ ಸಭಾ ಭವನದಲ್ಲಿ ಇದೆ ಬರುವ ಫೆ.7 ಶನಿವಾರ, ಬೆಳಿಗ್ಗೆ 09-00 ರಿಂದ 1-00ರವರೆಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರವು ನಡೆಯಲಿದೆ.
ರೋಟರಿ ಕ್ಲಬ್ ಮತ್ತು ಗೌಡ ಸಾರಸ್ವತ ಬ್ರಾಹ್ಮಣ ಸಮಾಜ, ಬಸವನ ಬ್ಯಾಣದ ಅಯ್ಯಪ್ಪ ಮೆಮೋರಿಯಲ್ ಟ್ರಸ್ಟ್, ಶ್ರೀ ವ್ಯಾಸ ಮಹರ್ಷಿ ಗುರುಕುಲ ಮತ್ತು ಸಂಘ – ಸಂಸ್ಥೆಗಳು, ರಿಪ್ಪನ್ ಪೇಟೆ ಹಾಗೂ ರೋಟರಿ ರಕ್ತ ನಿಧಿ, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಲಿದೆ.

ಅದೇ ವೇಳೆಯಲ್ಲಿ ಅದೇ ಸ್ಥಳದಲ್ಲಿ ರೋಬೋಟ್ ತಂತ್ರಜ್ಞಾನ ದಿಂದ ಮೊಣಕಾಲಿನ ಬದಲಿ ಶಸ್ತ್ರ ಚಿಕಿತ್ಸೆ ಮತ್ತು ಸ್ಪೋರ್ಟ್ಸ್ ಇಂಜುರಿ ಕುರಿತಾದ ತಪಾಸಣಾ ಶಿಬಿರವು ಇರುತ್ತದೆ.
ಈ ಕಾರ್ಯಕ್ರಮದ ಸದುಪಯೋಗ ಪಡೆಯಬೇಕೆಂದು ರೋಟರಿ ಕ್ಲಬ್ ರಿಪ್ಪನ್ ಪೇಟೆ ಕೋರಿದೆ.















Leave a Reply